Thursday, 3 September 2015

ಹೀಗೇ ಹೇಳುವುದಾದರೆ, "ಎಮ್ಮೆ ನಿನಗೆ ಸಾಟಿಯಿಲ್ಲ......." ಎಮ್ಮೆ ನೀನು ಸಹನೆಯ ಪ್ರತಿರೂಪ....... smile emoticon ಎಮ್ಮೆ ಸಹನಾ ಮೂರ್ತಿಯಷ್ಟೇ ಅಲ್ಲ, ಸ್ಥಿತ ಪ್ರಜ್ಞೆ ಸಹ. ನಮ್ಮ ಅಜ್ಜ ಒಂದು ಕಥೆ ಹೇಳುತ್ತಿದ್ದರು. ಒಂದು ಎಮ್ಮೆ ಸರಿಯಾಗಿ ಮೇದು ಹೊಟ್ಟೆ ತುಂಬಿಸಿಕೊಂಡು, ಕೆಸರು ಹೊಂಡದಲ್ಲಿ ಜಲ ವಿಹಾರ ಮಾಡುತ್ತಿತ್ತಂತೆ. ಅದರ ಮಾಲಕ ಅದಿನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಿ ಕೊಂಡು ಬಂದ. ಆರಾಮವಾಗಿ ಕೆಸರಿನಲ್ಲಿ ಹೊರಳಾಡುತ್ತಿದ್ದ ಎಮ್ಮೆಯನ್ನು ನೋಡಿ ಸಿಟ್ಟಿಗೆದ್ದು ಕೈಯಲ್ಲಿದ್ದ ಕೋಲಿನಿಂದ ಅದಕ್ಕೆ ಜೋರಾಗಿ ಒಂದೇಟು ಹೊಡೆದ.
ಎಮ್ಮೆ ಒಮ್ಮೆ ಹೊರಳಿ ಯೋಚಿಸಿತಂತೆ.....ಎಲ್ಲೋ ಯಾರೋ ಯಾರಿಗೋ ಹೊಡೀತಿದ್ದಾರೆ ಎಂದು ಕೊಂಡು ತನ್ನ ಆಟ ಮುಂದುವರೆಸಿತಂತೆ. ಅದರಿಂದ ಮತ್ತಷ್ಟು ಸಿಟ್ಟಿಗೆದ್ದ ಅದರ ಮಾಲಕ ಇನ್ನೊಂದು ಪೆಟ್ಟು ಕೊಟ್ಟ. ಆಗ ಎಮ್ಮೆ ಮತ್ತೆ ಯೋಚಿಸಿತು..."ಇಲ್ಲೇ ಹತ್ತಿರದಲ್ಲಿ, ಯಾರಿಗೋ ಹೊಡೆದ ಶಬ್ದವಾಗುತ್ತಿದೆ, ನನಗೇನು?" ಎಂದು ಕೊಂಡು ತನ್ನ ಆಟ ಮುಂದುವರೆಸಿತು.
ಆಗ ಮಾಲಕ ಮತ್ತಷ್ಟು ಸಿಟ್ಟಿಗೆದ್ದು, ಇನ್ನೊಂದು ಸಲ ಜೋರಾಗಿ ಬಾರಿಸಿದ. ಆಗ, ಎಮ್ಮೆಗೆ ಜ್ಞಾನೋದಯವಾಗಿ "ಅಯ್ಯೋ, ನನಗೇ ಹೊಡೀತಿದ್ದಾರೆ" ಎಂದು ಕೊಂಡು ಎದ್ದು ಓಡಿತು.
ಹೀಗಿದೆ ಎಮ್ಮೆಯ ಕತೆ. ಅದಕ್ಕೇ ಅಣ್ಣಾವ್ರು ಎಮ್ಮೆಯ ಮೇಲೆ ಸವಾರಿ ಮಾಡುತ್ತ..."ಎಮ್ಮೇ ನಿನಗೆ ಸಾಟಿ ಇಲ್ಲ......," ಎಂದು ಹಾಡಿದ್ದಿರ ಬೇಕು.......smile emoticon


No comments:

Post a Comment