Saturday, 21 March 2015



ಜೋಕ್ ಚೆನ್ನಾಗಿದೆ ಅನ್ನಿಸಿತು.... smile emoticon
ಉರಿ ಮೋರೆಯ ಹೆಂಗಸು
ಪೆಚ್ಚು ಮೋರೆಯ ಗಂಡಸು
ಇಬ್ಬರೂ ನೋಡಲು ಚೆಂದವಿದ್ದರೂ,
ನಿಜವಾಗಿಯೂ ಕುರೂಪಿಗಳು.
******ದಾರ್ಶನಿಕ.
ಇದುವರೆಗೂ ಪುರೋಹಿತ ಭಟ್ಟರು ಸ್ಕೂಟರ್ ನಲ್ಲಿ ಹೋಗೋದು ನೋಡಿದ್ದೆ. ಯಕ್ಷಗಾನ ವೇಷಧಾರಿ ಹೀಗೆ
ಹೋಗೋದು ನೋಡಿದ್ದು ಇದೇ ಮೊದಲು......... smile emoticon
ವಿಚ್ಛೇದನ - ವಿರಹ
ಕಡಿದು ಹೋಯ್ತು
ವೈವಾಹಿಕ ಬಂಧನ,
ಮಕ್ಕಳೂ ಪಾಲಾದರು,
"ಅಪ್ಪಾ" ಎನಲು
ಮಗಳಿಗೆ ಅಪ್ಪ
ಇಲ್ಲವಾದ,
"ಅಮ್ಮಾ" ಎನಲು
ಮಗನಿಗೆ ಅಮ್ಮ
ಇಲ್ಲವಾದಳು.
ವಿಚ್ಛೇದನದ ಉರಿಯಲ್ಲಿ
ಆ ಎಳೇ ಜೀವಗಳು
ಕಮರಿ ಹೋದವು,
ಪ್ರೀತಿಯ ವಿರಹದ
ಬೆಂಕಿಯಲ್ಲಿ ದಹಿಸಿ
ಹೋದವು, ದಹಿಸಿ
ಹೋದವು........ frown emoticon
18.03.2015.
ತನ್ನ ಬದುಕಿನುದ್ದಕ್ಕೂ ಇತರರಿಗೆ
ಕಷ್ಟಗಳನ್ನೇ ಕೊಟ್ಟವನೊಬ್ಬ
ಸಾಯುವಾಗಲೂ ಅದೇನೋ
ಧನಿಷ್ಠಾ ಪಂಚಕವಂತೆ,
ಅದರಲ್ಲಿ ಸತ್ತು, ಮನೆ ಮಂದಿಯೆಲ್ಲ
ಐದು ತಿಂಗಳು ಮನೆ ಬಿಡುವಂತೆ ಮಾಡಿದನಂತೆ.... frown emoticon
*******ದಾರ್ಶನಿಕ
ಸ್ವಾಭಿಮಾನ
ದುರಭಿಮಾನವಾದರೆ
ಅಹಂಕಾರವೆನಿಸುತ್ತದೆ.
****ದಾರ್ಶನಿಕ
ಚೆಂದದ ಮುಖವೊಂದಿದ್ದರೆ ಸಾಲದು,
ಆ ಚೆಂದದ ಮುಖದಲ್ಲಿ
ಸಚ್ಚಾರಿತ್ರ್ಯ ಹಾಗೂ ಸದ್ಗುಣಗಳ
ಮುಗುಳು ನಗುವೂ ಇರಬೇಕು.
*****ದಾರ್ಶನಿಕ
ನೀರ ಹೊತ್ತ ನೀರೆ ಜಾಣೆ...... smile emoticon
ತನ್ನ ಎಲ್ಲಾ ಸ್ವಾನುಭವಗಳನ್ನು
ಬೇಕೆನಿಸಿದರೆ ಇತರರಲ್ಲಿ
ಹಂಚಿ ಕೊಳ್ಳ ಬಹುದು.
ಯಾರಲ್ಲಿಯೂ ಹಂಚಿಕೊಳ್ಳಲಾಗದ
ಒಂದೇ ಒಂದು ಅನುಭವವಿದೆ.
ಅದೇ ತನ್ನ ಸಾವು....
****ದಾರ್ಶನಿಕ.
ತಾನು ಕಂಡ
ನಿಜವಾದ ತಪ್ಪನ್ನು
"ತಪ್ಪು" ಎಂದು ಹೇಳುವ
ಧೈರ್ಯವಿರುವವನೇ
ನಿಜವಾದ ಧೈರ್ಯಶಾಲಿ.
*****ದಾರ್ಶನಿಕ

Sunday, 8 March 2015

ತನ್ನ ಅಸಹಾಯಕತೆಯನ್ನು
ತಾನು ಸಹಿಸಿಕೊಂಡು
ಸುಮ್ಮನಿರುವುದಕ್ಕಿಂತ
ದೊಡ್ಡ ಸಹನೆ ಇನ್ನೊಂದಿಲ್ಲ.
****ದಾರ್ಶನಿಕ
ಎಲ್ಲಾ ಮಾಯ.
=========
ಬಾಲ್ಯದ
ಬಾಲಿಶ
ಕೋಮಲತೆ
ಮರೆಯಾಯ್ತು,
ಯೌವ್ವನದ
ಉಬ್ಬು ತಗ್ಗಿನ
ಮಾದಕತೆ
ಮಾಯವಾಯ್ತು
ಈಗ, ಬರೇ
ಮುಪ್ಪಿನ ಸುಕ್ಕುಗಳು
ಕಾಲನ ಕರೆಗೆ
ಕಾಯುತ್ತಿವೆ.....
*********
06.03.2015
ದೇಹವೆರಡು ಆತ್ಮ ಒಂದೇ
ಅನ್ನುವ ಪ್ರೇಮ ಸಂಭಾಷಣೆ
ಅತೀ ಸುಂದರವಾದ ಮಿಥ್ಯ.
ಯಾವ ಆತ್ಮವೂ ಎರಡೂ
ದೇಹಗಳನ್ನು ಒಮ್ಮೆಗೇ 
ಎಂದೂ ತೊರೆಯುವುದಿಲ್ಲ.
*******ದಾರ್ಶನಿಕ.
ನಾವೇ ಸುಲಭವಾಗಿ
ಮಾಡಿಕೊಳ್ಳ ಬಹುದಾದ
ಕೆಲಸಗಳಿಗೆ ಇತರರ
ಸಹಾಯ ಪಡೆದರೆ,
ಅವರ ದೃಷ್ಟಿಯಲ್ಲಿ 
ನಾವು ಕೀಳಾಗುವ
ಸಂಭವ ಇರುತ್ತದೆ.
**** ದಾರ್ಶನಿಕ.

Sunday, 1 March 2015

ಮೆಟ್ಟಿಲುಗಳನ್ನು ಹತ್ತಿ ಬಂದು
ಎತ್ತರಕ್ಕೆ ಏರಿದ ಮನುಷ್ಯ,
ಮುಂದೊಮ್ಮ ಒಂದು ದಿನ
ಅವೇ ಮೆಟ್ಟಿಲುಗಳನ್ನು
ಇಳಿದು ಹೋಗ ಬೇಕಾದ
ಪ್ರಸಂಗ ಬರ ಬಹುದೆಂಬುದನ್ನು
ಸುಲಭವಾಗಿ ಮರೆತು ಬಿಡುತ್ತಾನೆ.
*****ದಾರ್ಶನಿಕ
(ಸ್ನೇಹಿತರೆಲ್ಲರಿಗೂ ಶುಭ ಮುಂಜಾನೆ. ರವಿವಾರ ನಿಮ್ಮ ಕುಟುಂಬದೊಂದಿಗೆ, ಮುಖ್ಯವಾಗಿ ಮಕ್ಕಳೊಂದಿಗೆ ಖುಶಿಯಿಂದ ಕಳೆಯಿರಿ. ವಯಸ್ಸಾದ ಅಪ್ಪ ಅಮ್ಮ, ಅಜ್ಜ ಅಜ್ಜಿ ಮನೆಯಲ್ಲಿದ್ದರೆ ಅವರ ಬೇಕು ಬೇಡಗಳನ್ನು ವಿಚಾರಿಸಿ. ಇಲ್ಲಾ, ಅವರು ದೂರದಲ್ಲಿದ್ದರೆ ಒಂದು ಫೋನ್ ಮಾಡಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ. ಆಗ ಅವರಿಗಾಗುವ ಆನಂದದ ಅನುಭೂತಿಯನ್ನು ನೀವೂ ಅನುಭವಿಸಿ. ಅಂದ ಹಾಗೆ, ಹಿಂದೆ ಯಾರೋ ಒಂದು ಸ್ಟೇಟಸ್ ಹಾಕಿದ್ದರು, "FB ಬಂದ ಮೇಲೆ, ಉಪದೇಶ ಕೊಡುವವರು ಹೆಚ್ಚಾಗಿದ್ದಾರೆ" ಅಂತ. ಆದರೆ, ಇದು ಉಪದೇಶವಲ್ಲ, ಸಹಜವಾಗಿ ಆನಂದ ಕೊಡಲು, ಮತ್ತು ಸ್ವತಃ ಆನಂದ ಹೊಂದಲು ಒಂದು ವಿನೀತ ಸಲಹೆ ಅಷ್ಟೆ. Anyway, have a nice Sunday.)

01.03.2015
ದೂರದಿಂದ ಗುಡ್ಢ, ಬೆಟ್ಟ
ಕಣಿವೆ ಕಂದರ, ಕಾಡುಮೇಡು
ಎಲ್ಲವೂ ಚೆಂದವೇ ಕಾಣುತ್ತದೆ.
ಆದರೆ ಬಹಳ ಹತ್ತಿರ ಹೋದಾಗಲೇ
ನಿಜವಾದ ಬಂಣ ಹಾಗೂ
ಕಷ್ಟಗಳು ಗೊತ್ತಾಗುವುದು.
ಹಾಗೆಯೇ, ಯಾವುದೇ ಸಂಬಂಧಗಳು
ಎಷ್ಟು ಬೇಕೋ ಅಷ್ಟೇ ಇದ್ದರೆ ಒಳ್ಳೆಯದು.
ದುಃಖ ದುಮ್ಮಾನಗಳು, ಕಷ್ಟ ನಷ್ಟಗಳು
ಕಡಿಮೆಯಾಗಿ, ಶಾಂತಿ ನೆಲಸಿರುತ್ತದೆ
******ದಾರ್ಶನಿಕ
ಜಂಟಿತನ ಹಳಸಿದಾಗ
ಒಂಟಿತನವೇ ಲೇಸು.
****ದಾರ್ಶನಿಕ
ನನಗೆ ಸಿಟ್ಟು
+++++++
ನಗುವುದ ಮರೆತವರ
ಕಂಡರೆ ನನಗೆ ಸಿಟ್ಟು
ಅಳುವವರ ಸೋಗನು
ಕಂಡರೂ ಸಿಟ್ಟು.
ಮಗುವನು ಮಗುವಾಗಿ
ಕಾಣದವರ ಕಂಡರೆ ಸಿಟ್ಟು
ತಾವೊಮ್ಮೆ ಮಗುವಿದ್ದೆವಂಬುದ
ಮರೆತವರ ಕಂಡರೆ ಸಿಟ್ಟು
ಸತ್ಯದ ತಲೆ ಮೇಲೆ
ಹೊಡೆದಂತೆ ಸುಳ್ಳು
ಹೇಳುವವರೆಂದರೆ ಅತಿ ಸಿಟ್ಟು
ಇನ್ನು ಸುಳ್ಳನ್ನೇ
ಸತ್ಯವೆಂದು ಸಾಧಿಸುವವರ
ಕಂಡರೆ ಇನ್ನಿಲ್ಲದ ಸಿಟ್ಟು.
ಕಣ್ಣಿಗೆ ಕಾಣುವ ಜಗತ್ತೇ ಮಿಥ್ಯ
ಎಂದೂ, ಯಾರೂ ಕಾಣದ
ಪರಮಾರ್ಥವೇ ಸತ್ಯ
ಎಂದು ವಾದಿಸುವವರ
ಕಂಡರೇಕೋ ವಿಚಿತ್ರ ಸಿಟ್ಟು.
ಮೆಟ್ಟಲನು ಮರೆತವರೆಂದರೆ
ವಿಪರೀತ ವೇದನೆಯ ಸಿಟ್ಟು,
ಕೆಲಸವಾದ ನಂತರ
ಅಂಬಿಗನನ್ನು ಮಿ...ಡ
ಅನ್ನುವವರನು ಕಂಡರೆ ಸಿಟ್ಟು.
ಇದ್ದವರನ್ನು ಹಳಿದು
ಹೋದವರನ್ನು ಹೊಗಳುವವರ
ಕಂಡರೆ ಬಲು ಸಿಟ್ಟು,
ಕಂಡೂ ಕಾಣದಂತೆ
ಹೋಗುವವರೆಂದರೆ ಸಿಟ್ಟು.
ಗಳಿಸಿಟ್ಟು ಅನುಭವಿಸದವರ
ನೋಡಿದರೆ ವಿಪರೀತ ಸಿಟ್ಟು,
ಪರರ ಗಳಿಕೆಯ ಮೇಲೆ
ಬದುಕುವವರ ಕಂಡರೆ ಸಿಟ್ಟು.
ಮಕ್ಕಳನ್ನು ಲಾಲಿಸಲು
ಸಮಯವಿಲ್ಲದ ಪಾಲಕರೆಂದರೆ
ತಾಳಲಾರದ ಸಿಟ್ಟು,
ಮುದಿಪ್ರಾಯದಲ್ಲಿ ಪಾಲಕರ
ಪೋಷಿಸದ ಮಕ್ಕಳೆಂದರೆ ಸಿಟ್ಟು.
ಬದುಕನು ಪ್ರೀತಿಸದವರ
ಕಂಡರೆ ಬಹಳ ಸಿಟ್ಟು,
ಕೊನೆಗೆ ನನಗಷ್ಟೇ
ಏಕಿಷ್ಟು ಯೋಚನೆಯೆಂದು
ನನ್ನ ಮೇಲೇನೇ ಸಿಟ್ಟು..... frown emoticon
***********
ಕಂದ, ನೀನೇ ಚಂದ
****************
ಓ ನನ್ನ ಕಂದ
ನೀನೆಷ್ಟು ಚೆಂದ,
ಏನು ನೋಡಿ
ನಿನಗಿಷ್ಟು ಖುಶಿ,
ನನಗೇನೋ
ನಿನ್ನ ಹೊಂಬಣ್ಣದ
ಮುಖವೇ ಅಂದ,
ಹೊಂಬಣ್ಣವ ತಳೆಯಲು
ತವಕಿಸುವ ನಿನ್ನ
ಚದುರಿದ ಕೂದಲುಗಳೇ ಚೆನ್ನ.
ಅದೇನು ಕುತೂಹಲ
ನಿನ್ನ ಕರಿದುಂಬಿ ಕಂಗಳುಗಳಲ್ಲಿ,
ಅದೇನು ನೀ ಕಂಡ
ಅಚ್ಚರಿಯ ಹೇಳ ಬಯಸಿದೆ
ನೀ ಮುದ್ದು ಬಾಯ್ತೆರೆದು.?
ನಿನ್ನಂದ ಕಂಡು ಚಂದಿರನೂ
ನಾಚಿ ಮರೆಯಾದ,
ಬಿರಿದ ಸಂಪಿಗೆ ಮೊಗ್ಗು
ನಕ್ಕಿತು ತನಗಿವನೇ
ಒಲುಮೆಯ ಗೆಳೆಯನೆಂದು.
ಕಂದ ನೀ ಮನದಿ
ಎಂದೆಂದೂ ಕಂದನಾಗಿರು,
ರಾಗ ದ್ವೇಷಗಳು ನಿನ್ನ
ಸೋಕಿ ಮಲಿನಗೊಳಿಸದಿರಲಿ,
ನಿನ್ನ ಬಾಳು ಹಸನಾಗಲಿ
ಎಂದೆಂದೂ ಹಸಿರಾಗಿರಲಿ.
**************
(ಚಿತ್ರ ಕೃಪೆ : Facebook)
20.02.2015

ಹುಚ್ಚನನ್ನು ಸೂಕ್ತ ಚಿಕಿತ್ಸೆ
ನೀಡಿ ಗುಣಪಡಿಸಬಹುದು.
ಆದರೆ, ಯಾವ ಚಿಕಿತ್ಸೆಯೂ
ಮೂರ್ಖನನ್ನು ಗುಣಪಡಿಸಲಾರದು.
********ದಾರ್ಶನಿಕ