Wednesday, 2 July 2014

ವಿರಹ - ಮಿಲನ

ಅರ್ಥವಾಗದ ಕಸಿವಿಸಿ,
ಭಾರವಾದ ಹೃದಯ,
ದೀರ್ಘವಾದ ನಿಟ್ಟುಸಿರುಗಳ
ಕಡಲು ಭೋರ್ಗರೆದರೂ
ಮಿಸುಕಾಡುತ್ತಿಲ್ಲ ಮನ,
ನೀರವ ರಾತ್ರಿಯಲ್ಲಿ
ಜೀರುಂಡೆಗಳ ಸದ್ದು,
ಮತ್ತಷ್ಟು ಜಡಗೊಂಡಿದೆ ದೇಹ,
ಏಕೆ ಹೀಗೆಂದು ಅರ್ಥವಾಗದೆ
ಬಳಲಿದೆ, ತೊಳಲಾಡಿದೆ,
ಕಡೆಗೊಮ್ಮೆ ರಾತ್ರಿ ತಡವಾಗಿ
ಬಂದ ಚಂದಿರ ನಸುನಗುತ
"ನಿನ್ನಳಲು ನಾನಿಲ್ಲದೆ" ಅಂದ.
ಕೇಳಿ ಗರಿ ಕೆದರಿತು ನನ್ನ ಮನ,
ಹೌದೆನಿಸಿ ಹೂವಿನಂತೆ ಹಗುರಾದೆ,
ಇನಿಯನೆದೆಯಲ್ಲಿ ತಲೆಯಿಟ್ಟು ಮೈ ಮರೆತೆ.


02.07.2014

No comments:

Post a Comment