Monday, 14 July 2014

ಓ ದೇವ ಕರುಣಿಸು ....


ರಾಗ ದ್ವೇಷಗಳ ಸರ ಮಾಲೆ
ಮನದಲ್ಲಿ ತುಂಬಿರುವ ವಂಚನೆಯ
 ಆಲೋಚನೆಗಳು
ಹುಡುಕಿದರೂ ಸಿಗದ ಕಾರುಣ್ಯ
ಎಲ್ಲೋ ಯಾವಾಗಲೋ
ಮರೆಯಾದ  ಮಾನವತೆ ,
ನಾ ಮೇಲು ನೀ ಕೀಳೆಂಬ
ಅಸತ್ಯದ ಅಮಲು ,
ಬರುವ ಸುಖವೆಲ್ಲಾ ನನಗೇ
ಬರಲೆಂಬ ದುರಾಸೆ,
ಹೊಂದಿಕೊಳ್ಳಲಾರದ  ಸ್ವಪ್ರತಿಷ್ಠೆ
ಪೂಜೆಯ ಹೆಸರಲ್ಲಿ ಕಂದಾಚಾರಗಳು,
ಒಂದೇ , ಎರಡೇ
ಎಲ್ಲವನ್ನೂ ಹೆಸರಿಸಲಾರೆ,
ಮನುಷ್ಯನಾಗಿದ್ದಾನೆ
ಮನುಷ್ಯ ಜನ್ಮದ ವಿರೂಪ ,
ದೇವ ನೀನೆ ಕರುಣಿಸು
ಸದ್ಬುದ್ಧಿ, ಸನ್ನಡತೆ, ಸಜ್ಜನಿಕೆಯ ವರವನು
ಒಮ್ಮೆ ಪಾವನವಾಗಲಿ  ಈ ಭೂಮಿ
ಎಲ್ಲ ದುರುಳತೆಯು ತೊಲಗಿ.

15.07.2014


No comments:

Post a Comment