ಮದುವೆಯ ವಾರ್ಷಿಕೋತ್ಸವವೋ, ಅಥವಾ ಜಗಳದ ವರ್ಷಾಚರಣೆಯೋ......... (ತಾಳ್ಮೆಯಿಂದ ಪೂರ್ಣ ಓದಿ)
************************
************************
ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ವೃದ್ಧ ದಂಪತಿಗಳಿದ್ದಾರೆ. ಗಂಡನಿಗೆ 70 ವರ್ಷ, ಹೆಂಡತಿಗೆ 65 ವರ್ಷವಿರಬಹುದು. ಅವರ ಗಂಡು ಮಕ್ಲಳಿಬ್ಬರು ಬೇರಾವುದೋ ಊರಿನಲ್ಲಿ ಕೆಲಸದಲ್ಲಿದ್ದರು.
ಮತ್ತೊಬ್ಬಳು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ತಾವು ಮಾತ್ರ ಯಾವಾಗ ನೋಡಿದರೂ ಏರಿದ ದನಿಗಳಲ್ಲಿ ಜಗಳ ಆಡುತ್ತಲೇ ಇರುತ್ತಿದ್ದರು.
ಮತ್ತೊಬ್ಬಳು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ತಾವು ಮಾತ್ರ ಯಾವಾಗ ನೋಡಿದರೂ ಏರಿದ ದನಿಗಳಲ್ಲಿ ಜಗಳ ಆಡುತ್ತಲೇ ಇರುತ್ತಿದ್ದರು.
ಒಂದು ದಿನ ನಮ್ಮನ್ನು ಮಧ್ಯಾಹ್ನ ಊಟಕ್ಕೆ ಕರೆದರು. ಯಾಕೆಂದದ್ದಕ್ಕೆ, ಇವತ್ತು ನಮ್ಮ marriage anniversary ಅದಕ್ಕೇ ಬನ್ನಿ ಅಂದರು. ಅವರ ಜಗಳ ಕೇಳಿ ಕೇಳಿ ಬೇಸತ್ತಿದ್ದ ನಾವು, ಹೋಗುವುದೋ ಬೇಡವೋ ಎಂದು ಯೋಚಿಸಿ ಯೋಚಿಸಿ, ಕೊನೆಗೆ, ನೆರೆಹೊರೆಯಲ್ಲ ಅಂದು ಕೊಂಡು ಹೋದೆವು.
ನಾವು ಹೋದಾಗ ಸಹ ಯಾವುದಕ್ಕೋ ಜೋರಾಗಿ ಜಗಳ ನಡೆಯುತಿತ್ತು. ನಾವು ಹೋದ ಕೂಡಲೆ ಸ್ವಲ್ಪ ಶಾಂತವಾಯಿತು. ಅವರ ಮದುವೆಯ 40ನೇ ವಾರ್ಷಿಕೋತ್ಸವಕ್ಕೆ Best wishes ಹೇಳಿದೆವು. ಅಂತೂ ಇಂತೂ ಊಟನೂ ಮುಗಿಯಿತು.
ಆಗ ನಾನು ಆ ಅಜ್ಜನನ್ನು ಕೇಳಿದೆ, "ಅಲ್ಲಾ, ಮದುವೆಯಾಗಿ 40 ವರ್ಷ ಆಯಿತು ಅಂತೀರಾ, ಇನ್ನೂ ಯಾಕೆ ಹೀಗೆ ಜಗಳ ಆಡ್ತೀರಾ? ರಾಮ ಕೃಷ್ಣ ಅಂದುಕೊಂಡು ಹಾಯಾಗಿರ ಬಾರದೇ?"
ಆಗ ಅವರು ಜೋರಾಗಿ ನಕ್ಕು, "ರಾಯರೇ, ಇವತ್ತು ಬರೇ ನಮ್ಮ ಮದುವೆಯ 40 ನೇ ವಾರ್ಷಿಕೋತ್ಸವ ಅಲ್ಲ, ನಮ್ಮ ಜಗಳದ್ದೂ ಕೂಡ 40ನೇ ವಾರ್ಷಿಕೋತ್ಸವ' ಎಂದರು. ಕುತೂಹಲದಿಂದ "ಅದು ಹೇಗ, ರಾಯರೇ?" ಎಂದೆ.
"ನೋಡಿ, ನಮ್ಮ ಮದುವೆ ಆದದ್ದು ನಮ್ಮೂರಿಗೆ 25 kms ದೂರದ ಒಂದು ದೇವಸ್ಥಾನದಲ್ಲಿ. ಗೋಧೂಳಿ ಲಗ್ನ. ಊಟವೆಲ್ಲ ಮುಗಿಯುವಾಗ ರಾತ್ರಿ 9.30 ಗಂಟೆಯಾಯಿತು. ಮದುಮಗಳನ್ನು ಕೈ ಎತ್ತಿ ಕೊಡುವ ಶಾಸ್ತ್ರವೂ ಮುಗಿದು, ಎಲ್ಲರೂ ನಮ್ಮ ಮನೆ ಮುಟ್ಟುವಾಗ ರಾತ್ರಿ 10.30 ಗಂಟೆ. ಬಂದು ನೋಡಿದರೆ, ಮದುಮಗಳ ಬಟ್ಟೆಬರೆ ಇತ್ಯಾದಿಗಳಿದ್ದ ಪೆಟ್ಟಿಗೆ ಇಲ್ಲ. !!!!
ಈಕೆ ಕೂಡಲೇ ಹಿಂದೆ ಮುಂದೆ ನೋಡದೆ ಜಗಳವೇ ಶುರು ಮಾಡಿದಳು. "ಈಗಲೇ ನನ್ನ ಬಗ್ಗೆ ಇಷ್ಟು ನಿಷ್ಕಾಳಜಿ ಮಾಡುವ ನೀವು ಮತ್ತು ನಿಮ್ಮ ಮನೆಯವರು, ಮುಂದೆ ನನ್ನನ್ನು ಏನು ಮಾಡೀರೀ, ಹಾಗೆ ಹೀಗೆ ....." ಅಂತ.
ನಾವು ಈಗಲೇ ಹೋಗಿ ಪೆಟ್ಟಿಗೆ ತರುತ್ತೇವೆಂದು ಹೊರಟರೂ ಈಕೆ ಎಲ್ಲರ ಮೇಲೆ ಒದರಾಡುವುದನ್ನು ನಿಲ್ಲಿಸಲಿಲ್ಲ. ಆ ರಾತ್ರಿಗೆ ಒಂದು taxi ಮಾಡಿಕೊಂಡು ಹೋಗಿ ಅರ್ಚಕರು ಎತ್ತಿಟ್ಟಿದ್ದ ಪೆಟ್ಟಿಗೆ ತಂದದ್ದಾಯಿತು. ಈಕೆ ಈ ತರ ಜಗಳಗಂಟಿ ಎಂದು ಆವತ್ತೇ ಗೊತ್ತಾಗಿ ಹೋಯಿತು. ಆದರೇನು ಮಾಡುವುದು, ಮದುವೆ ಆಗಿ ಹೋಗಿತ್ತು... !! ಅಂದು ಶರುವಾದ ಜಗಳ ಇನ್ನೂ ನಡೆದೇ ಇದೆ. ಅದು ಹೇಗೋ ಈ ಜಗಳದಲ್ಲೇ ಮೂರು ಮಕ್ಕಳೂ ಆದವು...." ಎಂದು ಮುಸಿ ಮುಸಿ ನಕ್ಕರು.

ಅಷ್ಟೊತ್ತಿಗೆ, ಅದುವರೆಗೆ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದ ಅಜ್ಜಿ ಸೊಂಟಕ್ಕೆ ಸೆರಗು ಸಿಕ್ಕಸಿಕೊಂಡು ಬಂದೇ ಬಿಟ್ಟರು. "ಏನು, ಹಳೇ ಪುರಾಣ ಎಲ್ಲ ಹೇಳಿ, ಬಂದವರ ಎದುರಿಗೆ ನನ್ನನ್ನು ಜಗಳಗಂಟಿ ಎಂದು ಮರ್ಯಾದೆ ಕಳೀತೀರಾ, ಏನನ್ನ ಬೇಕು ನಿಮ್ಮ ಮುಖಕ್ಕೆ?" ಎಂದು ಏರಿದ ದನಿಯಲ್ಲಿ ಜಗಳ ಶುರು ಮಾಡಿಯೇ ಬಿಟ್ಟರು. "ನೀನು ಜಗಳಗಂಟಿ ಅಲ್ಲವೇನು ಮತ್ತೆ? ಇದ್ದುದನ್ನು ಇದ್ದ ಹಾಗೆ ಹೇಳಿದರೆ, ಏನು ಭಾಳಾ ಹಾರಾಡ್ತೀ" ಎಂದು ಮುದುಕ ಶುರು ಮಾಡಿದರು.
ನಾವು ದಂಗಾಗಿ, "ರಾಯರೇ, ನಾವಿನ್ನು ಬರುತ್ತೇವೆ, ಇನ್ನೊಮ್ಮೆ ನಿಮಗೆ ಮದುವೆಯ ದಿನದ ಶುಭಾಶಯಗಳು," ಎಂದು, ಮನಸ್ಸಿನಲ್ಲಿ "ಜಗಳದ ದಿನದ್ದೂ ಶುಭಾಶಯಗಳು(?)" ಎಂದುಕೊಂಡು ಎದ್ದು ಬಂದು ಬಿಟ್ಟೆವು.
***************
No comments:
Post a Comment