Sunday, 4 January 2015

ಹೊಸ ವರ್ಷ ಎಲ್ಲರಿಗೂ ಶುಭವಾಗಲಿ
++++++++++++++++++++

ಗತ ವರ್ಷವನ್ನು
ಅಳಿಸುತ್ತಿರುವ
ಈ ಅಲೆ
ಹೊಸ ವರ್ಷದ
ಕೊನೆಯ ವರೆಗೆ
ಮುಂದೆ ಬಾರದಿರಲಿ,
ಕಳೆದ ವರ್ಷ
ಕಷ್ಟವೆಂದಾದರೆ
ಸಂತೋಷ ಪಡುವ
ಕಷ್ಟ ಕಳೆಯಿತೆಂದು
ಹೊಸ ವರ್ಷದಲ್ಲಿ
ಹಾಲ ನೊರೆ
ಜೇನ ಹೊಳೆ
ತುಂಬಿ ಹರಿಯಲಿ
ರವಿ ತಂಪಾಗಿಸಲಿ
ಚಂದಿರ ಬಿಸಿಯೇರಿಸಲಿ
ದುಗುಡ ದುಮ್ಮಾನಗಳು
ತೇಲಿ ಹೋಗಲಿ
ಇರುಳು ಹಗಲಿನ
ಎಲ್ಲಾ ಕನಸುಗಳು
ಸುಖದ ನನಸುಗಳಾಗಲಿ
ರಾಗ ದ್ವೇಷಗಳು
ಕಳೆದು ಮಾಯವಾಗಲಿ,
ಸ್ನೇಹ ಪ್ರೇಮಗಳಧ್ದೇ
ಸರ್ವ ಸಾಮ್ರಾಜ್ಯವಾಗಲಿ
ಭುವಿ ಹಸಿರಾಗಲಿ.
ಆಗಸದೆತ್ತರಕ್ಕೆ
ಆಸೆಗಳು ಚಿಗುರಿ,
ಆಸೆಗಳು ಅರಳಿ
ಪುಷ್ಪ ಫಲಗಳಾಗಿ
ಮಡಿಲು ತುಂಬಲಿ
ಎಲ್ಲರ ಬದುಕೂ
ಬಾಳೂ ಬಂಗಾರವಾಗಲಿ.
+++++++++
31.12.2014

No comments:

Post a Comment