Sunday, 24 August 2014


ದೇವರ ಪ್ರಸಾದ
ಇವತ್ತಿನ ಸಂಯುಕ್ತ ಕರ್ನಾಟಕದ ಮುಖಪುಟದ ಈ ಸುದ್ದಿ ನೋಡಿ.
ದೇವಸ್ಥಾನದ ಪ್ರಸಾದ ತಿಂದು 60 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರಂತೆ.
ಎಂತ ವಿಪರ್ಯಾಸ ಅಲ್ಲವೇ? ಭಕ್ತರು ದೇವರ ಪ್ರಸಾದವೆಂದು ನಂಬಿಕೆಯಿಂದ
ಸ್ವೀಕರಿಸಿದ್ದಕ್ಕೆ ಈ ಗತಿ.

ಬಹಳ ಹಿಂದೆ ಒಂದು ವಿಷಯ, ಕತೆಯೋ ಅಥವಾ ನಿಜ ಸಂಗತಿಯೋ ನೆನಪಿಲ್ಲ, ಕೇಳಿದ್ದೆ.
ಒಂದು ಊರಲ್ಲಿ ಒಂದು ನಿಗೂಢವಾದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಹರಡೀತಂತೆ.
ಯಾವುದೋ water born infection ನಿಂದ ಆ ಕಾಯಿಲೆ ಹರಡುತ್ತಿದೆ ಎಂದು ಗೊತ್ತಾದರೂ,
ಅದರ ಮೂಲ ಯಾವುದೆಂದು ಗೊತ್ತಾಗಲಿಲ್ಲ. ಜನರು ಕುಡಿಯುವ ನೀರಿನ ಭಾವಿಗಳ ನೀರಿನ sample ಗಳ ಪರೀಕ್ಷೆಯೂ ನಡೆಯಿತು. ಅವು ಸರಿಯಾಗಿಯೇ ಇದ್ದವು. ಕೊನೆಗೆ ಊರಿನ ಒಬ್ಬ ಯುವ ಮುಖಂಡ ಧೈರ್ಯ ಮಾಡಿ ಆ ಊರಿನ ದೇವಸ್ಥಾನದಲ್ಲಿ ಕೊಡುತಿದ್ದ ತೀರ್ಥದ sample ನ್ನು ಪರೀಕ್ಷೆ ಮಾಡಿದಾಗ ಅದರಲ್ಲಿತ್ತಂತೆ ಆ infection. ನಂತರ, ಮುಂದಿನ ಕ್ರಮ ತೆಗೆದು ಕೊಂಡರೆನ್ನಿ.

ಈಗ ಈ ತಾಜಾ ಸುದ್ದಿ.

ಇದರಿಂದ ನನಗನ್ನಿಸುವುದು, ದೇವಸ್ಥಾನವೇ ಆದರೂ ಅಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿ ಕೊಳ್ಳುವುದು ಭಕ್ತರ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ಅದರಲ್ಲೂ ಭಕ್ತರಿಗೆ ಹಂಚುವ ತೀರ್ಥಪ್ರಸಾದಾಗಳು ಶುದ್ಧವಾಗಿ ತಯಾರಾಗ ಬೇಕು. ಜನರು ಭಕ್ತಿಯಿಂದ ಏನು ಕೊಟ್ಟರೂ ಪ್ರಸಾದವೆಂದು ಕಣ್ಣು ಮುಚ್ಚಿ ತೆಗೆದು ಕೊಳ್ಳುತ್ತಾರೆ. ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು, ಮತ್ತು ಮುಜರಾಯಿ ದೇವಸ್ಥಾನಗಳಾದರೆ ಸಂಬಂಧಿತ ಸರಕಾರಿ ಇಲಾಖೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಹೋಟೆಲುಗಳ ಶುಚಿತ್ವದ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಆಗಾಗ check ಮಾಡುವಂತೆ ದೇವಸ್ಥಾನಗಳ ಪರಿಸ್ಥಿತಿಯನ್ನೂ check ಮಾಡಿದರೆ ತಪ್ಪಿಲ್ಲವೇನೋ? ಒಟ್ಟಿನಲ್ಲಿ ದೇವರ ಪ್ರಸಾದ ತೀರ್ಥಗಳಿಂದಲೂ ಅನಾರೋಗ್ಯ ಹರಡುವ ವಿಪರ್ಯಾಸ ನಡೆಯ ಬಾರದು. ಅಲ್ಲವೇ ?

Photo: ಇವತ್ತಿನ ಸಂಯುಕ್ತ ಕರ್ನಾಟಕದ ಮುಖಪುಟದ ಈ ಸುದ್ದಿ ನೋಡಿ.
ದೇವಸ್ಥಾನದ ಪ್ರಸಾದ ತಿಂದು 60 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರಂತೆ.
ಎಂತ ವಿಪರ್ಯಾಸ ಅಲ್ಲವೇ? ಭಕ್ತರು ದೇವರ ಪ್ರಸಾದವೆಂದು ನಂಬಿಕೆಯಿಂದ 
ಸ್ವೀಕರಿಸಿದ್ದಕ್ಕೆ ಈ ಗತಿ.

ಬಹಳ ಹಿಂದೆ ಒಂದು ವಿಷಯ, ಕತೆಯೋ ಅಥವಾ ನಿಜ ಸಂಗತಿಯೋ ನೆನಪಿಲ್ಲ, ಕೇಳಿದ್ದೆ. 
ಒಂದು ಊರಲ್ಲಿ ಒಂದು ನಿಗೂಢವಾದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಹರಡೀತಂತೆ.
ಯಾವುದೋ water born infection ನಿಂದ ಆ ಕಾಯಿಲೆ ಹರಡುತ್ತಿದೆ ಎಂದು ಗೊತ್ತಾದರೂ,
ಅದರ ಮೂಲ ಯಾವುದೆಂದು ಗೊತ್ತಾಗಲಿಲ್ಲ. ಜನರು ಕುಡಿಯುವ ನೀರಿನ ಭಾವಿಗಳ ನೀರಿನ sample ಗಳ ಪರೀಕ್ಷೆಯೂ ನಡೆಯಿತು. ಅವು ಸರಿಯಾಗಿಯೇ ಇದ್ದವು. ಕೊನೆಗೆ ಊರಿನ ಒಬ್ಬ ಯುವ ಮುಖಂಡ ಧೈರ್ಯ ಮಾಡಿ ಆ ಊರಿನ ದೇವಸ್ಥಾನದಲ್ಲಿ ಕೊಡುತಿದ್ದ ತೀರ್ಥದ sample ನ್ನು ಪರೀಕ್ಷೆ ಮಾಡಿದಾಗ ಅದರಲ್ಲಿತ್ತಂತೆ ಆ infection. ನಂತರ, ಮುಂದಿನ ಕ್ರಮ ತೆಗೆದು ಕೊಂಡರೆನ್ನಿ.

ಈಗ ಈ ತಾಜಾ ಸುದ್ದಿ.

ಇದರಿಂದ ನನಗನ್ನಿಸುವುದು, ದೇವಸ್ಥಾನವೇ ಆದರೂ ಅಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿ ಕೊಳ್ಳುವುದು ಭಕ್ತರ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ಅದರಲ್ಲೂ ಭಕ್ತರಿಗೆ ಹಂಚುವ ತೀರ್ಥಪ್ರಸಾದಾಗಳು ಶುದ್ಧವಾಗಿ ತಯಾರಾಗ ಬೇಕು. ಜನರು ಭಕ್ತಿಯಿಂದ ಏನು ಕೊಟ್ಟರೂ ಪ್ರಸಾದವೆಂದು ಕಣ್ಣು ಮುಚ್ಚಿ ತೆಗೆದು ಕೊಳ್ಳುತ್ತಾರೆ. ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು, ಮತ್ತು ಮುಜರಾಯಿ ದೇವಸ್ಥಾನಗಳಾದರೆ ಸಂಬಂಧಿತ ಸರಕಾರಿ ಇಲಾಖೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಹೋಟೆಲುಗಳ ಶುಚಿತ್ವದ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಆಗಾಗ check  ಮಾಡುವಂತೆ ದೇವಸ್ಥಾನಗಳ ಪರಿಸ್ಥಿತಿಯನ್ನೂ check ಮಾಡಿದರೆ ತಪ್ಪಿಲ್ಲವೇನೋ? ಒಟ್ಟಿನಲ್ಲಿ ದೇವರ ಪ್ರಸಾದ ತೀರ್ಥಗಳಿಂದಲೂ ಅನಾರೋಗ್ಯ ಹರಡುವ ವಿಪರ್ಯಾಸ ನಡೆಯ ಬಾರದು. ಅಲ್ಲವೇ ?

Saturday, 23 August 2014

ಮುಖವಾಡ

ಮುಖವಾಡ ಬೇಕು ಮುಖವಾಡ,
ಸುಳ್ಳು ಹೇಳಲು ಮುಖವಾಡ ಬೇಕು ,
ನಿಜ ಹೇಳದಿರಲು ಮುಖವಾಡ ಬೇಕು,
ಇಲ್ಲದ ಪ್ರೀತಿಯನ್ನು ಇದೆಯನ್ನಲು
ವಂಚನೆಯ ಮುಖವಾಡ ಬೇಕು ,

ಇರುವ ಪ್ರೀತಿಯನ್ನು
ತೋರಿಸದಿರಲು ಮುಖವಾಡ ಬೇಕು ,
ಮನಸಿನ ಒಳಗನ್ನು
ಮುಚ್ಚಿಡಲು ಮುಖವಾಡ ಬೇಕೇ ಬೇಕು,

ಒಲ್ಲದ ನಗುವನ್ನು ಮುಖದಲ್ಲಿ
ತರಲು ಮುಖವಾಡ ಬೇಕು,
ಬೇಡದ ನೆಂಟರನ್ನು ಬರ ಮಾಡಿಕೊಳ್ಳಲು
ಮುಖವಾಡ  ಬೇಕೇ ಬೇಕು

ಸಲ್ಲದ ಭರವಸೆ ಕೊಡಲು ಮುಖವಾಡ ಬೇಕು
ಕೊಟ್ಟ ಭರವಸೆ ನಡೆಯಲಿಲ್ಲವೆನಲು ಮುಖವಾಡ ಬೇಕು,
ಮನದಲ್ಲಿ ಚಿಂತೆ, ಮುಖದಲ್ಲಿ ನಗೆಯ ಮುಖವಾಡ
ಮನದಲ್ಲಿ ಹಗೆ, ಮುಖದಲ್ಲಿ ಸ್ನೇಹದ ಮುಖವಾಡ,

ಒಳಗೆ  ಕಾಮನೆಗಳು, ಬಯಕೆಗಳು,
ಮೇಲೆ ಸಂತ ಸನ್ಯಾಸಿಯ ಮುಖವಾಡ,
ಮನಸ್ಸಿನ ಹೆದರಿಕೆಯ ಹುತ್ತ
ಮುಚ್ಚಲು ಮೇಲೊಂದು ಧೈರ್ಯದ ಮುಖವಾಡ

ಪೂರ್ಣ ಬದುಕಿಗೇ ಬೇಕು
ಬಗೆ ಬಗೆಯ ಮುಖವಾಡಗಳು
ಅವು ಪೂರ್ಣ ಕಳಚಿದ ದಿನವೇ
ಈ  ಇಹದ ಬಂಧನಕ್ಕೆ  ವಿದಾಯ,
ಮತ್ತೆ ಪರದ ಆಸೆಯ  ಮುಖವಾಡ .

23.08.2014






Friday, 22 August 2014

ಒತ್ತಾಯ - ಒತ್ತಡ.

ಒತ್ತಾಯಕ್ಕೂ ಒತ್ತಡಕ್ಕೂ
ಇರುವ ವ್ಯತ್ಯಾಸವೇನು?
ಕನ್ನಡ ಭಾಷೆಯ ಅಭಿವ್ಯಕ್ತಿಯಂತೆ
ಒತ್ತಾಯವನ್ನು 'ಮಾಡುವುದು' ಅನ್ನುತ್ತಾರೆ,
ಒತ್ತಡವನ್ನು 'ತರುವುದು' ಅನ್ನುತ್ತಾರೆ,
ಒಬ್ಬನೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ
ತಾನು ಬಯಸಿದ ಕೆಲಸವನ್ನು ಮಾಡಿಸ ಬೇಕೆಂದು
ಮಾಡುವ ಪ್ರಯತ್ನವನ್ನು ಒತ್ತಾಯ ಎನ್ನ ಬಹುದೇನೋ.
ಆದರೆ, ಅದೇ ಕೆಲಸ ಮಾಡಿಸಲು ಮೂರನೆಯ
ವ್ಯಕ್ತಿಯ ಮೂಲಕ ಅಸಿಂಧುವಾದ ದಾರಿಯಲ್ಲಿ,
ಮತ್ತು ಕೆಲಸ ಮಾಡಬೇಕಾದ ವ್ಯಕ್ತಿಯ
ದುರ್ಬಲತೆಗಳನ್ನು ಹಾಗೂ ಪ್ರತಿಕೂಲ ಪರಿಸ್ಥಿತಿಗಳನ್ನು
ಬಳಸಿಕೊಂಡು ಪ್ರಯತ್ನಿಸುವುದನ್ನು ಒತ್ತಡವೆನ್ನ ಬಹುದು.

ಈ ಒತ್ತಾಯ ಮತ್ತು ಒತ್ತಡ, ಎರಡಕ್ಕೂ
ಮಣಿದು ನಾವು ನಮ್ಮತನವನ್ನು ಬಿಟ್ಟು ಕೊಡಬಾರದು.
ಯಾವುದೇ, ಒತ್ತಾಯ, ಒತ್ತಡ, ಸಲಹೆ ಅಥವಾ ಸೂಚನೆಯನ್ನು
ನಮ್ಮ ಸ್ವಂತ ಮನಸ್ಸಿನ ಮೂಸೆಯಲ್ಲಿ ವಿಮರ್ಶೆ ಮಾಡಿ,
ತೂಗಿ ನೋಡಿಯೇ ಮುಂದುವರಿಯ ಬೇಕು.


21.08.2014

Wednesday, 20 August 2014

ಗಣತಂತ್ರದಾಟ.

ಭಾರತಾಂಬೆಯ ಮಕ್ಕಳು ನಾವು
ನಮಗೇನೂ ಬಂಧನವಿಲ್ಲ, ನಾವು
ಸರ್ವತಂತ್ರ ಸ್ಞತಂತ್ರರು, ನಮ್ಮನ್ನಾರೂ
ಕೇಳುವವರಿಲ್ಲ, ನಾವಾಡಿದ್ದೇ ಆಟ,
ಅದು ಗಣತಂತ್ರದಾಟವಂತೆ, ಇಲ್ಲಿ
ತಂತ್ರಗಳಿಗೇ ಬೆಲೆಯಂತೆ, ಲಕ್ಶ್ಮಿಯದೆ
ಕಳೆಯಂತೆ, ಸಂತರಿಗೆ ಬೆಲೆ ಇಲ್ಲವಂತೆ
ಧೋತಿ ಕುರ್ತಾಗಳೇ ಇಲ್ಲಿ ರಾಜರಂತೆ,
ಪ್ರಜೆಗಳ ಪಾಡು ಪಡಿಪಾಟಲಂತೆ,
ಇದೆಲ್ಲಾ ವಿಚಿತ್ರವೆನಿಸಿದರೂ ನಿಜವೇ ಅಂತೆ.

18.08.2014
ಕಾಂಚಾಣ

ಕುರುಡು ಕಾಂಚಾಣ
ಎನ್ನುವುದು ವಾಡಿಕೆ, ಆದರೆ,
ಕಾಂಚಾಣವಿಲ್ಲದ ಜೀವನವಿಲ್ಲ,
ಆದರೂ ಕಾಂಚಾಣವೇ ಜೀವನವಲ್ಲ.

18.08.2014
ಭುವಿಯ ಕನಸು.

ಒಂದು ದಿನ ರಾತ್ರಿಯಲಿ ಮಳೆ ಬಂದು
ಕಾದು ಬೆಂದ ಭುವಿ ತಣಿದು ತಂಪಾಯಿತು
ಶಾಂತಿಯಿಂದ ಸೊಂಪಾಗಿ ಕನಸ ಕಂಡಿತು,
ಆದರೆ ಮರುದಿನದ ಉರಿ ಹಗಲು ಕಾದಿತ್ತು,
ರಾತ್ರಿಯ ಕನಸು ಉರಿದು ಬೂದಿಯಾಯಿತು.

18.08.2014
ಮಕ್ಕಳು

ನಮ್ಮ ಮಕ್ಕಳು ಎಲ್ಲ ರೀತಿಯಲ್ಲಿ
ನಮಗಿಂತ ಎತ್ತರಕ್ಕೆ ಬೆಳೆದಾಗ
ಸಿಗುವ ಖುಶಿಗಿಂತ ಮಿಗಿಲಾದ ಖುಶಿಯಿಲ್ಲ.
ಆದರೆ ಅದೇ ಮಕ್ಕಳು
ನಮ್ಮನ್ನೇ ಮರೆತಾಗ
ಆಗುವ ದುಃಖಕ್ಕಿಂತ ಮಿಗಿಲಾದ ದುಃಖವೂ ಇಲ್ಲ.

16.08.2014
ಶೋಷಣೆ.

ಹಳೇ ಕಜ್ಜಿ ನಾಯಿಯನ್ನು
ಅಟ್ಟಿಸಿಕೊಂಡು ಹೋದವು
ಸೊಕ್ಕಿನ ಗಟ್ಟಿ ನಾಯಿಗಳೈದು,
ಓಡಿತಾ ನಾಯಿ, ಓಡಿ ಓಡಿ
ಸುಸ್ತಾಯಿತು, ತಾಳಲಾರದೆ
ಮುಂದೆ ತಡೆ ಗೋಡೆ,
ಇನ್ನೂ ಓಡಲು ಜಾಗವಿಲ್ಲ.....

ಕೊನೆಗೆ ಅದಕ್ಕೂ ಉಕ್ಕಿತು ರೋಷ,
ಪ್ರತಿಭಟಿಸಿಯೇ ಸಾಯಬೇಕೆಂದು,
ಕೆರಳಿ ಹಿಂತಿರುಗಿತು, ವಿಕಾರವಾಗಿ
ಬೊಬ್ಬಿರಿದು ಬೆದರಿಸಿತು,
ಓಡಿದರು ಶೋಷಕರು
ಬಾಲ ಮುದುರಿ ಎದ್ದು ಬಿದ್ದು,
ತಾವು ಹಿಂತಿರುಗಿ ಹೆದರಿ.

ಶೋಷಕರೇ ಎಚ್ಚರವಿರಲಿ,
ಶೋಷಿತರು ಸಹನೆ ಕಳೆದು
ತಿರುಗಿ ಬಿದ್ದಾರು ಒಂದು ದಿನ,
ಆ ದಿನ ನಿಮಗಾದೀತು
ಅತಿ ಕೆಟ್ಟ ದಿನ, ಮಹಾ ದುರ್ದಿನ.

16.08.2014(
ಭ್ರಮ ನಿರಸನ

ಯೌವನದ ಅಮಲೇರಿತ್ತು
ಒಂಟಿತನದ ಏಕತಾನ
ಬೇಸರವಾಗಿ ಸಾಕಾಗಿತ್ತು,
ಪ್ರೀತಿ ಪ್ರೇಮವೆಂದು
ಹಾತೊರೆದು ಸೇರಿದವು
ಜೀವಿಗಳು ಸಹಜೀವಿಗಳೆಂದು,
ಬಾಳು ಆಹಾ ಎಷ್ಟು
ಸುಂದರ ಎನಿಸಿ ಸಾಗಿತು,
ಬದಲಾಯಿತು ಕಾಲ,
ಇಳಿಯಿತು ಏರಿದ ಅಮಲು,
ಮೇಲರಿಮೆ ಕೀಳರಿಮೆಗಳು
ತಲೆಗೇರಿದವು, ಒಲುಮೆ
ಇಲ್ಲದ ಸಹಬಾಳ್ವೆ
ಅನಿವಾರ್ಯವಾಯಿತು,
ಭ್ರಮನಿರಸನವೇ ಕೊನೆಯಾಯ್ತು.

14.08.2014
ಇದೊಂದು ಹನಿ ಕವನ ನೋಡಿ, ಚಿಕ್ಕದಾದಾರೂ ಕಲ್ಪನೆ ವಿಶೇಷವಾಗಿದೆ ಅನಿಸಿತು. ಅದಕ್ಕೇ ಹಂಚಿ ಕೊಳ್ತಿದ್ದೀನಿ.
ಕಸಬರಿಗೆ
ಅರಮನೆ
ತುಂಬ
ಓಡಾಡಿದರೂ;
ಮೂಲೆ
ಅದರ
ಅರಮನೆ.



(ಗೆಳೆಯ ಸಿದ್ದು ದಿವಾನ್ ಅವರದು )

Saturday, 9 August 2014

ತೆರೆದ ಕೊಳವೆ ಭಾವಿಗಳಲ್ಲಿ ಮಕ್ಕಳು ಬೀಳುವ ದುರಂತಗಳು - ಒಂದು ಸಲಹೆ.

ಈ ತರಹದ ಅವಘಡಗಳು ಸಂಭವಿಸಿದಾಗಷ್ಟೆ ಎಚ್ಚರಗೊಂಡು ವ್ಯರ್ಥ ಪ್ರಯತ್ನದಲ್ಲಿ ಲಕ್ಷಾಂತರ ರೂಪಾಯಿ
ಖರ್ಚು ಮಾಡುವ ಬದಲು, ಸರಕಾರ village level ಅಧಿಕಾರಿಗಳನ್ನು ಬಳಸಿಕೊಂಡು, ಅಂತ ಕೊಳವೆ ಭಾವಿಗಳನ್ನು ಗುರುತಿಸಿ, as a one time measure, ತಾನೇ PWD ನ್ನು ಬಳಸಿಕೊಂಡು, ಅಂತ ಎಲ್ಲ ಭಾವಿಗಳನ್ನು ಮುಚ್ಚಿಸಿ ಹಾಕಬೇಕು.
ಆಮೇಲೆ, ನೀರು ಬರದ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚುವ ಜವಾಬ್ದಾರಿಯನ್ನು, ಭಾವಿ ಕೊರೆದ company ಯದೇ ಎಂದು condition ಮಾಡಬೇಕು. ಕೂಡಲೇ ಈ ಕೆಲಸ ಮಾಡಿದರೆ, ಕೊರೆದು ತೆಗೆದ ಮಣ್ಣೂ ಅಲ್ಲೇ ಇರುತ್ತದೆ, ಮುಚ್ಚುವುದೂ ಸುಲಭ. ಯಾವುದೇ ಊರಿನಲ್ಲಿ ಕೊಳವೆ ಭಾವಿ ಕೊರೆಯುವುದು village level ಅಧಿಕಾರಿಗಳಿಗೆ ಗೊತ್ತಾಗಿಯೇ ಆಗುತ್ತದೆ. ಅವರು ಇದನ್ನು ಸುಲಭವಾಗಿ follow up ಮಾಡಬಹುದೆಂದು ನನ್ನ ಅನಿಸಿಕೆ.

ಇತ್ತೀಚೆಗಿನ ಕೆಲವು ವರದಿಗಳ ಪ್ರಕಾರ, ಕೆಲವು ಸರಕಾರಿ department ಗಳೇ ವಿವಿಧ ಯೋಜನೆಗಳ
ಅಡಿಯಲ್ಲಿ, ಕೊಳವೆ ಭಾವಿಗಳನ್ನು ಕೊರೆಯಿಸಿ, ಅವುಗಳಲ್ಲಿ ನೀರು ಬಾರದಿದ್ದಾಗ ಅವುಗಳನ್ನು ಮುಚ್ಚದೆ
ಹಾಗೇ ಬಿಟ್ಟು ಹೋಗುತ್ತಾರಂತೆ. ಇದು ಅತೀ ಅಕ್ಷಮ್ಯ. ಇಂಥ fail ಆದ ಭಾವಿಗಳನ್ನು ಸಂಬಂಧ ಪಟ್ಟ
ಅಧಿಕಾರಿಗಳು ಕೂಡಲೇ ಮುಚ್ಚಿಸಬೇಕು. ಇದನ್ನು ಗ್ರಾಮ ಪಂಚಾಯತಿ followup ಮಾಡಿ, ಅಗುವ ಹಾಗೆ
ಮಾಡಬೇಕು. ನಿಷ್ಕಾಳಜಿ ಮಾಡಿದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ suspend ಮಾಡಬೇಕು,
ಯಾಕಂದರೆ, ಇದು ಸಾವಿಗೆ ಕಾರಣವಾಗ ಬಹುದಾದ ಗುರುತರವಾದ ಕರ್ತವ್ಯಲೋಪ.

ನೀರು ಬರದ ಭಾವಿಗಳನ್ನು ಕೂಡಲೇ ಮುಚ್ಚಲು ತಪ್ಪಿದ company ಗಳ
ಕೊರೆಯುವ ಯಂತ್ರಗಳನ್ನು ಜಿಲ್ಲಾಡಳಿತ ಕೂಡಲೇ ಮುಟ್ಟುಗೋಲು ಹಾಕಿಕೊಂಡು, ಆ ನೀರು ಬರದ ಭಾವಿಯನ್ನು company ಮುಚ್ಚಿದ ಮೇಲಷ್ಟೇ ಯಂತ್ರಗಳನ್ನು ರಿಲೀಸ್ ಮಾಡಬೇಕು. ಈ ರೀತಿಯ ನಿಷ್ಟುರವಾದ ಕ್ರಮ ತೆಗೆದು ಕೊಂಡರೆ ಮಾತ್ರ, ಪಾಪ, ಈ ತರ ನಿಷ್ಪಾಪಿ ಮಕ್ಕಳು ಇಂಥ ಭಾವಿಗಳಲ್ಲಿ ಬಿದ್ದು ಸಾಯುವುದನ್ನು ತಪ್ಪಿಸ ಬಹುದು. ಮಾಧ್ಯಮದವರು, ಬರೇ ಇಂಥ ಘಟನೆಗಳಿಗಷ್ಟೇ ಪ್ರಚಾರ ಕೊಡುವ ಬದಲು, ಮೇಲೆ ಹೇಳಿದ ರೀತಿಯಲ್ಲಿ ಸರಕಾರದ ಮೇಲೆ ಒತ್ತಡ ತರ ಬಹುದು.

Thursday, 7 August 2014

ಬಿಂಬ

ಇಣುಕಿ ನೋಡಿದೆ
ನನ್ನೆದೆಯಲ್ಲಿ ನಾನೇ,
ಅಲ್ಲಿ ಕುಳಿತಿದೆ
ನಿನ್ನ ಬಂಬ,
ಅಳಿಸಲಾರೆ ನಾನದನು.
ನೀ ನನ್ನ ಮರೆತರೂ,
ಜೀವಂತವಿರುವುದು ನಿನ್ನ
ನೆನಪು, ನನ್ನದೆ
ಬಡಿಯುವವರೆಗೂ.

06.08.2014
ಪ್ರಶ್ನೆ

ಭವ ಬಂಧನವಾದರೆ
ಯಾವುದು ಮುಕ್ತಿ?
ಇಹ ನಷ್ವರವಾದರೆ
ಯಾವುದು ಶಾಶ್ವತ?
ಕೇಳಿದ್ದು ಅಸತ್ಯವಾದರೆ,
ಮತ್ಯಾವುದು ಸತ್ಯ?
ಜೀವ ಭಾರವಾದರೆ,
ಯಾವುದು ಹಗುರ?
ನೋಡಿದ್ದು ಅದೃಶ್ಯವಾದರೆ,
ಯಾವುದು ದೃಶ್ಯ?
ಲಭಿಸಿದ್ದು ನಿರಾಶೆಯಾದರೆ,
ಯಾವುದು ಆಶೆ?
ಎಲ್ಳಾ ಅಯೋಮಯ,
ಅಸ್ಪಷ್ಟ, ಅಷ್ಟೇ ಅಲ್ಲ,
ಅಸಂಬದ್ಧ ಪ್ರಶ್ನೆಗಳು,
ಬರೇ ಪ್ರಶ್ನೆಗಳು.

05.08.2014.

Monday, 4 August 2014

ಸುಂದರಿ

ಸುಂದರಿ
ನೀನಿಡುವ ಹೆಜ್ಜೆ ಹೆಜ್ಜೆಗೆ
ಬದಿಯಿಂದ ಬದಿಗೆ
ತೊನೆದಾಡುವ ನೀಳ ಜಡೆ,
ತೆಳು ಸೊಂಟಕ್ಕೆ ಎಳೆದು
ಸಿಕ್ಕಿಸಿದ ಸೆರಗು, ಬಳುಕುವ
ಆ ಸೊಂಟದಲಿ ಕುಳಿತು
ಹೊಳೆಯುತ್ತ ಸಾಗುವ
ತುಂಬಿದ ಬಿಂದಿಗೆ,
ಆಗೊಮ್ಮೆ ಈಗೊಮ್ಮೆ
ತುಳುಕಿ ಚೆಲ್ಲುವ
ಮುತ್ತಿನ ನೀರು,
ಸೀರೆಯ ಅಂಚಿನಲಿ
ಮಿಂಚಿ ಮಿಂಚಿ
ಮರೆಯಾಗುವ
ಬೆಳ್ಳಿ ಗೆಜ್ಜೆಯ
ಕೆಂಪು ಪಾದಗಳು,
ನನ್ನ ಹೆಜ್ಜೆಯ ಸದ್ದಿಗೆ
ನೀ ಬೆಚ್ಚಿ ತಿರುಗಿದಾಗ,
ಹಾರಾಡಿದ ಮುಂಗುರುಳು,
ಮಿನುಗಿದ ಲಜ್ಜೆ ತುಂಬಿದ
ಹರಿಣದ ಕಣ್ಣುಗಳು...
ಆದರೆ ಈಗೆಲ್ಲಿ ನೀ
ಹರಿಣಾಕ್ಷಿ, ಎಲ್ಲಿ
ಹುಡುಕಿದರೂ ಸಿಗಲೊಲ್ಲೆ,
ಬರೇ ನೆನಪಾಗಿ ಇಲ್ಲಿರುವೆ
ನನ್ನೆದೆಯ ಮೂಲೆಯಲಿ.
*****
03.08.2014.

 ಫೇಕ್ ಪ್ರೋಫೈಲ್ಸ ಇನ್ ಫೇಸ್ ಬುಕ್


FB ನಲ್ಲಿ fake frofiles ಗಳ ಹಾವಳಿ ಜಾಸ್ತಿ ಆಗಿದೆ.
ತಮ್ಮ ನಿಜ ಹೆಸರು ಮತ್ತು ಫೋಟೋ ಕೊಡದೆ, ಕಾಲ್ಪನಿಕ ಹೆಸರು ಮತ್ತು ಫೋಟೊ ಹಾಕಿಕೊಂಡು account ಮಾಡುತ್ತಾರೆ. ಉದಾಹರಣೆಗೆ ಮಧ್ಯವಯಸ್ಕ ಹೆಂಗಸರು ಸಿನೆಮಾ ತಾರೆಯರಂಥ ಫೋಟೊ ಹಾಕಿ ಕೊಳ್ಳುವುದು, ವಯಸ್ಕ ಗಂಡಸರು young models ಫೋಟೋ ಹಾಕಿ ಕೊಳ್ಳುವುದು, ಮುಂದೆ personal contacts ಬೆಳಸಿಕೊಂಡು, ಆಮೇಲೆ ಭ್ರಮನಿರಸನವಾಗಿ, ವಿಪರೀತ ಪರಿಣಾಮಗಳಿಗೆ ಅವಕಾಶವಾಗುತ್ತದೆ. ಎಲ್ಲರೂ ಹಾಗೇ ಅಂತಲ್ಲ. ಕೆಲವು ದುರುದ್ದೇಶಿ ಹಾಗೂ ಅತೃಪ್ತ ವಿಕೃತ ಮನಸ್ಸುಳ್ಳವರು ಹಾಗೆ ಮಾಡುತ್ತಿದ್ದಾರೆಂದು, fb related ಅಪರಾಧಗಳ ವರದಿಗಳನ್ನು ನೋಡಿದಾಗ ಅನ್ನಿಸುತ್ತದೆ.

ಇದನ್ನು ತಡೆಗಟ್ಟಲು, ಏನಾದರೂ ಮಾಡಬೇಕು ಎಂದು ನನಗನ್ನಿಸುತ್ತದೆ. ನನಗೆ ಹೊಳೀತಾ ಇರುವ ಒಂದು ಆಲೋಚನೆಯೆಂದರೆ, fb ಖಾತೆ ತರೆಯಲು "photo identity card with date of birth" ನ್ನು ಕಡ್ಡಾಯ ಮಾಡುವುದು. Contact details ಈಗಿನಂತೆ optional ಇರಲಿ. ಇದರಿಂದ ಪರಸ್ಪರ mistaken identity ಯಿಂದ ಆಗುವ ಅನಾಹುತಗಳು ತಪ್ಪಲು ಸಹಾಯವಾಗ ಬಹುದು.

ಆದರೆ, ಇದನ್ನು ಕಾರ್ಯ ರೂಪಕ್ಕೆ ತರಲು fb management ಒಪ್ಪ ಬೇಕಲ್ಲ? Fb top management ನ್ನು ಈ ವಿಷಯದಲ್ಲಿ approach ಆಗುವುದು ಹೇಗೆ? ಅವರನ್ನು ಈ ಬಗ್ಗೆ
ಒತ್ತಾಯಿಸಲು, ನಾವೆಲ್ಲ ಸ್ನೇಹಿತರು ಸೇರಿ ಚರ್ಚಿಸಿ ಪ್ರಯತ್ನಿಸ ಬಹುದೇ?

********★*******


02.08.2014
ಶ್ರಮ 

ಬಲ್ಲವರ  ಮಾತು ನಿಜವಾಗಿ ಹೊಂಗಿರಣದಂತೆಯೆ ಇರುತ್ತದೆ.
ರವೀಂದ್ರನಾಥ ಠಾಗೋರ್ ಅವರ ಈ ನುಡಿ ಮುತ್ತು ನೋಡಿ.
ಮೊದಲಿಗೆ ನಮಗೆ ನಮ್ಮದನ್ನು ನಮ್ಮದಾಗಿಸಿಕೊಳ್ಳುವ
ಮಾನಸಿಕ ಮತ್ತು ದೈಹಿಕ ಶಕ್ತಿ ಬೆಳಸಿ ಕೊಳ್ಳಬೇಕು.
ಈ ಶಕ್ತಿ ಸಾಮರ್ಥ್ಯವಿದ್ದರೆ ಮಾತ್ರ, ನಮ್ಮದೆಲ್ಲ ಸಕಲ ಸೌಭಾಗ್ಯಗಳು
ತಾವಾಗಿಯೇ ನಮ್ಮನ್ನು ಬಂದು ಸೇರುತ್ತವೆ. ಸ್ವೀಕರಿಸುವ
ಸಾಮರ್ಥ್ಯವಿದ್ದರೆ ನಮಗೆ ಸೇರಬೇಕಾದ್ದನ್ನು ಯಾರಿಗೂ
ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದು ನಮಗೇ ಸೇರುತ್ತದೆ.

Photo: ಬಲ್ಲವರ ಮಾತು ನಿಜವಾಗಿ ಹೊಂಗಿರಣದಂತೆಯೆ ಇರುತ್ತದೆ.
ರವೀಂದ್ರನಾಥ ಠಾಗೋರ್ ಅವರ ಈ ನುಡಿ ಮುತ್ತು ನೋಡಿ.
ಮೊದಲಿಗೆ ನಮಗೆ ನಮ್ಮದನ್ನು ನಮ್ಮದಾಗಿಸಿಕೊಳ್ಳುವ
ಮಾನಸಿಕ ಮತ್ತು ದೈಹಿಕ ಶಕ್ತಿ ಬೆಳಸಿ ಕೊಳ್ಳಬೇಕು.
ಈ ಶಕ್ತಿ ಸಾಮರ್ಥ್ಯವಿದ್ದರೆ ಮಾತ್ರ, ನಮ್ಮದೆಲ್ಲ ಸಕಲ ಸೌಭಾಗ್ಯಗಳು
ತಾವಾಗಿಯೇ ನಮ್ಮನ್ನು ಬಂದು ಸೇರುತ್ತವೆ. ಸ್ವೀಕರಿಸುವ
ಸಾಮರ್ಥ್ಯವಿದ್ದರೆ ನಮಗೆ ಸೇರಬೇಕಾದ್ದನ್ನು ಯಾರಿಗೂ
ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದು ನಮಗೇ ಸೇರುತ್ತದೆ.
ನಾಗರ ಪಂಚಮಿ
 
ಇಂದು ನನ್ನ ಹಬ್ಬ. ಆದರೆ ನನಗಾರೂ ಹಾಲೆರೆಯುವುದಿಲ್ಲ.
ಬರೆ ಕಲ್ಲ ನಾಗನಿಗೆ ಹಾಲೆರೆಯುತ್ತಾರೆ. ನಾನೇ ಹಾಲು ಹುಡುಕಿಕೊಂಡು
ಹೋದರೆ, ಒಂದೂ ಹೊಡೆದು ಹಾಕುತ್ತಾರೆ, ಇಲ್ಲವೆ ಚೀಲದಲ್ಲಿ ಹಿಡಿದು
ಕಾಡಿಗೆ ಬಿಟ್ಟು ಬರುತ್ತಾರೆ.
 
01.08.2014 
Photo: ಇಂದು ನನ್ನ ಹಬ್ಬ. ಆದರೆ ನನಗಾರೂ ಹಾಲೆರೆಯುವುದಿಲ್ಲ.
ಬರೆ ಕಲ್ಲ ನಾಗನಿಗೆ ಹಾಲೆರೆಯುತ್ತಾರೆ. ನಾನೇ ಹಾಲು ಹುಡುಕಿಕೊಂಡು
ಹೋದರೆ, ಒಂದೂ ಹೊಡೆದು ಹಾಕುತ್ತಾರೆ, ಇಲ್ಲವೆ ಚೀಲದಲ್ಲಿ ಹಿಡಿದು
ಕಾಡಿಗೆ ಬಿಟ್ಟು ಬರುತ್ತಾರೆ. :-)
Some people with pervert motives also become friends on fb to end up in disasters like this. One should be very careful in fb friendships, and particularly ladies should be extra careful and should not develop intimacies with facebook friends, unless the antecedents of the person is verified independent of the fb. This is only an advice by an elderly person with a good intention.
ಮಹಾತ್ಮಾ ಗಾಂಧೀಜಿಯವರ ಅರ್ಥಗರ್ಭಿತ ಮಾತು.
ಮನುಷ್ಯ ಫಲಾಫಲಗಳ ಅಪೇಕ್ಷೆಯಿಲ್ಲದೆ ಶ್ರಮ ಪಡಬೇಕು.
ಶ್ರಮ ಪಟ್ಟರೆ ಫಲ ಸಿಗ ಬಹುದು, ಅಥವಾ ಸಿಗದೆಯೂ
ಇರಬಹುದು. ಆದರೆ ಶ್ರಮ ಪಡದೆ ಸುಮ್ಮನಿದ್ದರೆ ಖಂಡಿತವಾಗಿ
ಏನೂ ಸಿಗುವುದಿಲ್ಲ.
 
30.07.2014 
Photo: ಮಹಾತ್ಮಾ ಗಾಂಧೀಜಿಯವರ ಅರ್ಥಗರ್ಭಿತ ಮಾತು.
ಮನುಷ್ಯ ಫಲಾಫಲಗಳ ಅಪೇಕ್ಷೆಯಿಲ್ಲದೆ ಶ್ರಮ ಪಡಬೇಕು.
ಶ್ರಮ ಪಟ್ಟರೆ ಫಲ ಸಿಗ ಬಹುದು, ಅಥವಾ ಸಿಗದೆಯೂ
ಇರಬಹುದು. ಆದರೆ ಶ್ರಮ ಪಡದೆ ಸುಮ್ಮನಿದ್ದರೆ ಖಂಡಿತವಾಗಿ
ಏನೂ ಸಿಗುವುದಿಲ್ಲ.
ATTITUDE.
**************
""Pleasure in the Job
puts perfection in
the work." -Aristotle.


(Sometimes, great thoughts of great people evoke
some feelings and thoughts in our minds too. Following
writeup is one such reaction to the above mentioned great
thought of great philosopher. If you find this interesting,
continue to read, if not just discard the same.)
************

A very good saying to emulate.
This can be put in a different way
also like this,

"Perfection in the work, would bring pleasure unto us"

I have seen many people, even quite seniors,
doing their office or other jobs grudgingly
without any satisfaction or pleasure.

This is true right from in case of the house maids to white
collared job holders. A house maid does
all the household work at the behest of her
mistress, gets many concessions pleading
her problems. But, she does the work grudgingly inside,
cursing her fate which has made her to do such a job,
even though, practically there are no better prospects
for her which even she herself knows.

Same way, many office goers are not satisfied with their
jobs. Many a times they curse their fate for not
getting a better job. They go on criticizing their
employers, for not offering them better amenities,
without giving any thought to employers genuine
constraints. They simply forget that this job has
found them a livelihood and been supporting their family.

Although it is not bad or wrong to try for a better job,
it is very much necessary and desirable to do the job
on hand with dedication, diligence and perfection. This
will get the person concerned job satisfaction, and
consequent immense pleasure and mental peace,
which will definitely make himself and his family to
lead a happy life.



30.07.2014
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ"

ಎಷ್ಟು ಸುಂದರವಾದ ನಾಣ್ಣುಡಿಯಲ್ಲವೇ? ಚಿಂತೆ ಮಾಡಬಾರದು, ಅಂದರೆ ನಿಷ್ಕ್ರಿಯವಾಗಿರಬೇಕೆಂದಲ್ಲ. ಯಾವುದೇ ವಿಷಯವಿರಲಿ, ಸುಮ್ಮನೆ ಚಿಂತೆ ಮಾಡಿಕೊಂಡು ಕೂಡದೇ, ಸರಿಯಾಗಿ ವಿಚಾರ ಮಾಡಿ ಸರಿ ನಿರ್ಣಯ ತೆಗೆದು ಕೊಂಡು ಕೆಲಸ ಮಾಡಿ ಮುಗಿಸಿ ನಿಶ್ಚಿಂತೆಯಿಂದಿರಬೇಕು. ಅಂಥವೆರಿಗೆ ಚಿಂತೆಯಿಲ್ಲದವರು ಅನ್ನುತ್ತಾರೆ. ಅಂಥವರು ನೆಮ್ಮದಿಯಿಂದ ಇರುತ್ತಾರೆ ಮತ್ತು ಅಂಥವರು ಈ ನಾಣ್ಣುಡಿಯನ್ನು ಸತ್ಯ ಮಾಡಿದಂತೆ.

ಸ್ನೇಹಿತರೇ, ನೀವು ಹೀಗಿಲ್ಲದಿದ್ದಲ್ಲಿ, ಹೀಗಾಗಲು ಪ್ರಯತ್ನಿಸಿ ನೋಡಿ.

28.07.2014