ಮುದ್ದು ಪಾದಗಳು
ಈ ಹಸು ಕಂದನ
ಮುದ್ದು ಪಾದಗಳು,
ನಸುಗೆಂಪು ಬಣ್ಣದ
ನಳ ನಳಿಸುವ ಪುಷ್ಪಗಳು
ಬೆಳ್ಳಿ ಕಾಲ್ಗಡಗಗಳ
ಶೃಂಗಾರದೊಡವೆಗಳು,
ಇನ್ನೂ ಭೂಮಿಯನು ಸೋಕಿಲ್ಲ
ಸ್ವಲ್ಪವೂ ಮಲಿನವಾಗಿಲ್ಲ,
ಅಮ್ಮನಪ್ಪುಗೆಯಲ್ಲಿ,
ಬೆಚ್ಚಗಿವೆ ಇನ್ನೂ,
ಭೂದೇವಿ ಕಾಯುತಿಹಳು
ಎಂದು ಮುಡಿಯಲಿ
ಈ ಹೂಗಳನೆಂದು.
ಬಾಳು ಬೆಳಗಲಿ ನಿಂದು,
ನಾನು ಕಾಯಿತಿಹೆ
ತವಕದಲಿ ನಿಂದು,
ನಿನ್ನನೆಂದು ಕೈ ಹಿಡಿದು
ನಡೆಸಿ ಧನ್ಯನಾಗಲಿಯೆಂದು.
23.04.2015
No comments:
Post a Comment