(ಒಂದು ನೀತಿ ಕತೆ....ತುಸು ದೀರ್ಘವಿದೆ...ತಾಳ್ಮೆಯಿಂದ ಓದಿ...:-) ಕತೆ, ನೀತಿ.. ಎರಡೂ ಚೆನ್ನಾಗಿವೆ.. :-)
************
************
*ಪಾಪದ ಫಲ ಯಾರಿಗೆ* ?
-----------------------------
ಒಬ್ಬ ರಾಜನಿದ್ದ . ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .
-----------------------------
ಒಬ್ಬ ರಾಜನಿದ್ದ . ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .
ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.
ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ .
ಚಿತ್ರಗುಪ್ತ ಸೀದಾ ಯಮಧರ್ಮನ ಬಳಿ ಹೋಗಿ ತನ್ನ ಸಮಸ್ಯೆಯನ್ನು ವಿವರಿಸಿದ. ಯಮಧರ್ಮ, ಅವನೊಡನೆ ತಾಳ್ಮೆಯಿಂದ ಕಾಯುವಂತೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಆ ಸಮಸ್ಯೆಗೆ ಉತ್ತರ ಹೊಳೆಯುವುದಾಗಿಯೂ ತಿಳಿಸಿದ.
ಆ ನಂತರ ಸ್ವಲ್ಪ ದಿನಗಳಲ್ಲಿ , ರಾಜನನ್ನು ಭೇಟಿಯಾಗಲು ಕೆಲವು ಮಂದಿ ಬ್ರಾಹ್ಮಣರು, ಆ ಊರನ್ನು ಪ್ರವೇಶಿಸಿದರು. ಅರಮನೆಯ ದಾರಿ ಅವರಿಗೆ ಗೊತ್ತಿರಲಿಲ್ಲ. ಅಲ್ಲಿಯೇ ಮಾರ್ಗದ ಬದಿಯಲ್ಲಿ ಕುಳಿತು ಹೂ ಮಾರುತ್ತಿದ್ದ ಹೆಂಗಸಿನೊಡನೆ, 'ನಿನಗೆ ಅರಮನೆಯ ದಾರಿ ಗೊತ್ತಿದೆಯೇ ? ನಾವು ಅಲ್ಲಿಗೆ ಹೇಗೆ ಹೋಗಬಹುದು?' ಎಂದು ವಿಚಾರಿಸಿದರು. ಆಕೆ ಒಪ್ಪಿ, ಸರಿಯಾದ ದಾರಿಯನ್ನು ಅವರಿಗೆ ವಿವರಿಸಿ ಹೇಳಿದ ನಂತರ ಸೇರಿಸಿದಳು. 'ಆದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಆ ರಾಜ ಬ್ರಾಹ್ಮಣರನ್ನು ಕೊಲ್ಲುವನು.'
ಅವಳು, ರಾಜನು ಮಾಡದ ಪಾಪದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ ಕ್ಷಣದಲ್ಲಿಯೇ ಚಿತ್ರಗುಪ್ತನ ಪ್ರಶ್ನೆಗೆ ಉತ್ತರ ದೊರಕಿತು. ಆತ, ಬ್ರಾಹ್ಮಣ ಸತ್ತ ಪಾಪದ ಫಲವನ್ನು ಆಕೆಯ ಲೆಕ್ಕಕ್ಕೆ ಸೇರಿಸಿದ.
ಕಥೆಯ ನೀತಿ :
*ನಾವು ಯಾರಾದರೊಬ್ಬರ ಪಾಪದ ಬಗ್ಗೆ, ಆಡಿಕೊಂಡರೆ, ಮತ್ತು ನಾವು ಆಡಿದ ಮಾತು ಸುಳ್ಳಾಗಿದ್ದರೆ, ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸಂಪೂರ್ಣವಾಗಿ ಸೇರಿಸಲ್ಪಡುವುದು.*
*ನಾವು ಯಾರಾದರೊಬ್ಬರ ಪಾಪದ ಬಗ್ಗೆ, ಆಡಿಕೊಂಡರೆ, ಮತ್ತು ನಾವು ಆಡಿದ ಮಾತು ಸುಳ್ಳಾಗಿದ್ದರೆ, ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸಂಪೂರ್ಣವಾಗಿ ಸೇರಿಸಲ್ಪಡುವುದು.*
ಆದ್ದರಿಂದ ನಾವು ಇತರರ ಬಗ್ಗೆ ಯೋಚಿಸುವಾಗ, ಮಾತನ್ನಾಡುವಾಗ ಜಾಗರೂಕರಾಗಿರೋಣ.
🌳👆ಎಲ್ಲರೂ ಓದಲೇಬೇಕಾಗಿರುವುದು 👆🌳
🌳👆ಎಲ್ಲರೂ ಓದಲೇಬೇಕಾಗಿರುವುದು 👆🌳
(WhatsApp - Shared)
No comments:
Post a Comment