Friday, 22 August 2014

ಒತ್ತಾಯ - ಒತ್ತಡ.

ಒತ್ತಾಯಕ್ಕೂ ಒತ್ತಡಕ್ಕೂ
ಇರುವ ವ್ಯತ್ಯಾಸವೇನು?
ಕನ್ನಡ ಭಾಷೆಯ ಅಭಿವ್ಯಕ್ತಿಯಂತೆ
ಒತ್ತಾಯವನ್ನು 'ಮಾಡುವುದು' ಅನ್ನುತ್ತಾರೆ,
ಒತ್ತಡವನ್ನು 'ತರುವುದು' ಅನ್ನುತ್ತಾರೆ,
ಒಬ್ಬನೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ
ತಾನು ಬಯಸಿದ ಕೆಲಸವನ್ನು ಮಾಡಿಸ ಬೇಕೆಂದು
ಮಾಡುವ ಪ್ರಯತ್ನವನ್ನು ಒತ್ತಾಯ ಎನ್ನ ಬಹುದೇನೋ.
ಆದರೆ, ಅದೇ ಕೆಲಸ ಮಾಡಿಸಲು ಮೂರನೆಯ
ವ್ಯಕ್ತಿಯ ಮೂಲಕ ಅಸಿಂಧುವಾದ ದಾರಿಯಲ್ಲಿ,
ಮತ್ತು ಕೆಲಸ ಮಾಡಬೇಕಾದ ವ್ಯಕ್ತಿಯ
ದುರ್ಬಲತೆಗಳನ್ನು ಹಾಗೂ ಪ್ರತಿಕೂಲ ಪರಿಸ್ಥಿತಿಗಳನ್ನು
ಬಳಸಿಕೊಂಡು ಪ್ರಯತ್ನಿಸುವುದನ್ನು ಒತ್ತಡವೆನ್ನ ಬಹುದು.

ಈ ಒತ್ತಾಯ ಮತ್ತು ಒತ್ತಡ, ಎರಡಕ್ಕೂ
ಮಣಿದು ನಾವು ನಮ್ಮತನವನ್ನು ಬಿಟ್ಟು ಕೊಡಬಾರದು.
ಯಾವುದೇ, ಒತ್ತಾಯ, ಒತ್ತಡ, ಸಲಹೆ ಅಥವಾ ಸೂಚನೆಯನ್ನು
ನಮ್ಮ ಸ್ವಂತ ಮನಸ್ಸಿನ ಮೂಸೆಯಲ್ಲಿ ವಿಮರ್ಶೆ ಮಾಡಿ,
ತೂಗಿ ನೋಡಿಯೇ ಮುಂದುವರಿಯ ಬೇಕು.


21.08.2014

No comments:

Post a Comment