ಮುಖವಾಡ
ಮುಖವಾಡ ಬೇಕು ಮುಖವಾಡ,
ಸುಳ್ಳು ಹೇಳಲು ಮುಖವಾಡ ಬೇಕು ,
ನಿಜ ಹೇಳದಿರಲು ಮುಖವಾಡ ಬೇಕು,
ಇಲ್ಲದ ಪ್ರೀತಿಯನ್ನು ಇದೆಯನ್ನಲು
ವಂಚನೆಯ ಮುಖವಾಡ ಬೇಕು ,
ಇರುವ ಪ್ರೀತಿಯನ್ನು
ತೋರಿಸದಿರಲು ಮುಖವಾಡ ಬೇಕು ,
ಮನಸಿನ ಒಳಗನ್ನು
ಮುಚ್ಚಿಡಲು ಮುಖವಾಡ ಬೇಕೇ ಬೇಕು,
ಒಲ್ಲದ ನಗುವನ್ನು ಮುಖದಲ್ಲಿ
ತರಲು ಮುಖವಾಡ ಬೇಕು,
ಬೇಡದ ನೆಂಟರನ್ನು ಬರ ಮಾಡಿಕೊಳ್ಳಲು
ಮುಖವಾಡ ಬೇಕೇ ಬೇಕು
ಸಲ್ಲದ ಭರವಸೆ ಕೊಡಲು ಮುಖವಾಡ ಬೇಕು
ಕೊಟ್ಟ ಭರವಸೆ ನಡೆಯಲಿಲ್ಲವೆನಲು ಮುಖವಾಡ ಬೇಕು,
ಮನದಲ್ಲಿ ಚಿಂತೆ, ಮುಖದಲ್ಲಿ ನಗೆಯ ಮುಖವಾಡ
ಮನದಲ್ಲಿ ಹಗೆ, ಮುಖದಲ್ಲಿ ಸ್ನೇಹದ ಮುಖವಾಡ,
ಒಳಗೆ ಕಾಮನೆಗಳು, ಬಯಕೆಗಳು,
ಮೇಲೆ ಸಂತ ಸನ್ಯಾಸಿಯ ಮುಖವಾಡ,
ಮನಸ್ಸಿನ ಹೆದರಿಕೆಯ ಹುತ್ತ
ಮುಚ್ಚಲು ಮೇಲೊಂದು ಧೈರ್ಯದ ಮುಖವಾಡ
ಪೂರ್ಣ ಬದುಕಿಗೇ ಬೇಕು
ಬಗೆ ಬಗೆಯ ಮುಖವಾಡಗಳು
ಅವು ಪೂರ್ಣ ಕಳಚಿದ ದಿನವೇ
ಈ ಇಹದ ಬಂಧನಕ್ಕೆ ವಿದಾಯ,
ಮತ್ತೆ ಪರದ ಆಸೆಯ ಮುಖವಾಡ .
23.08.2014
ಮುಖವಾಡ ಬೇಕು ಮುಖವಾಡ,
ಸುಳ್ಳು ಹೇಳಲು ಮುಖವಾಡ ಬೇಕು ,
ನಿಜ ಹೇಳದಿರಲು ಮುಖವಾಡ ಬೇಕು,
ಇಲ್ಲದ ಪ್ರೀತಿಯನ್ನು ಇದೆಯನ್ನಲು
ವಂಚನೆಯ ಮುಖವಾಡ ಬೇಕು ,
ಇರುವ ಪ್ರೀತಿಯನ್ನು
ತೋರಿಸದಿರಲು ಮುಖವಾಡ ಬೇಕು ,
ಮನಸಿನ ಒಳಗನ್ನು
ಮುಚ್ಚಿಡಲು ಮುಖವಾಡ ಬೇಕೇ ಬೇಕು,
ಒಲ್ಲದ ನಗುವನ್ನು ಮುಖದಲ್ಲಿ
ತರಲು ಮುಖವಾಡ ಬೇಕು,
ಬೇಡದ ನೆಂಟರನ್ನು ಬರ ಮಾಡಿಕೊಳ್ಳಲು
ಮುಖವಾಡ ಬೇಕೇ ಬೇಕು
ಸಲ್ಲದ ಭರವಸೆ ಕೊಡಲು ಮುಖವಾಡ ಬೇಕು
ಕೊಟ್ಟ ಭರವಸೆ ನಡೆಯಲಿಲ್ಲವೆನಲು ಮುಖವಾಡ ಬೇಕು,
ಮನದಲ್ಲಿ ಚಿಂತೆ, ಮುಖದಲ್ಲಿ ನಗೆಯ ಮುಖವಾಡ
ಮನದಲ್ಲಿ ಹಗೆ, ಮುಖದಲ್ಲಿ ಸ್ನೇಹದ ಮುಖವಾಡ,
ಒಳಗೆ ಕಾಮನೆಗಳು, ಬಯಕೆಗಳು,
ಮೇಲೆ ಸಂತ ಸನ್ಯಾಸಿಯ ಮುಖವಾಡ,
ಮನಸ್ಸಿನ ಹೆದರಿಕೆಯ ಹುತ್ತ
ಮುಚ್ಚಲು ಮೇಲೊಂದು ಧೈರ್ಯದ ಮುಖವಾಡ
ಪೂರ್ಣ ಬದುಕಿಗೇ ಬೇಕು
ಬಗೆ ಬಗೆಯ ಮುಖವಾಡಗಳು
ಅವು ಪೂರ್ಣ ಕಳಚಿದ ದಿನವೇ
ಈ ಇಹದ ಬಂಧನಕ್ಕೆ ವಿದಾಯ,
ಮತ್ತೆ ಪರದ ಆಸೆಯ ಮುಖವಾಡ .
23.08.2014
No comments:
Post a Comment