Friday, 15 May 2015

ಗಂಟು ಅಂಟಿನ ನಂಟು
ಗೀಜಗನ ಗೂಡು
ಜೇಡನ ಬಲೆ,
ಒಂದು
ಬಿಡಿಸಲಾರದ
ಗಂಟು,
ಇನ್ನೊಂದು
ಬಿಡಿಸಿಕೊಳ್ಳಲಾಗದ
ಅಂಟು.
ಈ ನಂಟು
ಅಂಟುಗಳೆಲ್ಲ,
ಉಂಟು ಇಲ್ಲಗಳ
ಗೊಂದಲಗಳ
ಗೂಡಿನ
ಕಗ್ಗಂಟು.
ಬಿಡಿಸಲಾಗದಷ್ಟು
ಗಟ್ಟಿ ಗಂಟು,
ಬಿಡಿಸಿಕೊಳ್ಳಲೆಳಸಿದಷ್ಟೂ,
ಮತ್ತಷ್ಟು ಅಂಟಿ
ಕೊಳ್ಳುವ ಬಿಗಿ ಅಂಟು,
ಈ ಅಂಟು ಗಂಟುಗಳೇ
ಸೇರಿ ಕೊನೆಗೊಮ್ಮೆ
ಕೊನೆಗಂಟು.
12.05.2015

No comments:

Post a Comment