Friday 3 July 2015

ನಾನು 19ನೇ ತಾರೀಕಿನಂದು, Facebook friends ವಿಧಿವಶರಾಗಿ ಯಾರಿಗೂ ಗೊತ್ತಾಗದಿರುವುದರ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಅದನ್ನು ತಮಾಶೆಯಾಗಿ ಕಾಮೆಂಟ್ ಮಾಡಿದ್ದಾರೆ. ಅದೂ ಸರೀನೆ. ಯಾಕಂದರೆ, ಉತ್ತರ ಸಿಗದ ಪ್ರಶ್ನೆಗಳನ್ನು ತಲೆಕೆಡಿಸಿ ಕೊಳ್ಳದೆ ತಮಾಶೆಯಾಗಿ ತೆಗೆದುಕೊಂಡರೆ ಜೀವನ ಸುಖಮಯವಾಗಿರುತ್ತದೆ.
ಆದರೆ ಇಲ್ಲಿ ನೋಡಿ. ಸ್ನೇಹಿತರೊಬ್ಬರು ವಿಜಯ ಕರ್ನಾಟಕದಲ್ಲಿ ಬಂದ ಎರಡು ಲೇಖನಗಳ ಲಿಂಕ್ quote ಮಾಡಿದ್ದಾರೆ. ತುಂಬಾ informative ಆಗಿದೆ. ಈಗ ನಾವು ಬರೇ Facebook ಅಲ್ಲ. ಇತರ ನಮ್ಮ ಅಮೂಲ್ಯ ಮಾಹಿತಿಗಳು, ಉದಾ: net banking, digital ರೂಪದಲ್ಲಿ ಅಂತರ್ಜಾಲದಲ್ಲಿರುತ್ತವೆ.
ನಾವು ಸತ್ತ ನಂತರ ಈ ಮಾಹಿತಿಗಳು, passwords, ಇತ್ಯಾದಿಗಳು ದುರುಪಯೋಗವಾಗದೆ ನಾವು ಬಯಸಿದ ನಮ್ಮ ಉತ್ತರಾಧಿಕಾರಿಗಳಿಗೆ ಸಿಕ್ಕುವುದು ಅತೀ ಮುಖ್ಯ. ಈ ಬಗ್ಗೆ ಏನು ಮಾಡಬಹುದು ಎಂಬುದರ ಮಾಹಿತಿ ಈ ಲೇಖನಗಳಲ್ಲಿದೆ. ಇದರಲ್ಲಿ Facebook ಸಹ ಸೇರಿದೆ..... smile emoticon ಈ ಬಗ್ಗೆ ಕಾನೂನು ಪಂಡಿತರ ಸಲಹೆ ಪಡೆಯುವುದು ಸಹ ಅಗತ್ಯ.
Though the below link (in kannada) is not a direct answer, it may help about your acconts smile emoticon Read carefully and understand legal implications smile emoticon
http://www.vijaykarnatakaepaper.com/Details.aspx…
http://www.vijaykarnatakaepaper.com/Details.aspx… - try this link for a solution.

WWW.VIJAYKARNATAKAEPAPER.COM

ನಗು
ಮರೆತ
ಸಂಸಾರವೊಂದರ
ಸದಸ್ಯನಾಗಿ
ಜೀವಮಾನವಡೀ
ಕಳೆದ
ವ್ಯಕ್ತಿಯೊಬ್ಬ
ಸಾಯುವ
ಕಾಲದಲ್ಲಿ
ದೇವರಲ್ಲಿ
ಮೊರೆಯಿಟ್ಟ....
" ಓ
ದೇವರೇ
ಮುಂದಿನ
ಜನ್ಮವೊಂದಿದೆ
ಎನ್ನುವುದು
ಹೌದಾದರೆ,
ನನ್ನನ್ನೊಂದು
ಯಾವಾಗಲೂ
ನಕ್ಕು
ನಲಿಯುವ
ಸಂಸಾರದಲ್ಲಿ
ಹುಟ್ಟಿಸಪ್ಪಾ..... "
+++++++++
ನಾವು ನಿಜವಾಗಿ
ಒಳ್ಳೆಯವರಾದರೆ,
ಕೆಟ್ಟವರಲ್ಲಿರುವ
ಒಳ್ಳೆಯತನವನ್ನೂ
ಮರೆಯ ಬಾರದು.
***ದಾರ್ಶನಿಕ
ಮೀನಿನಂಥ ಕಣ್ಣುಗಳು,
ಬಿಲ್ಲಿನಂತಹ ಹುಬ್ಬುಗಳು,
ಸಂಪಿಗೆಯಂಥ ನಾಸಿಕ.
ಹರವಾದ ಹಣೆ,
ದುಂಬಿಗಳ ಹಿಂಡಿನಂಥ
ಹಾರುವ ಮುಂಗುರುಳು,
ತುಂಬು ನುಣುಪು ಕೆನ್ನೆಗಳು,
ಕೆನೆ ಹಾಲಿನಂಥ ಮೈಬಣ್ಣ.
ಇವೆಲ್ಲ ಇದ್ದ ದಂತದ
ಬೊಂಬೆಯನ್ನು ಮಾಡಿಕೊಂಡ
ಗುಂಡ ಬಾಳ ಸಂಗಾತಿಯೆಂದು,,
ನಂತರ ನೆನಪಾಯಿತು,
ಬಾದಾಮಿ ಆಕಾರದ ಕೆಂಪು
ಹೃದಯ ಎಲ್ಲಿ ಎಂದು,
ಹುಡುಕಿಯೇ ಹುಡುಕಿದ,
ಹುಡುಕಿಯೇ ಹುಡುಕಿದ,
ಇದ್ದರಲ್ಲವೇ ಸಿಗುವುದು,
ಸಿಗಲೇ ಇಲ್ಲ........

 frown emoticon
ಈ "ಸುಜ್ಞಾನ" ನೋಡಿ. ಸೋಲಿನಲ್ಲಿನ ನಗುವಿನ ಬಗ್ಗೆ. ಯಾರನ್ನು ಬೇಕಾದರೂ ಸೋಲಿಸ ಬಹುದಂತೆ, ಆದರೆ ಸೋಲಿನಲ್ಲಿಯೂ ನಗುವವನನ್ನು ಸೋಲಿಸಲು ಅಗುವುದಿಲ್ಲವಂತೆ.
ನಿಜ, ಸೋಲಿನಲ್ಲಿಯೂ ನಗ ಬಲ್ಲ ಮನುಷ್ಯ ಅತ್ಯಂತ ಧೈರ್ಯಶಾಲಿ. ಅವನಿಗೆ ಈಗಿನ ಸೋಲನ್ನು ಮೆಟ್ಟಿ ನಂತು, ಮುಂದೆ ಗೆದ್ದೇ ಗೆಲ್ಲುತ್ತೇನೆ ಎಂಬ ಛಲ ಹಾಗೂ ಧೈರ್ಯವಿರುತ್ತದೆ. ಅದಕ್ಕೇ ಆತ, ಸೋಲಿನಲ್ಲಿಯೂ ಧೃತಿಗೆಡದೆ ನಗುತ್ತಿರುತ್ತಾನೆ. ಅಂಥವನನ್ನು ಧೃತಿಗೆಡಿಸಿ ಸೋಲಿಸುವುದು ನಿಜವಾಗಿಯೂ ಅಸಾಧ್ಯವಾದ ವಿಷಯ.
ಫೇಸ್ಬುಕ್ ನಲ್ಲೇ ಇಂಥ ಸೂಪರ್ ಫೋಟೋ ಸಿಗೋದು.......
ಅತ್ಯಾಚಾರ.
ಉಬ್ಬು ತಗ್ಗುಗಳ
ಪ್ರದರ್ಶನ ಬೇಡ ಮಗಳೇ ಅಂದೆ,
ಅಂದ ಚೆಂದವನ್ನು
ಸ್ವಲ್ಪವಾದರೂ ಮುಚ್ಚಿಡಬೇಕಮ್ಮಾ ಎಂದೆ...
ಕೇಳಲಿಲ್ಲ,
ಇದೇ ಈಗಿನ ಫ್ಯಾಶನ್ ಅಪ್ಪಾ,
ಎಂದಳು
ಮೊದಲು ಹುಬ್ಬುಗಳು ಏರಿದವು
ಓರೆ ನೋಟಗಳು
ನೇರ ನೋಟಗಳಾದವು,
ಹಸಿದ ಹುಚ್ಚು ನಾಯಿಗಳು
ಎದುರಾದವು,
ಉಬ್ಬು ತಗ್ಗುಗಳನ್ನು ಬೆತ್ತಲಾಗಿಸಿ,
ಹರಿದು ಹಂಚಿ ತಿಂದು ತೇಗಿದವು.
ಮುಂಜಾನೆ ಊರ ಕೆರೆಯಲ್ಲಿ
ತೇಲಿದ ಹೆಣ ನನ್ನ ಕಣ್ಣುಗಳನ್ನು
ಬತ್ತಿಸಿತ್ತು....ತಲೆಮೇಲೆ
ಹೊತ್ತ ಕೈಗಳು ಮರಗಟ್ಟಿದ್ದವು.

21.06.15