Friday, 23 January 2015

ನವ್ಯ ಕವಿತೆ
ಚಿತ್ರ ವಿಚಿತ್ರ ಪದ ಪುಂಜಗಳು
ಓರೆ ಕೋರೆ ಸಾಲುಗಳು,
ಅರ್ಥವೇ ಆಗಲೊಲ್ಲದು,
ಬಲ್ಲವರೆಂದು ಕೊಳ್ಳುವವರೊಬ್ಬರು
ಇವನ ಪೆದ್ದುತನಕ್ಕೆ ನಕ್ಕರು,
ಪದೇ ಪದೇ ಓದು
ಅರ್ಥ ಆಗುತ್ತೆ ಅಂದರು!
ಪದೇ ಪದೇ ಓದಿದ,
ಹಿಂದು ಮುಂದಾಗಿ ಓದಿದ,
ಮುಂದು ಹಿಂದಾಗಿ ಓದಿದ,
ತಲೆ ಕೆರೆದುಕೊಂಡು ಓದಿದ,
ಕಣ್ಣು ಕಿರಿದಾಗಿಸಿ ನೋಡಿದ,
ಆದರೂ, ಅರ್ಥವೇ ಆಗದೆ ತೊಳಲಿದ
ಕೊನೇಗೆ, ...ಹೋಗಲಿ ಬಿಡು
ಇದು ನವ್ಯ ಕವಿತೆಯಿರಬೇಕು
ನನ್ನಂಥ ಪಾಮರನಿಗೆ
ಅರ್ಥವಾಗದಂಥದ್ದಿರಬೇಕು
ಎಂದುಕೊಂಡು ತಲೆ ಕೊಡವಿ
ಮಲಗಿ, ಬಿದ್ದ ಕನಸುಗಳಲ್ಲೇ
ಕವಿತೆಯ ಅರ್ಥ ಕಂಡು ಖುಶಿಯಾದ.

24.01.2015.... smile emoticon

Thursday, 22 January 2015

ನಗು......
ದಾಸರು ಹಾಡಿದರು,
"....ನಗುವು ಬರುತಿದೆ
ನನಗೆ ನಗುವು ಬರುತ್ತಿದೆ...." ಎಂದು,
ನನಗಂತೂ ನಗುವ ಮರೆತವರ
ಕಂಡು ನಗುವುಕ್ಕಿ ಬರುತ್ತಿದೆ,
ನುಡಿಯ ಮರೆತವರ ನೋಡಿ
ನಗದೆ ಇರಲಾರೆ ನಾನು.
ಅರಿವ ಮರೆತವರ ಕಂಡು
ಮತ್ತಷ್ಡು ನಗು ನನಗೆ,
ಕಂಡೂ ಕಾಣದೆ ಹೋಗುವರ
ಕಂಡು ಬೇಸರದ ನಗು ನನಗೆ.
ಬೇಕಾದ್ದೆಲ್ಲಾ ಇದ್ದೂ
ಸುಖ ಪಡದವರ ಕಂಡು
ಮರುಕದ ನಗು ನನಗೆ,
ತಾನೂ ನಗದೆ, ಪರರನ್ನೂ
ನಗಲು ಬಿಡದವರ ಕಂಡು
ಕೋಪದ ನಗು ನನಗೆ.
ಬಾಳು ಬಾಳದವರ ಕಂಡು
ಬಾರದ ನಗು ನನಗೆ,
ಎಲ್ಲಾ ಹಣೆ ಬರಹ ಎನ್ನುವರ ಕಂಡು
ಕನಿಕರದ ನಗು ನನಗೆ.
ನಕ್ಕು ನಗಿಸಿ ಬಾಳುವ
ಪರಿ ತಿಳಿಯಲಿ ಇವರಿಗೆ,
ಇಂದೋ ನಾಳೆಯೋ ಎನ್ನುವ
ಜೀವ ಇಂದಾದರೂ ನಗಲಿ,
ಬಾಳು ಸದಾ ಹಗುರಾಗಲಿ
ಓ ನನ್ನ ದೇವರೇ........
21.01.2015
ಆಶಾವಾದಿ ಮತ್ತು ನಿರಾಶಾವಾದಿಗಳಲ್ಲಿರುವ
ವ್ಯತ್ಯಾಸವನ್ನು ಹೇಳುವ ಈ ಸಾಮಾನ್ಯ ವಾಕ್ಯಗಳು ಇವತ್ತು ಯಾಕೋ ನೆನಪಾದವು.
"ಆಶಾವಾದಿ, ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರಿದ್ದರೆ, 'ಈ ಗ್ಲಾಸ್ ಅರ್ಧ ತುಂಬಿದೆ' ಎನ್ನುತ್ತಾನೆ.
ಆದರೆ, ನಿರಾಶಾವಾದಿ ಇದನ್ನೇ 'ಈ ಗ್ಲಾಸ್ ಅರ್ಧದಷ್ಟು ಖಾಲಿ ಇದೆ' ಎನ್ನುತ್ತಾನೆ."
***************

20.01.2015
ಸ್ವಾರ್ಥ ತುಂಬಿದ ವ್ಯಕ್ತಿಗಳು
ತೋರಿಸುವ ಪ್ರೀತಿ ಸಹ
ಅವರ ಸ್ವಾರ್ಥದ ಒಂದು ರೂಪ.
ಸ್ವಂತದ ರಾಗ ದ್ವೇಷಗಳು
ಮುಂದೆ ಬಂದಾಗ ಅವರ ಈ
ತೋರಿಕೆಯ ಪ್ರೀತಿಯೂ
ಮಾಯವಾಗುತ್ತದೆ.
****ದಾರ್ಶನಿಕ

20.01.2015
ಪ್ರಾರ್ಥನೆ.
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
"ದೇವರೇ, ಕೊನೇ ತನಕ ಕಣ್ಣು ಕೈ ಕಾಲುಗಳ
ಸುಖ ಕೊಟ್ಟು ಕಾಪಾಡಪ್ಪಾ"
ಗಮನಿಸಿ, ಈ ಸರಳ ಪ್ರಾರ್ಥನೆಯಲ್ಲಿ "ಕಿವಿ"
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣದಾದರೆ, ಕೈ ಕಾಲುಗಳು
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಆದರೆ, ಕಿವಿ ಕೇಳಿಸದಿದ್ದರೆ ಅಂತಹ ತೊಂದರೆಯೇನೂ
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... smile emoticon
ಹೀಗೆ, ಹಿರಿಯರು ಮಾಡುತ್ತಿದ್ದ ಈ ಸರಳವಾದ
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ 

20.01.2015
ಕಾಗೆ ಪ್ರಸಾದ
ಕಾವಿಯುಟ್ಟು
ಸ್ವಾಮಿಯಾದೆನೆಂದು
ಕಾಡಿಗೆ ನಡೆದ.
ಕಂದ ಮೂಲ ತಿಂದ
ಮರದ ಕೆಳಗೆ ಕೂತು
ಕಣ್ಣು ಮುಚ್ಚಿ
ಧ್ಯಾನ ಮಾಡಿದ
ತಾನೇ ವಿಶ್ವಾಮಿತ್ರ
ಮೇನಕೆ ಬರುವಳೆಂದು
ಕಾದೇ ಕಾದ,
ಮೇನಕೆ ಬರಲಿಲ್ಲ
ಆದರೆ ಕಾಗೆ ಬಂತು
ಮರದ ಮೇಲೆ ಕೂತು
ತಲೆ ಮೇಲೆ ಹಾಕಿತು
ಪ್ರಸಾದ.....
ತಲೆ ಮೇಲೆ ಕೈಯಾಡಿಸಿ
ತಿಕ್ಕಿ, ಛೀ ಥೂ ಎಂದು
ಮಾಡಬಾರದ್ದನ್ನೂ ಮಾಡಿ
ಎದ್ದು ಕಾವಿ, ಕಾಲು
ಎರಡೂ ಝಾಡಿಸಿದ
ಮನೆಯಲ್ಲಿರುವ
ತನ್ನಾಕೆಯೇ ತನ್ನ
ಮೇನಕೆ ಎಂದು ಕೊಂಡು
ತಿರುಗಿ ನೋಡದೆ
ಓಡಿದ, ಹಿಡಿದು
ಊರ ದಾರಿ.....
17.01.2015
Like ·  · 
ಹೀಗೊಂದು ಅಜ್ಜಿ....... smile emoticon
*************************
ಮೊಮ್ಮಕ್ಕಳು ಚಿಕ್ಕವಿರುವಾಗ,
"ನನ್ನ ಚಿನ್ನ, ನನ್ನ ಬಂಗಾರ" ಎಂದೆಲ್ಲಾ
ಮುದ್ದಾಡುತ್ತಿದ್ದ ಅಜ್ಜಿ, ಈಗ ಮೊಮ್ಮಕ್ಕಳು
ಸ್ವಲ್ಪ ದೊಡ್ಡವರಾಗಿ TV remote
ಅಜ್ಜಿಯಿಂದ ಕಿತ್ಕೊಂಡು ಕಾರ್ಟೂನ್
ಚಾನಲ್ಸ್ ನೋಡಲು ಶುರು ಮಾಡಿದಾಗ,
"ಅಯ್ಯೋ, ಇವು,ಮುಂ ......ವು, ನನಗೆ ಕನ್ನಡ
ಸೀರಿಯಲ್ಸ್ ನೋಡಲು ಬಿಡುತ್ತಿಲ್ಲವಲ್ಲಪ್ಪಾ,
ಅಶ್ವಿನಿ ಏನಾದಳೋ, ಪುಟ್ಟ ಗೌರಿ ಕತೆ
ಏನಾಯಿತೋ" ಎಂದು ಅಲವತ್ತು ಕೊಳ್ಳುತ್ತಿದೆ..... smile emoticon
+++++++++


15.01.2015
Horrible & crazy Painting (ಕಥೆ ಕವನ ಗ್ರೂಪಿನ ಸದಸ್ಯೆ ಶ್ರೀಮತಿ ಗೋಪಾಲಕೃಷ್ಣ ಅವರ
ಗೋಡೆಯಿಂದ ಶೇರ್ ಮಾಡಿದ್ದು)
ಪ್ರೇಮ ಗುಲಾಬಿಯ ಮುಳ್ಳುಗಳು ಈ ರೀತಿ ಚುಚ್ಚಿ ಸೀಳಿದರೆ, ಈ ಭೂಮಿಯ ಮೇಲೆ ಎಂದೂ, ಯಾರೂ ಯಾರನ್ನೂ ಪ್ರೀತಿಸಲಿಕ್ಕಿಲ್ಲ........

12.01.2015
ಪ್ರಶ್ನೆ:- ಭಾರತದ ಅತಿ ದೊಡ್ಡ ಬಯಲು ಶೌಚಾಲಯ
ಯಾವುದು ಮತ್ತು ಎಲ್ಲಿದೆ?
ಉತ್ತರ:- "ಭಾರತೀಯ ರೈಲ್ವೆ"...ಅದೆಷ್ಟೋ ಸಾವಿರ
kms ಉದ್ದವಿರುವ ರೈಲ್ವೇ ಹಳಿಗಳ
ನಡುವೆ ಇದೆ.
**************

11.01.2015
ಎಲ್ಲರೊಡನೆಯೂ ಸೌಜನ್ಯದಿಂದ
ವರ್ತಿಸಬೇಕನ್ನುವುದು ಅಪೇಕ್ಷಣೀಯ.
ಆದರೆ, ಸಹಜವಾಗಿ ಈ ಸೌಜನ್ಯತೆ,
ಆ ವ್ಯಕ್ತಿಗಳ ಬಗ್ಗೆ ನಮಗಿರುವ
ಸಹನೆ ಅಥವಾ ಅಸಹನೆಯ
ಭಾವನೆಗಳ ಮೇಲೆ ಅವಲಂಬಿತವಿರುತ್ತದೆ.
******ದಾರ್ಶನಿಕ.

Thursday, 8 January 2015

ಬದುಕು.
ತನಗಾರೂ ಇಲ್ಲ,
ಎಲ್ಲಾ ಹೋಯಿತು, ಸೋತು ಬಿಟ್ಟೆ,
ನಂಬಿದವರೆಲ್ಲಾ ಕೈ ಕೊಟ್ಟರು,
ಬಾಬಾ ಹೇಳಿದ್ದೂ ನಡೆಯಲಿಲ್ಲ,
ಪೂಜಾರಯ್ಯನ ಉಪದೇಶ ಫಲಿಸಲಿಲ್ಲ,
ಇನ್ನೇಕೆ ಬದುಕಲಿ, ಯಾಕಾಗಿ ಇರಲಿ,
ಇನ್ನುಳಿದುದೊಂದೇ ದಾರಿ, ಅದೇ ಕೊನೆಯ ದಾರಿ,
ಎಲ್ಲಾ ಮೋಕ್ಷ, ಕಡೆಗೆ ನಿರ್ವಾಣ ,
ನಡೆದೇ ಬಿಟ್ಟ ಗಂಗಮ್ಮನೆಡೆಗೆ ಮುಖಮಾಡಿ....
ದಾರಿಯಲ್ಲೊಂದು ಬೋಳು ಮರ,
ಆ ಮರದ ಕೆಳಗೊಬ್ಬ ತೊಂಭತ್ತು ವರ್ಷದ ಮುದುಕ,
ಕೂತಿದ್ದ ಬೀಡಿ ಸೇದಿಕೊಂಡು, ಕೆಮ್ಮಿಕೊಂಡು,
ಅಡ್ಡ ಹಾಕಿದ ಇವನನ್ನು, "ಯಪ್ಪಾ, ಒಂದು ರುಪಾಯಿ ಕೊಡು,
ಇನ್ನೆರಡು ಬೀಡಿ ಸೇದ್ತೀನಿ......."
ಇವನಂದ, "ಏ ಅಜ್ಜಾ, ಸಾಯಾಕ್ ಬಿದ್ದಿ, ಇನ್ಯಾಕ್ ಬೀಡಿ,
ನಾನೂ ಹೊಂಟೀನಿ, ಬಾ, ಇಬ್ಬರೂ ಹೊಳ್ಯಾಗ್ ಬಿದ್ದು ಸಾಯೋಣು"
ಬೆಚ್ಚಿ ಬಿದ್ದ ಮುದುಕ. "ನನ್ನ ತಲೆ ನೆಟ್ಟಗೈತಲೇ, ನಾ ಯಾಕ್ ಸಾಯಲಿ,
ನೀ ಒಂದು ರುಪಾಯಿ ಕೊಡ್ತಿಯಾದರೆ ಕೊಡು....ಇನ್ನೆರಡು ಬೀಡಿ ಎಳೆದು
ಮನೀಗ್ ಹೊಕ್ಕೀನಿ, ನನ್ ಮುದ್ಕಿ ಕಾಯಾಕ್ ಕುಂತಾಳೆ...ಆಕೆ ಜತೆ
ಇನ್ ಹತ್ತು ವರ್ಷರೀ ಬದಕಬೇಕ್ ನಂಗೆ" ... ಅಂದ ತೊಂಭತ್ತು ವರ್ಷದ ಮುದುಕ.... !!!!
ಜ್ಙಾನೋದಯವಾಯಿತಿವನಿಗೆ..."ತೊಂಭತ್ತು ವರ್ಷದ ಮುದುಕ, ಇನ್ನು
ಹತ್ತು ವರ್ಷ ಬದುಕ ಬೇಕಂತೆ, ಇವ್ನ ಮುದ್ಕಿ ಜತೆ......."
ಇವನಿಗೂ ನೆನಪಾಯಿತು, ಮನೆಯಲ್ಲಿ ಹೆಂಡತಿ ಕಾಯುತಿದ್ದಾಳೆ ಎಂದು,..
ಸಾವನ್ನೂ ಮರೆತ, ನದಿಯನ್ನೂ ಮರೆತ,
ತಲೆ ಕೊಡವಿಕೊಂದು ತಿರುಗಿ ಓಡಿದ ಮನೆಯ ಕಡೆ ಹಿಂದೆ ನೋಡದೆ..... !!!!
08.01.2015

Think well before opening Joint Account with........ !!!!!!!
ಗಂಡು ಹೆಣ್ಣುಗಳಲ್ಲಿ,
ಎಲ್ಲಕ್ಕಿಂತ ಸೌಂದರ್ಯದ ಆಕರ್ಷಣೆಯೇ ಜಾಸ್ತಿ
ಎನ್ನುವುದು ನಿಜವಾದರೂ,
ಅದನ್ನು ತತ್ವಜ್ಙಾನಿಗಳು, ಅದರ್ಶವಾದಿಗಳು
ಎಂದೂ ಒಪ್ಪಿ ಕೊಳ್ಲುವುದಿಲ್ಲ.
ಆದರೆ, ಇದು ನಿಜವೆಂದು
ಸಾಮಾನ್ಯ ಮನುಷ್ಯನ ಅಂತರಂಗಕ್ಕೆ ಗೊತ್ತಿರುತ್ತದೆ.
*******ದಾರ್ಶನಿಕ

Wednesday, 7 January 2015

ಅಡುಗೆ ಏನೇ ಇರಲಿ, ಹೇಗೇ ಇರಲಿ,
ಬಡಿಸುವ ಮನೆಯಾಕೆಯ
ಮುಖದಲ್ಲಿ ನಗುವಿದ್ದರೆ,
ಎಂಥ ಅಡಿಗೆಯೂ ರುಚಿಯಾಗೇ ಇರುತ್ತದೆ. 
***ದಾರ್ಶನಿಕ
ಹೆಚ್ಚಾಗಿ ಹಳೆಯ ಸವಿ ನೆನಪುಗಳು
ಜೀವನಕ್ಕೆ ಟಾನಿಕ್ ಗುಳಿಗೆಗಳಂತಿರಬೇಕು,
ಇಳೆಯಲ್ಲಿ ಉಳಿದ ದಿನಗಳನ್ನು
ಕಳೆಯಲು ಚೇತನವಾಗಿರಬೇಕು.
*****ದಾರ್ಶನಿಕ

ಲಜ್ಜಿತೆ 

ಲಜ್ಜೆ ತುಂಬಿದ ಸೌಂದರ್ಯ,
ಮುದ ನೀಡುವ ಮಂದಹಾಸ,
ಹೃದಯಕ್ಕೇ ಲಗ್ಗೆ ಇಟ್ಟಿರುವಿ
ನೀ ಕಣ್ನೆವೆ ಮುಚ್ಚಿ ನಕ್ಕರೂ
ನನಗಂತೂ ಗೊತ್ತೇ ಗೊತ್ತು
ನಿನ್ನ ಕಣ್ಣಾಲಿಗಳಲಿರುವುದು
ಎಂದೆಂದೂ ನಾನೇ ಎಂದು,
ಎಂದೆಂದೂ ನಾನೆ ನಿನ್ನವನೆಂದು.

06.01.2015
ಈಗ ಜಾಣನಾಗಿರುವ ವ್ಯಕ್ತಿ
ತಾನು ದಡ್ಡನಾಗಿದ್ದ ಕಾಲವನ್ನು
ಜಾಣತನದಿಂದ ಮರೆತು ಬಿಟ್ಟಿರುತ್ತಾನೆ.
******ದಾರ್ಶನಿಕ.
ಜಿರಳೆ ಹೊಡೆಯಲು ಧೈರ್ಯದಿಂದ ತಯಾರಾಗಿ ನಿಂತಿರುವ ಸುಂದರಿ......


ಬಹಳ ಅಮೂಲ್ಯವಾದ  ಸಲಹೆಗಳು . ಪಾಲಿಸಿದರೆ ಬದುಕು ಬಂಗಾರ 

Sunday, 4 January 2015

ಸ್ಡತಃ ನಗುವುದನ್ನು ಮರೆತವರು,
ತಮ್ಮ ಸುತ್ತಮುತ್ತಲಿನವರ
ನಗುವನ್ನೂ ಮರೆಸಿ ಬಿಡುತ್ತಾರೆ.
****ದಾರ್ಶನಿಕ

04.01.2015

ಅಜ್ಜ - ಅಜ್ಜಿ 

ಅಜ್ಜ ಅಜ್ಜಿ ಅದೆಷ್ಟು ಸಂತೋಷದಿಂದ
Selfy ಫೋಟೋ ತೊಗೊಳ್ತಾ
ಇದ್ದಾರೆ, ನೋಡಿ. ಅಜ್ಜಿ ಕೊಡ್ತಾ
ಇರೋ ಪೋಸ್ ಹೇಗಿದೆ? ಅಜ್ಜನ
ಮುಖದಲ್ಲಿ ಅದೆಂಥ ಪ್ರೀತಿಯ
ಮಂದಹಾಸವಿದೆ......... 
ದೇಹಗಳಿಗೆ ವಯಸ್ಸಾದರೇನಂತೆ...........
ಹ್ರದಯ ಹ್ರದಯಗಳ ನಡುವಿನ
ಪ್ರೀತಿಗೆ ಯಾವತ್ತೂ ವಯಸ್ಸಾಗದು
ಆ ಪ್ರೀತಿ ಸದಾ ಹೊಸದು,
ಆ ಪ್ರೀತಿ ಸದಾ ಹಸಿರು.
ಆ ಪ್ರೀತಿಯೇ ಮುಪ್ಪಿನ ಉಸಿರು.....

03.01.2015
ಮನುಷ್ನನ ಹೃದಯ ಸೌಂದರ್ಯ
ದೇವರಿದ್ದಂತೆ. ಕಣ್ಣಿಗೆ ಕಾಣಿಸುವುದಿಲ್ಲ.
ಅನುಭವಿಸಿಯೇ ಅರಿಯ ಬೇಕು.
******ದಾರ್ಶನಿಕ.
Happy New Year - 2015


Merry and Happy New Year 2015
to all my Friends. Be happy and 
cheerful all through the year with
broad smiles writ large on your
faces, sublime love and affection
overflowed in your hearts, lest
your kith and kin also can reap
the fruits of your love and happiness.


01.01.2015




ಹೊಸ ವರ್ಷ ಎಲ್ಲರಿಗೂ ಶುಭವಾಗಲಿ
++++++++++++++++++++

ಗತ ವರ್ಷವನ್ನು
ಅಳಿಸುತ್ತಿರುವ
ಈ ಅಲೆ
ಹೊಸ ವರ್ಷದ
ಕೊನೆಯ ವರೆಗೆ
ಮುಂದೆ ಬಾರದಿರಲಿ,
ಕಳೆದ ವರ್ಷ
ಕಷ್ಟವೆಂದಾದರೆ
ಸಂತೋಷ ಪಡುವ
ಕಷ್ಟ ಕಳೆಯಿತೆಂದು
ಹೊಸ ವರ್ಷದಲ್ಲಿ
ಹಾಲ ನೊರೆ
ಜೇನ ಹೊಳೆ
ತುಂಬಿ ಹರಿಯಲಿ
ರವಿ ತಂಪಾಗಿಸಲಿ
ಚಂದಿರ ಬಿಸಿಯೇರಿಸಲಿ
ದುಗುಡ ದುಮ್ಮಾನಗಳು
ತೇಲಿ ಹೋಗಲಿ
ಇರುಳು ಹಗಲಿನ
ಎಲ್ಲಾ ಕನಸುಗಳು
ಸುಖದ ನನಸುಗಳಾಗಲಿ
ರಾಗ ದ್ವೇಷಗಳು
ಕಳೆದು ಮಾಯವಾಗಲಿ,
ಸ್ನೇಹ ಪ್ರೇಮಗಳಧ್ದೇ
ಸರ್ವ ಸಾಮ್ರಾಜ್ಯವಾಗಲಿ
ಭುವಿ ಹಸಿರಾಗಲಿ.
ಆಗಸದೆತ್ತರಕ್ಕೆ
ಆಸೆಗಳು ಚಿಗುರಿ,
ಆಸೆಗಳು ಅರಳಿ
ಪುಷ್ಪ ಫಲಗಳಾಗಿ
ಮಡಿಲು ತುಂಬಲಿ
ಎಲ್ಲರ ಬದುಕೂ
ಬಾಳೂ ಬಂಗಾರವಾಗಲಿ.
+++++++++
31.12.2014


Good morning.
Let us bid farewell to 2014 with a hearty smile.

31.12.2014
ಕಾವ್ಯ ಸುಂದರಿ 


ಬಿಲ್ಲಿನಂತಹ ಹುಬ್ಬು, ಮೀನಿನಂತಹ ಕಣ್ನುಗಳು, ಸಂಪಿಗೆಯಂತೆ ನಾಸಿಕ,
ತೊಂಡೆ ಹಣ್ನಿನಂತಹ ತುಟಿಗಳು......ಎಂದೆಲ್ಲಾ ಹಿಂದಿನ ಕಾಲದ ಕವಿಗಳು ವರ್ಣಿಸಿದ್ದ
ಸುಂದರಿ ಹೀಗಿದ್ದಿರ ಬಹುದೇ?

01.01.2015

ಚತುರ ಸಂಭಾಷಣೆ 

ಕೆಲವು ಸಿನೆಮಾ ಮತ್ತು ಸೀರಿಯಲ್ dialogue writers ಬರೆಯುವ ಸಂಭಾಷಣೆಗಳು ಒಂಥರಾ ಮಜವಾಗಿಯೂ, witty ಆಗಿಯೂ ಇರುತ್ತವೆ. ಹಾಗೇ ಕಿವಿಯ ಮೇಲೆ ಬಿದ್ದ (ಯಾಕಂದರೆ ನಾನು ಸೀರಿಯಲ್ಸ್ ಹೆಚ್ಚು ನೋಡೋಲ್ಲ) ಒಂದು ಕನ್ನಡ ಸೀರಿಯಲ್ dialogue ತುಣುಕು ಹೀಗಿದೆ ನೋಡಿ...
"ಕಲ್ಲು ಯಾರೋ ಹೊಡೆಯುತ್ತಾರೆ, ಹೊಡೆಯಲಿ.
ಹಣ್ಣು ಬಿದ್ದರೆ ಆರಿಸಿ ಕೊಳ್ಳೋಣ. ಏಟು ಬೀಳುವ ಹಾಗಿದ್ದರೆ, ತಪ್ಪಿಸಿ ಕೊಳ್ಳೋಣ, ಬೇಗ ಬಾ......"
ಹೇಗಿದೆ?

01.01.2015