Thursday, 22 January 2015

ನಗು......
ದಾಸರು ಹಾಡಿದರು,
"....ನಗುವು ಬರುತಿದೆ
ನನಗೆ ನಗುವು ಬರುತ್ತಿದೆ...." ಎಂದು,
ನನಗಂತೂ ನಗುವ ಮರೆತವರ
ಕಂಡು ನಗುವುಕ್ಕಿ ಬರುತ್ತಿದೆ,
ನುಡಿಯ ಮರೆತವರ ನೋಡಿ
ನಗದೆ ಇರಲಾರೆ ನಾನು.
ಅರಿವ ಮರೆತವರ ಕಂಡು
ಮತ್ತಷ್ಡು ನಗು ನನಗೆ,
ಕಂಡೂ ಕಾಣದೆ ಹೋಗುವರ
ಕಂಡು ಬೇಸರದ ನಗು ನನಗೆ.
ಬೇಕಾದ್ದೆಲ್ಲಾ ಇದ್ದೂ
ಸುಖ ಪಡದವರ ಕಂಡು
ಮರುಕದ ನಗು ನನಗೆ,
ತಾನೂ ನಗದೆ, ಪರರನ್ನೂ
ನಗಲು ಬಿಡದವರ ಕಂಡು
ಕೋಪದ ನಗು ನನಗೆ.
ಬಾಳು ಬಾಳದವರ ಕಂಡು
ಬಾರದ ನಗು ನನಗೆ,
ಎಲ್ಲಾ ಹಣೆ ಬರಹ ಎನ್ನುವರ ಕಂಡು
ಕನಿಕರದ ನಗು ನನಗೆ.
ನಕ್ಕು ನಗಿಸಿ ಬಾಳುವ
ಪರಿ ತಿಳಿಯಲಿ ಇವರಿಗೆ,
ಇಂದೋ ನಾಳೆಯೋ ಎನ್ನುವ
ಜೀವ ಇಂದಾದರೂ ನಗಲಿ,
ಬಾಳು ಸದಾ ಹಗುರಾಗಲಿ
ಓ ನನ್ನ ದೇವರೇ........
21.01.2015

No comments:

Post a Comment