ಮನುಷ್ಯ ಸಮಾಜ ಮುಖಿಯಾಗಿ, ಸಂಘ ಜೀವಿಯಾಗಿದ್ದರೆ, ಎಂಥ ಪರಿಸ್ಥಿತಿಯಲ್ಲೂ ಖಿನ್ನತೆಯಿಂದ ದೂರವಿರ ಬಹುದು.
ಒಂದು ನೀತಿ ಕತೆ. ತಾಳ್ಮೆ ಇದ್ದರೆ ಓದಿ.....🙏🙏
============================
============================
💥💥💥💥💥💥💥*ಕೆಂಡದಂತಿರುತ್ತೇನೆ...... ಇದ್ದಲಾಗಲ್ಲ!* 🌑 🌑🌑🌑🌑🌑 🙏🏼============🙏🏼
ಒಂದು ಊರಿನಲ್ಲಿ *ನಿವೃತ್ತಿ* ಹೊಂದಿದ ಹಿರಿಯರೆಲ್ಲಾ ಸೇರಿ ಒಂದು *ಸಂಘವನ್ನು* ಸ್ಥಾಪಿಸಿಕೊಂಡರು. ಆ ಸಂಘದ ಉದ್ದೇಶವೇನೆಂದರೆ ಸಂಘದ ಸದಸ್ಯರೆಲ್ಲರೂ ಪರಸ್ಪರರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ಒಳಿತು ಕೆಡಕುಗಳಿಗೆ ಸ್ಪಂದಿಸುವುದಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿಗೆ ಉಪಯೋಗವಾಗಿದ್ದಲ್ಲದೆ, ತಮ್ಮ ಜೀವನದ ಸಂಧ್ಯಾ ಕಾಲವು ಸಾರ್ಥಕವಾಗಿ ನಡೆಯುತ್ತಿದೆ ಎನ್ನುವ ಸಂತೃಪ್ತಿಯೂ ಅವರಲ್ಲಿ ಉಂಟಾಗಿತ್ತು.
ಸಂಘದ ಸದಸ್ಯರು ಪ್ರತಿದಿನ ಸಾಯಂಕಾಲ ಒಂದೆಡೆ ನಿಯಮಿತವಾಗಿ ಸೇರಿ ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಿರಲಾಗಿ ಒಂದು ದಿನವೂ ತಪ್ಪದೇ ಸಂಜೆಯ ಕಾರ್ಯಕಲಾಪಗಳಲ್ಲಿ ಭಾಗಿಯಾಗುತ್ತಿದ್ದ ಆ ಸಂಘದ ಕಾರ್ಯದರ್ಶಿ ಸಾಲಾಗಿ ಮೂರು ದಿನಗಳ ಕಾಲ ಬರಲಿಲ್ಲ.
ಇದರಿಂದ ಆತಂಕಗೊಂಡ ಆ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳ ಯೋಗಕ್ಷೇಮದ ಕುರಿತು ತಿಳಿದುಕೊಂಡು ಬರಲು ಒಬ್ಬ ಸದಸ್ಯನನ್ನು ಅವರ ಮನೆಗೆ ಕಳುಹಿಸಿದರು. ಅವನಿಂದ ತಿಳಿದು ಬಂದ ವಿಷಯವೇನೆಂದರೆ, ಕಾರ್ಯದರ್ಶಿಗಳ ಮಗನಿಗೆ ಬೇರೊಂದು ಊರಿಗೆ ವರ್ಗವಾಗಿತ್ತು. ಅವರ ಪತ್ನಿಯೂ ಸಹ ಕೆಲವು ವರ್ಷಗಳ ಹಿಂದೆ ಕಾಲವಾಗಿದ್ದರಿಂದ ದಿಕ್ಕು ತೋಚದಂತಾಗಿ ಒಂಟಿತನದಿಂದ ಅವರು ಖಿನ್ನರಾಗಿದ್ದರು.
ಇದನ್ನು ತಿಳಿದುಕೊಂಡ ಅಧ್ಯಕ್ಷರು ನೇರವಾಗಿ ಕಾರ್ಯದರ್ಶಿಗಳ ಮನೆಗೆ ಹೋದರು. ಹೊರಗಡೆ ಬಹಳ ಚಳಿ ಇದ್ದದ್ದರಿಂದ ಇಬ್ಬರೂ ಅಡಿಗೆ ಮನೆಯಲ್ಲಿದ್ದ ಒಲೆಯ ಬಳಿ ಹೋದರು. ಒಲೆಯಲ್ಲಿದ್ದ ಕಟ್ಟಿಗೆಗಳು ನಿಗಿ ನಿಗಿ *ಕೆಂಡವಾಗಿ ಚೆನ್ನಾಗಿ ಉರಿಯುತ್ತಿದ್ದವು.* ಅಧ್ಯಕ್ಷರು ಒಂದು ಮಾತನ್ನೂ ಆಡದೆ ಒಲೆಯಲ್ಲಿದ್ದ ಉರಿಯುತ್ತಿದ್ದ ಒಂದು *ಕೆಂಡವನ್ನು* ತೆಗೆದು ದೂರದಲ್ಲಿರಿಸಿದರು. ಒಂದೆರಡು ಕ್ಷಣಗಳಲ್ಲಿ ಅದು ಆರಿ *ಇದ್ದಿಲಾಯಿತು* .
ಅಧ್ಯಕ್ಷರು ತಕ್ಷಣವೇ ಎದ್ದು ಹೋಗಿ ಬರುತ್ತೇನೆ ಎಂದು ಹೇಳಿದರು. ಮನೆಯ ಅಂಗಳದವರೆಗೆ ಅವರೊಂದಿಗೆ ಬಂದ ಕಾರ್ಯದರ್ಶಿಗಳು, "ನನಗೆ ಒಳ್ಳೆಯ ಗುಣಪಾಠವನ್ನು ಹೇಳಿದಿರಿ. ನಾಳೆಯಿಂದ ನಾನು ಪ್ರತಿದಿನ ಸಂಜೆ ನಡೆಯುವ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ" ಎಂದರು.
"ಹೌದಾ!" ಎಂದ ಅಧ್ಯಕ್ಷರಿಗೆ ಮಾತಿಗೆ ಪ್ರತಿಯಾಗಿ ಕಾರ್ಯದರ್ಶಿಗಳು, "ಒಲೆಯಲ್ಲಿನ ಇತರೆ *ಕೆಂಡಗಳ* ಜೊತೆಯಲ್ಲಿ ಇದ್ದಾಗ ಒಂದು ಕೆಂಡವು ನಿಗಿ ನಿಗಿಯಾಗಿ ಉರಿದು ಶಾಖ ಮತ್ತು ಬೆಳಕನ್ನು ಕೊಡುತ್ತಿತ್ತು. ಅದನ್ನು *ಪ್ರತ್ಯೇಕಿಸಿ* ಬೇರೆ ಮಾಡಿದಾಗ ಅದು ತನ್ನ ಸ್ವಭಾವವನ್ನು ಕಳೆದುಕೊಂಡು *ಇದ್ದಿಲಾಗಿ* ಮಾರ್ಪಟ್ಟಿತು. ಇದನ್ನು ಕಂಡ ಸಂಘದ ಕಾರ್ಯದರ್ಶಿ, ನಾನು *ಕೆಂಡದಂತಿರುತ್ತೇನೆ* .... *ಇದ್ದಲಾಗಿ* ಮಾರ್ಪಡುವುದಿಲ್ಲ" ಎಂದು ಪಶ್ಚಾತ್ತಾಪ ಪಡುತ್ತಾ ಹೇಳಿದರು.
ವ್ಯಕ್ತಿಯೊಬ್ಬ ಸಮಾಜಮುಖಿಯಾಗಿದ್ದರೆ ಅವನಲ್ಲಿನ *ಶಕ್ತಿ ಪ್ರಜ್ವಲಿಸಿ* ಪ್ರವರ್ಧಮಾನಕ್ಕೆ ಬರುತ್ತದೆ. ಅದೇ ಒಂಟಿಯಾಗಿದ್ದರೆ ಅವನಲ್ಲಿನ *ಕರ್ತೃತ್ವ* ಶಕ್ತಿ ಕ್ಷೀಣಿಸಿ ಅವನು ಕಳಾಹೀನನಾಗುತ್ತಾನೆ.
===============================
===============================
(ಆಧಾರ: ಹೈಂದವಿ ಎನ್ನುವವರು ಬರೆದ ಆಕಾಶ ದೀಪಾಲು - ಆಕಾಶ ದೀಪಗಳು ಎನ್ನುವ ( *ತೆಲುಗಿನ ನೀತಿ ಕಥೆಗಳ ಸಂಗ್ರಹದಿಂದ ಆಯ್ದ ಕಥೆ* )
No comments:
Post a Comment