Friday, 3 July 2015

ಮೀನಿನಂಥ ಕಣ್ಣುಗಳು,
ಬಿಲ್ಲಿನಂತಹ ಹುಬ್ಬುಗಳು,
ಸಂಪಿಗೆಯಂಥ ನಾಸಿಕ.
ಹರವಾದ ಹಣೆ,
ದುಂಬಿಗಳ ಹಿಂಡಿನಂಥ
ಹಾರುವ ಮುಂಗುರುಳು,
ತುಂಬು ನುಣುಪು ಕೆನ್ನೆಗಳು,
ಕೆನೆ ಹಾಲಿನಂಥ ಮೈಬಣ್ಣ.
ಇವೆಲ್ಲ ಇದ್ದ ದಂತದ
ಬೊಂಬೆಯನ್ನು ಮಾಡಿಕೊಂಡ
ಗುಂಡ ಬಾಳ ಸಂಗಾತಿಯೆಂದು,,
ನಂತರ ನೆನಪಾಯಿತು,
ಬಾದಾಮಿ ಆಕಾರದ ಕೆಂಪು
ಹೃದಯ ಎಲ್ಲಿ ಎಂದು,
ಹುಡುಕಿಯೇ ಹುಡುಕಿದ,
ಹುಡುಕಿಯೇ ಹುಡುಕಿದ,
ಇದ್ದರಲ್ಲವೇ ಸಿಗುವುದು,
ಸಿಗಲೇ ಇಲ್ಲ........

 frown emoticon

No comments:

Post a Comment