Friday, 14 November 2014

ಗಾಳಿ ಪಟ
ಸೂತ್ರ ಹರಿದ
ಗಾಳಿ ಪಟ,
ಗಾಳಿ ಒಯ್ದತ್ತ
ಪಯಣ.
ಎತ್ತಲೋ ಏನೋ
ಗೊತ್ತೂ ಇಲ್ಲ
ಗುರಿನೂ ಇಲ್ಲ,
ಬರೀ ಶೂನ್ಯ ಆಗಸ
ಬಿರುಸು ಉರಿ ಬಿಸಿಲು
ಹಾರುತಿದ್ದ ಹಕ್ಕಿಗಳು
ಕೇಳಿದವು
ಎಲ್ಲಿಗೆ ಪಯಣ?
ಹಾರಿತು ಪಟ
ಉತ್ತರಿಸಲೆನಗೆ
ಸಮಯವಿಲ್ಲವೆಂದು.
ಚೆದುರಿದ ಮೋಡಗಳು
ಕೇಳಿದವು ಎತ್ತ
ಹಾರಿ ಹೊರಟಿ ಎಂದು,
ಮಾತನಾಡದೆ ಹಾರಿತು
ಗಾಳಿಯ ಹೆಗಲನೇರಿ
ಸಮಯವಿಲ್ಲವೆಂದು.
ಸೂತ್ರವೂ ಇಲ್ಲ,
ಸೂತ್ರಧಾರನೂ ಇಲ್ಲ,
ಗೊತ್ತು ಗುರಿ
ಮೊದಲೇ ಇಲ್ಲ
ಹಾರಿ ಹಾರಿ
ನೀಲಾಕಾಶದ
ಶೂನ್ಯಾನಂತದಲ್ಲಿ
ಮರೆಯಾಗಿ ಹೋಯಿತು.
14.11.2014
LikeLike ·  · 

No comments:

Post a Comment