Sunday, 1 March 2015

ಕಂದ, ನೀನೇ ಚಂದ
****************
ಓ ನನ್ನ ಕಂದ
ನೀನೆಷ್ಟು ಚೆಂದ,
ಏನು ನೋಡಿ
ನಿನಗಿಷ್ಟು ಖುಶಿ,
ನನಗೇನೋ
ನಿನ್ನ ಹೊಂಬಣ್ಣದ
ಮುಖವೇ ಅಂದ,
ಹೊಂಬಣ್ಣವ ತಳೆಯಲು
ತವಕಿಸುವ ನಿನ್ನ
ಚದುರಿದ ಕೂದಲುಗಳೇ ಚೆನ್ನ.
ಅದೇನು ಕುತೂಹಲ
ನಿನ್ನ ಕರಿದುಂಬಿ ಕಂಗಳುಗಳಲ್ಲಿ,
ಅದೇನು ನೀ ಕಂಡ
ಅಚ್ಚರಿಯ ಹೇಳ ಬಯಸಿದೆ
ನೀ ಮುದ್ದು ಬಾಯ್ತೆರೆದು.?
ನಿನ್ನಂದ ಕಂಡು ಚಂದಿರನೂ
ನಾಚಿ ಮರೆಯಾದ,
ಬಿರಿದ ಸಂಪಿಗೆ ಮೊಗ್ಗು
ನಕ್ಕಿತು ತನಗಿವನೇ
ಒಲುಮೆಯ ಗೆಳೆಯನೆಂದು.
ಕಂದ ನೀ ಮನದಿ
ಎಂದೆಂದೂ ಕಂದನಾಗಿರು,
ರಾಗ ದ್ವೇಷಗಳು ನಿನ್ನ
ಸೋಕಿ ಮಲಿನಗೊಳಿಸದಿರಲಿ,
ನಿನ್ನ ಬಾಳು ಹಸನಾಗಲಿ
ಎಂದೆಂದೂ ಹಸಿರಾಗಿರಲಿ.
**************
(ಚಿತ್ರ ಕೃಪೆ : Facebook)
20.02.2015

No comments:

Post a Comment