Saturday, 6 June 2015

ಇಪ್ಪತ್ತರಂತೆ ಎಪ್ಪತ್ತರಲ್ಲೂ
ನಿನ್ನ ನಾ ಪ್ರೀತಿಸಬೇಕು.
ನಿನ್ನ ಕಣ್ಣಿಂದ ಭಾವಗಳ ಕದ್ದು
ನಿತ್ಯ ನೂರಾರು ಕವಿತೆಗಳ ಗೀಚಬೇಕು....
ಸುಕ್ಕುಗಟ್ಟಿದ ಚರ್ಮಗಳಿಗೆ
ನೆನಪಿನ ಇಸ್ತ್ರಿಯ ಹಾಕಬೇಕು
ಬೆಳ್ಳಿ ಕೂದಲಿಗೆ ಮಲ್ಲಿಗೆಯ ಮುಡಿಸಿ
ಕಾಡುವ ಸುಂದರಿ ಮಾಡಬೇಕು
ನಮ್ಮಿಬ್ಬರ ಹ್ರದಯದ ಕೊನೆಯ ಮಿಡಿತಗಳನ್ನು
ನಮ್ಮ ಕಿವಿಗಳು ಒಟ್ಟಿಗೆ ಕೇಳಬೇಕು
ನಮ್ಮ ಕಳಕೊಂಡು ಮಕ್ಕಳು ಅಳುತಿರಲು
ಮಣ್ಣೊಳಗೆ ತಬ್ಬಿ ಮಲಗಬೇಕು
ಇಪ್ಪತ್ತರಂತೆ ಎಪ್ಪತ್ತರಲ್ಲು
ಗೆಳತಿ, ನಿನ್ನ ನಾ ಪ್ರೀತಿಸಬೇಕು...!!!
- ವಿಮಲ್ ನೆಲ್ಯಾಡಿ.

No comments:

Post a Comment