Saturday 6 June 2015

ನಿಜವಾದ ಜೈಲಿನಿಂದ ಖೈದಿ ಮಧ್ಯದಲ್ಲಿ
ಪೆರೋಲ್ ಮೇಲೆ, ಜಾಮೀನ್ ಮೇಲೆ,
ಅಥವಾ ಶಿಕ್ಷೆಯ ಅವಧಿ ಮುಗಿದ ಮೇಲೆ
ಬಿಡುಗಡೆಯಾಗಿ ಬರಬಹುದು.
ಆದರೆ, ಸಂಸಾರವೆಂಬ ಜೈಲಿಂದ
ಬಿಡುಗಡೆ ಒಂದೇ ಸಲ, ಕಟ್ಟ ಕಡೆಗೆ.
*******ದಾರ್ಶನಿಕ
ಪರಸ್ಪರ
ಒಪ್ಪಿಗೆಯಿರುವ
ಅಪ್ಪುಗೆಯೇ
ಪರಮ ಸುಖ.
****ದಾರ್ಶನಿಕ
ಜೀವನವಿಡೀ ಸೋತೇ
ಬದುಕಿದ ವ್ಯಕ್ತಿ, ಕೊನೆಗೊಮ್ಮೆ
ಕಾಲಕ್ಕೆ ಶರಣಾದ.
ಅವನ ಸುತ್ತಲಿದ್ದವರು
ಅತ್ತು, ಅತ್ತು ಕಣ್ಣೀರಿಟ್ಟು
ಖುಶಿ ಪಟ್ಟರು, ಅಂತೂ
ಇವನನ್ನು ಕೊನೆಯದಾಗಿ
ಸೋಲಿಸಿ ಗೆದ್ದೆವೆಂದು.. frown emoticon
ಬಲು ಜೋರಿನಾಕೆ... smile emoticon
********************
ಎಲ್ಲರಂತವಳಲ್ಲ ಅವನಾಕೆ,
ಬಲು ಜೋರಿನಾಕೆ,
ಕಣ್ಣ ದೃಪ್ಟಿ ಕೆಂಪು ಉರಿ
ನಾಲಗೆ ಕತ್ತಿಯ ಅಲಗು,
ಮನಸ್ಸು ಗರ್ವದ ಗೂಡು
ಹೃದಯದಲಿ ತುಂಬಿದ ಕಹಿ
ಉಗುಳಿದರೆ ಊರೇ ಕಹಿ
ಕಾಡಿದರೆ ಎಂದೆಂದೂ
ಮರೆಯದ ಅತಿ ನೋವು,
ಮೊದಲೇ ಮುದುಡಿದ
ಮನಸ್ಸಿಗೆ ಕೊಡುವಳು
ಬರೇ ಮೇಲೆ ಬರೆ.
ಹೇಳುವುದೆಲ್ಲಾ ಹಸಿ ಸುಳ್ಳು
ಮತ್ತೆ ಹೇಳುವಳು ತನ್ನಂತೆ
ಸತ್ಯವಾದಿ ಇನ್ನಿಲ್ಲವೆಂದು,
ಸದಾ ಸಿಡಿ ಮಿಡಿ ಮುಖ
ಪರರ ಕಷ್ಟವ ಅರಿಯದ,
ಭಾವವೂ ತಿಳಿಯದ ಭಾವ
ಅವನು ನೆನಸಿದ ಕನಸುಗಳು
ಎಂದೂ ನನಸಾಗಲಿಲ್ಲ,,,,,,,ಎಂದೂ
ಮುಗಳ್ನಗು ಅವನನ್ನು ಸ್ವಾಗತಿಸಲಿಲ್ಲ,
ಅವನನ್ನೆಂದೂ ಆ ತೋಳುಗಳು
ಬಯಸಿ ಬಳಸಲಿಲ್ಲ, ಅವಳಿಗೆ
ಜಗಳವೇ ಜೀವನ, ಜೀವನವೇ ಕದನ,
ಸೋತು ಬಸವಳಿದು
ಕೊನೆಗೊಂದು ದಿನ
ಶೋಶಿತ ಗಂಡಸರ
ಸಂಘದ ಸದಸ್ಯನಾದ,
ಅಲ್ಲಿದ್ದ ತನಗಿಂತ ಅತಿ
ಶೋಶಿತರ ಕಂಡು
ತಣ್ಣಗಾದ......... frown emoticon
"ನೆನಪಿರಲಿ…
ಶ್ರೀಲಂಕಾವನ್ನು ಮೊದಲ ಬಾರಿಗೆ ಹೀನಾಯವಾಗಿ ಸೋಲಿಸಿದ್ದು ಸೌತ್ ಆಫ್ರಿಕವಲ್ಲ, 
ರಾಮ ಮತ್ತು ಆತನ ಸೇನೆ…" smile emoticon smile emoticon smile emoticon
*****************
ಇಪ್ಪತ್ತರಂತೆ ಎಪ್ಪತ್ತರಲ್ಲೂ
ನಿನ್ನ ನಾ ಪ್ರೀತಿಸಬೇಕು.
ನಿನ್ನ ಕಣ್ಣಿಂದ ಭಾವಗಳ ಕದ್ದು
ನಿತ್ಯ ನೂರಾರು ಕವಿತೆಗಳ ಗೀಚಬೇಕು....
ಸುಕ್ಕುಗಟ್ಟಿದ ಚರ್ಮಗಳಿಗೆ
ನೆನಪಿನ ಇಸ್ತ್ರಿಯ ಹಾಕಬೇಕು
ಬೆಳ್ಳಿ ಕೂದಲಿಗೆ ಮಲ್ಲಿಗೆಯ ಮುಡಿಸಿ
ಕಾಡುವ ಸುಂದರಿ ಮಾಡಬೇಕು
ನಮ್ಮಿಬ್ಬರ ಹ್ರದಯದ ಕೊನೆಯ ಮಿಡಿತಗಳನ್ನು
ನಮ್ಮ ಕಿವಿಗಳು ಒಟ್ಟಿಗೆ ಕೇಳಬೇಕು
ನಮ್ಮ ಕಳಕೊಂಡು ಮಕ್ಕಳು ಅಳುತಿರಲು
ಮಣ್ಣೊಳಗೆ ತಬ್ಬಿ ಮಲಗಬೇಕು
ಇಪ್ಪತ್ತರಂತೆ ಎಪ್ಪತ್ತರಲ್ಲು
ಗೆಳತಿ, ನಿನ್ನ ನಾ ಪ್ರೀತಿಸಬೇಕು...!!!
- ವಿಮಲ್ ನೆಲ್ಯಾಡಿ.