Sunday, 12 March 2017

ಈ ಪೋಟೋ ನೋಡಿದರೆ ಸ್ವಲ್ಪ ಭಯವೆನಿಸುತ್ತದೆಯಲ್ಲವೇ?
ಈ ಫೋಟೋವನ್ನು ನಿಮ್ಮ ಸ್ಮಾರ್ಟ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಿ.ಫೋನ್, ಪೋರ್ ಟ್ರೈಟ್ ಮೋಡಲ್ಲಿಯೇ ಲಾಕ್ ಆಗಿರಲಿ. ನಂತರ, ನಿಮ್ಮ ಫೋನ್ ನ್ನು ಎಡಕ್ಕೆ ಪೂರ್ಣ ಅಡ್ಡ ಆಗುವವರೆಗೆ ತಿರುಗಿಸಿ ನೋಡಿ, ಆಗ ತಾನಾಗಿಯೇ ನಿಮ್ಮ ಮುಖದಲ್ಲಿ ಮುಗಳು ನಗೆ ಅರಳಿಯೇ ಅರಳುತ್ತದೆ..... :-)
ಸ್ನೇಹಿತರಿಗೆಲ್ಲ ಶುಭೋದಯ. ನಗೆಯೊಂದಿಗೆ ಅರಳಿದ ಸಂತೋಷ ದಿನವಿಡೀ ನಿಮ್ಮ ಜೊತೆಯಲ್ಲಿರಲಿ... :-)
ತನ್ನ ಅಸ್ಥಿತ್ವ ಯಾರಿಗೂ
ಅನಿವಾರ್ಯವಲ್ಲ
ಎಂಬುದನ್ನು ಅರಿತವನೇ
ನಿಜವಾದ ಜ್ಞಾನಿ..
**ದಾರ್ಶನಿಕ
ಚೆಂದದ ಅಮಲು
===========
ಚೆಂದದ ಅಮಲೇರಿತ್ತು,
ಮರೆತಿದ್ದ ಮುಂದಿನ ಮುಪ್ಪು
ಹಿಂದಿನಿಂದ ಅಣಕಿಸುತ್ತಿತ್ತು,
ಒಣಗಿದ ಸುಕ್ಕುಗಳು ಮರೆಯಲ್ಲಿದ್ದವು
ಕಾಲನ ಕರೆಗೆ ಕಾಯುತ್ತ....
ಈಗಿನ ಅಂದದ ಮುಖ
ಮಸುಕಾಗಲಿತ್ತು, ಆದರೆ
ಈಗಿನ ಚೆಂದದ ಮದ
ಎಲ್ಲವನ್ನೂ ಮರೆ ಮಾಡಿತ್ತು,
ಎಲ್ಲರನ್ನೂ ಮರೆಸಿತ್ತು.
ಕವಿ ಬಣ್ಣಿಸುವ ಈಗಿನ
ಹೂ ನಗೆ ಅಹಂಕಾರದ
ಪ್ರತೀಕವಾಗಿತ್ತು,
ಹಿರಿಯರ ಕಣ್ಣೀರಿಗೆ
ಕಾರಣವಾಗಿತ್ತು
ಕಾಲ, ಕಾಲವನ್ನು
ಕಾದು ಜೀವವನ್ನು
ಹಣ್ಣು ಮಾಡಿತು,
ಚೆಂದದ ಮದ ಇಳಿಸಿತು,
ಕಣ್ಣುಗಳಲ್ಲಿ ಪಶ್ಚಾತ್ತಾಪದ
ಹನಿಗಳನ್ನುರಿಳಿಸಿತು.
********************* (ಹಳೆಯ ಕೆಲವು ಗೆರೆಗಳು)
Like
Comment
ಹೆಂಗಸನ್ನು ಚಂಚಲೆ ಅಂತಾರೆ, ಆದರೆ ಗಂಡಸರ ಕಣ್ಣುಗಳಷ್ಟು ಅಲ್ಲ... :-)
ಅಲ್ಲವೇ? :-)
ಮನಸ್ಸನ್ನು, ಎದೆಯನ್ನು
ಮುದಗೊಳಿಸುವವರು ಬೇಕು,
ಮುದಿಗೊಳಿಸುವವರಲ್ಲ.
ತಾಳುವಿಕೆಗಿಂತ
ತಪವು ಇಲ್ಲ ಎಂದು
ದಾಸರು ಹೇಳಿದ್ದಾರೆ


ಆದರೆ, ವಿರಹದಲ್ಲಿ
ನಲ್ಲೆ ನಲ್ಲನ,
ನಲ್ಲ ನಲ್ಲೆಯ
ಕಾಯುವಿಕೆಗಿಂತ
ಬೇರೆ ತಪವು
ಇಲ್ಲ ಎಂದು
ಪ್ರೇಮ ಕವಿಗಳು
ಹೇಳುತ್ತಾರೆ.... :-)
ಗಂಡಸಾದರೆ ಅಗತ್ಯ ಬಿದ್ದಾಗ ಹೀಗೂ ಮಾಡ ಬಹುದು..
... :-) ಇಲ್ಲೇ FB ಲೈಬ್ರರಿಯಲ್ಲಿ ಸಿಕ್ಕಿದ ಒಂದು ತರಲೆ ಫೋಟೋ... :-)