Sunday, 6 October 2019



ನೀ ಹರಿಣದಂತೆ ಸುಂದರಿ...
••••••••••••••••••••
ಲಂಗ ದಾವಣಿಯ
ಹುಡುಗಿ,
ನೀ ಸುಂದರಿ,
ಹರಿಣದಂತೆ
ಜಿಗಿಯುವ
ಎಲೆ ಬೆಡಗಿ,
ಬೆಚ್ಚಿ ಬಿದ್ದನಲ್ಲ
ಈ ಹುಡುಗ
ನಿನ್ನ ಗೆಜ್ಜೆಯ
ನಿನಾದಕೆ,
ಹಾರಾಡುವ
ಮುಂಗರುಳು,
ಓಲಾಡುವ
ನೀಳ ಜಡೆ,
ಏ ಬಟ್ಟಲು
ಕಂಗಳ ಚೆಲುವೆ,
ಹೊಳೆಯುವ
ದಂತ ಮುತ್ತಿನ
ಸಾಲುಗಳು
ಮೈ ಮರೆಸಿದವು
ನಮ್ಮೀ ಹಡುಗನ,
ಒಲವಿನ ಮುತ್ತಿನ
ಕರಿಮಣಿ ಹಿಡಿದು
ಕಾದಿಹನವ,
ಇನ್ನು ಬೇಡ ತಡ,
ಕೊರಳೊಡ್ಡಿ
ಬಂದು ಬಿಡು ಬೇಗ,
ಬಂದು ಬಿಡು ಬೇಗ.
*****************.🙂

No comments:

Post a Comment