Friday, 3 July 2015

ಅತ್ಯಾಚಾರ.
ಉಬ್ಬು ತಗ್ಗುಗಳ
ಪ್ರದರ್ಶನ ಬೇಡ ಮಗಳೇ ಅಂದೆ,
ಅಂದ ಚೆಂದವನ್ನು
ಸ್ವಲ್ಪವಾದರೂ ಮುಚ್ಚಿಡಬೇಕಮ್ಮಾ ಎಂದೆ...
ಕೇಳಲಿಲ್ಲ,
ಇದೇ ಈಗಿನ ಫ್ಯಾಶನ್ ಅಪ್ಪಾ,
ಎಂದಳು
ಮೊದಲು ಹುಬ್ಬುಗಳು ಏರಿದವು
ಓರೆ ನೋಟಗಳು
ನೇರ ನೋಟಗಳಾದವು,
ಹಸಿದ ಹುಚ್ಚು ನಾಯಿಗಳು
ಎದುರಾದವು,
ಉಬ್ಬು ತಗ್ಗುಗಳನ್ನು ಬೆತ್ತಲಾಗಿಸಿ,
ಹರಿದು ಹಂಚಿ ತಿಂದು ತೇಗಿದವು.
ಮುಂಜಾನೆ ಊರ ಕೆರೆಯಲ್ಲಿ
ತೇಲಿದ ಹೆಣ ನನ್ನ ಕಣ್ಣುಗಳನ್ನು
ಬತ್ತಿಸಿತ್ತು....ತಲೆಮೇಲೆ
ಹೊತ್ತ ಕೈಗಳು ಮರಗಟ್ಟಿದ್ದವು.

21.06.15

No comments:

Post a Comment