Monday, 4 August 2014

ಸುಂದರಿ

ಸುಂದರಿ
ನೀನಿಡುವ ಹೆಜ್ಜೆ ಹೆಜ್ಜೆಗೆ
ಬದಿಯಿಂದ ಬದಿಗೆ
ತೊನೆದಾಡುವ ನೀಳ ಜಡೆ,
ತೆಳು ಸೊಂಟಕ್ಕೆ ಎಳೆದು
ಸಿಕ್ಕಿಸಿದ ಸೆರಗು, ಬಳುಕುವ
ಆ ಸೊಂಟದಲಿ ಕುಳಿತು
ಹೊಳೆಯುತ್ತ ಸಾಗುವ
ತುಂಬಿದ ಬಿಂದಿಗೆ,
ಆಗೊಮ್ಮೆ ಈಗೊಮ್ಮೆ
ತುಳುಕಿ ಚೆಲ್ಲುವ
ಮುತ್ತಿನ ನೀರು,
ಸೀರೆಯ ಅಂಚಿನಲಿ
ಮಿಂಚಿ ಮಿಂಚಿ
ಮರೆಯಾಗುವ
ಬೆಳ್ಳಿ ಗೆಜ್ಜೆಯ
ಕೆಂಪು ಪಾದಗಳು,
ನನ್ನ ಹೆಜ್ಜೆಯ ಸದ್ದಿಗೆ
ನೀ ಬೆಚ್ಚಿ ತಿರುಗಿದಾಗ,
ಹಾರಾಡಿದ ಮುಂಗುರುಳು,
ಮಿನುಗಿದ ಲಜ್ಜೆ ತುಂಬಿದ
ಹರಿಣದ ಕಣ್ಣುಗಳು...
ಆದರೆ ಈಗೆಲ್ಲಿ ನೀ
ಹರಿಣಾಕ್ಷಿ, ಎಲ್ಲಿ
ಹುಡುಕಿದರೂ ಸಿಗಲೊಲ್ಲೆ,
ಬರೇ ನೆನಪಾಗಿ ಇಲ್ಲಿರುವೆ
ನನ್ನೆದೆಯ ಮೂಲೆಯಲಿ.
*****
03.08.2014.

No comments:

Post a Comment