Thursday, 13 August 2015

Nice computer colouring.......


No comments, just shared..... 
frown emoticon
If our children grow up with Good Manners and Good habits,
it will be our blissful achievement. Here are two lists of Good Manners and Good habits for children. I had downloaded this
from some on line source for my grand children. It is my earnest request to all the parents to go through these points and make their children to learn and practice them.
Of course, these suggestions are not only for children to practice, but also relevant for everyone to learn and follow for a blissful and
pleasurable life.

ಬರೇ ಸೌಂದರ್ಯವಿದ್ದರೆ ಸಾಲದು,
ಸೌಂದರ್ಯ ಪ್ರಜ್ಞೆಯೂ ಇರ ಬೇಕು.
ಹಾಗೂ ಸೌಂದರ್ಯವನ್ನು ಆದಷ್ಟು ಸಮಯ
ಉಳಿಸಿಕೊಳ್ಳುವ ಜಾಣ್ಮೆಯೂ ಬೇಕು.
******ದಾರ್ಶನಿಕ
ಮನುಷ್ಯನ ಭಾವನಾತ್ಮಕ ಗುಣಗಳನ್ನು ವಿಶ್ಲೇಷಿಸಲು ಅವನ ಕಣ್ಣಿಗೆ ಕಾಣದ ಮೂರು
ಅಂಗಗಳನ್ನು ಗಮನಿಸುತ್ತೇವೆ. ಅವೇ ಹೃದಯ, ಬುದ್ಧಿ ಮತ್ತು ಮನಸ್ಸು. ಒಬ್ಬನ ಹೃದಯ ಕಠಿಣ ಅಥವಾ ಮೃದುವಾಗಿದೆ ಅಂತೇವೆ. ಇನ್ನೊಬ್ಬನ ಮನಸ್ಸು ಚಂಚಲ ಅಥವಾ ದೃಢವಾಗಿದೆ ಅಂತೇವೆ. ಮತ್ತೊಬ್ಬನ ಬುದ್ಧಿ ಸರಿಯಾಗಿದೆ ಅಥವಾ ಅವನಿಗೆ ಬುದ್ದೀನೇ ಸರಿಯಾಗಿಲ್ಲ ಅನ್ನುತ್ತೇವೆ. ಈ ಮೂರು ಅದೃಶ್ಯ
ಅಂಗಗಳೇ ಮನುಷ್ಯ ಜೀವನವನ್ನು ರೂಪಿಸುವ ಮುಖ್ಯ ಅಂಶಗಳು. ಇವುಗಳನ್ನು ಸರಿದಾರಿಯಲ್ಲಿ
ಅಳವಡಿಸಿಕೊಂಡು ಬದುಕುವುದೇ ಜೀವನದ ಸಾರ್ಥಕತೆ.
*****ದಾರ್ಶನಿಕ.
ಗೆಳೆಯರೊಬ್ಬರು FB ಯಲ್ಲಿ ಪೋಷ್ಟ್ ಮಾಡಿದ ಒಂದು ಅಪರೂಪದ ಫೋಟೋ......
ಇದರಲ್ಲಿ ಬುದ್ಧಿವಂತರು ಯಾರೋ.....ದಡ್ಡರು ಯಾರೋ ಗೊತ್ತಿಲ್ಲ......


ಕೆಲವೊಮ್ಮೆ ಉಪಾಯ ಗೊತ್ತಿದ್ದರೂ,
ಅದನ್ನು ಪ್ರಯೋಗಿಸುವ ಸಮಯ
ಪ್ರಜ್ಞೆಯ ಕೊರತೆಯಿಂದ, ಅಪಾಯದಿಂದ
ತಪ್ಪಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ.
*******ದಾರ್ಶನಿಕ
ಯೌವ್ವನದ ಆಕರ್ಷಣೆ, ಉದ್ವೇಗವೆಲ್ಲವೂ ಮುಗಿದು
ಮುಪ್ಪು ಆವರಿಸಿದಾಗಲೂ ಉಳಿದಿರ ಬಹುದಾದ
ಪರಸ್ಪರ ಪ್ರೀತಿಯೇ ನಿರ್ಮಲ, ನಿಷ್ಕಲ್ಮಶ ಪ್ರೇಮ.
(ಚಿತ್ರಗಳು ಅಂತರ್ಜಾಲದ ಕೃಪೆ)


An Interesting article worth reading : An apple story : APPLE GATE
Any comments on this story ???
...............................
Reporter:- PM sir; which fruit do you like?
Modi:- Apple
Reporter:- Breaking news---
Modi does not like Mangoes; Banana; etc.
Let’s ask Congress their views on this.
Manish Tewari:- Modi like Apple means Red color.
This means he likes bloodshed
This means he does not want peace and harmony in the country
Ahmed Patel:- This means Modi is only promoting Hindutva.
He does not like green fruits means he is against Muslims.
This clearly shows Modi has no feelings for Muslims.
Nitish Kumar:- This attitude of Modi is what made us split from NDA.
Rahul Gandhi:- Modi never says which chocolate he likes.
Arnab Goswami :
The nation wants to know why Modi likes apple more than other fruits
The Nation has the right to know this.
Sonia Gandhi:- People of India please ask from where
Modi is going to get the money to buy such an expensive fruit.
Geelani:- This is Modi’s tactic to usurp Kashmir.
We will not allow this to happen.
Yechuri:- Selecting an expensive fruit like Apple shows Modi is pro- capitalist. It also means he is pro corporate and wants to promote Apple products indirectly. Why is he not saying about Samsung etc. We want a CBI enquiry.
Kejriwal:- Traditionally Mango is considered the King of Fruits.
Modi is anti tradition. This is against the interest of the aam aadmi.
Foreign Media:- Modi’s communal policies are hurting the secular fabric of India.
ಲಜ್ಜೆ, ಗಾಂಭೀರ್ಯ, ವಿನಯ, ಗುರು ಹಿರಿಯರಲ್ಲಿ
ಗೌರವ, ಇತ್ಯಾದಿ ಸದ್ಗುಣ ಹಾಗೂ ಸಂಪನ್ನತೆಗಳು
ಇಲ್ಲದ ಯಾರದೇ ಸೌಂದರ್ಯ ಕಾಗದದ ಹೂವಿನಂತೆ.
*******ಸುಭಾಷಿತ
ತಾನು ತಪ್ಪು ಮಾಡಿಯೂ
ತಾನು ಮಾಡೇ ಇಲ್ಲ
ಎನ್ನುವುದು ಉದ್ಧಟತನ,
ತನ್ನ ತಪ್ಪು ತನಗೆ ನಿಜವಾಗಿಯೂ
ಅರಿವಾಗದೇ
ಇರುವುದು ದಡ್ಡತನ,
ತನ್ನ ತಪ್ಪು ಅರಿವಾಗಿಯೂ
ಅದನ್ನು ತಿದ್ದಿ ಕೊಳ್ಳುವ ಪ್ರಯತ್ನ
ಮಾಡದಿರುವುದು ಸಣ್ಣತನ,
ತಾನು ತಪ್ಪು ಮಾಡಿದ್ದಕ್ಕೆ
ನಾನಲ್ಲ, ನೀವೇ ಕಾರಣ
ಎನ್ನುವುದು ಅಹಂಕಾರ.
***ದಾರ್ಶನಿಕ
ಈ ಜಗತ್ತಿನ ಅತ್ಯಂತ ಶೋಚನೀಯ
ವಿಪರ್ಯಾಸವೆಂದರೆ, ಮನುಷ್ಯ ತನ್ನ
ತಪ್ಪಿನಿಂದ ಆಗುವ ಅನಾಹುತಗಳಿಗೆ,
ಇನ್ನೊಬ್ಬರನ್ನು ಹೊಣೆ ಮಾಡುವುದು.
---ದಾರ್ಶನಿಕ
ಸ್ನೇಹಿತರೆಲ್ಲರಿಗೂ ನಮಸ್ಕಾರ...... ನನಗೆ ಅನಿಸಿದಂತೆ ಎಲ್ಲರಿಗೂ ಉಪಯೋಗವಾಗ ಬಹುದಾದ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ....
ಈಗ ನಕಲಿ ಕರೆಂನ್ಸಿ ನೋಟುಗಳ ಹಾವಳಿ ತಂಬಾ ಹೆಚ್ಚಾಗಿದೆ. ಅಸಲಿ ನೋಟುಗಳು ಹೇಗಿರುತ್ತವೆಂಬುದರ ಬಗ್ಗೆ ಸಾಮಾನ್ಯ ಜ್ಞಾನ ವಿಲ್ಲದಿದ್ದರೆ, ಈ ನಕಲಿ ನೋಟುಗಳು ನಮಗೆ ಅಸಲಿ ನೋಟುಗಳಂತೆ ಕಾಣ ಬರುತ್ತವೆ. ಅಂಥ ನೋಟುಗಳನ್ನು ನಾವು ಗೊತ್ತಿಲ್ಲದೆ ತೆಗೆದು ಕೊಂಡು,ಬ್ಯಾಂಕಿಗೆ ತುಂಬಲು ಹೋದಾಗ ಅವರು ಅದನ್ನು seize ಮಾಡಿ ನಾವು ನಮ್ಮ ತಪ್ಪಿಲ್ಲದೇ ಕಷ್ಟದಲ್ಲಿ ಸಿಗುವ ಸಂದರ್ಭ ಬಂದರೂ ಬರಬಹುದು. 500/- ಮತ್ತು 1000/- ದ ನೋಟುಗಳೇ ಈಗ ಹೆಚ್ಚು ಚಲಾವಣೆಯಲ್ಲಿವೆ. ನಕಲಿ ನೋಟುಗಳಿರುವುದು ಸಹ ಈ denomination ಗಳಲ್ಲಿಯೇ ಜಾಸ್ತಿ.
ನಕಲಿ ನೋಟುಗಳನ್ನು ಸ್ವಲ್ಪ ತೀಕ್ಷ್ಣವಾದ ದೃಷ್ಟಿ ಮತ್ತು ಸ್ಪರ್ಶದಿಂದ ಗುರುತಿಸ ಬಹುದು.
ಅಂದರೆ, ಅಸಲಿ ನೋಟುಗಳು ಹೇಗಿರ ಬೇಕೆಂಬ ಬಗ್ಗೆ ನಮಗೆ ಸರಿಯಾದ ಜ್ಞಾನವಿರಬೇಕು. ಇದಕ್ಕೆ ಯಾವುದೆ electronic gadget ಬೇಕಾಗಿಲ್ಲ. ಈ ಕೆಳಗಿನ ಫೋಟೋಗಳಲ್ಲಿರುವ ಅಸಲಿ ನೋಟುಗಳ ಸರಳ ಲಕ್ಷಣಗಳನ್ನು ಮನನ ಮಾಡಿಕೊಂಡರೆ,ಅಸಲಿ ನೋಟುಗಳ್ಯಾವುವು, ನಕಲಿ ನೋಟುಗಳು ಯಾವುವು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚ ಬಹುದು.
ನೋಡಿ, ಜಾಗ್ರತೆ ಮಾಡಿ....ಹಣ ಮತ್ತು ಮರ್ಯಾದೆಯ ಪ್ರಶ್ನೆ....

ಒಬ್ಬರನ್ನು ಬೈಯ್ಯುವುದಕ್ಕೂ
ಒಬ್ಬರೊಡನೆ ಜಗಳವಾಡುವುದಕ್ಕೂ
ಬಹಳ ವ್ಯತ್ಯಾಸವಿದೆ.
ಬೈಯ್ಯುವ ಉದ್ದೇಶ ಒಳ್ಳೆದೂ
ಇರಬಹುದು, ಕೆಟ್ಟದೂ ಇರಬಹುದು.
ಆದರೆ, ಜಗಳ ಯವಾಗಲೂ ಕೆಟ್ಟದೇ.
*****ದಾರ್ಶನಿಕ
ನನ್ನ ಮೆಚ್ಚಿನ ಯವ ಕವಿ.... (ಬಾಲ ಕವಿ ಎನ್ನಲೇ.... smile emoticon, ) Vishwanath Gaonkar ಬರೆದ ಸುಂದರ ಕವನ. ತುಂಬ ಚೆಂದ ಅನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿದ್ದೇನೆ......
+++++++++++++++++++++++++++++++++++++++++++++++++++
ಆ ನೀಳ ಮುಂಗುರುಳು
ಗಾಳವನು ಹಾಕಿದೆ
ತಾಳ ತಪ್ಪಿದ ಮನವು
ಅದಕೆ ವಶವಾಗಿದೆ...
ಮುದ್ದಾದ ನುಣುಪಾದ
ಅವಳ ಮೂಗಿನಮೇಲೆ
ಜಾರುಬಂಡಿ ಆಡುತಿದೆ
ಹುಚ್ಚು ಕನಸು...
ಮೃದುವಾದ ಕಿವಿಯೆಂಬ
ಅಂದದಾ ಬಾವಿಯೊಳು
ಬೀಳಬೇಕೆನ್ನುತಿದೆ
ಎದೆಯ ಉಸಿರು ....
ಚಂದದಾ ಕೈ ನೆನೆದು
ಕೆನ್ನೆ ಕೆಂಪಾಗಿದೆ...
ಕೈತುತ್ತು ತಿನುವಾಸೆ
ಹಸಿವು ಹೆಚ್ಚಾಗಿದೆ...
'ಮುತ್ತಿನ' ಹಾರವನು
ತೊಡಿಸಲೇ ಕೊರಳಿಗೆ..
ಅಪ್ಪುಗೆಯ ಬಹುಮಾನ
ಕೊಡಲೇನು ಆ ಜಡೆಗೆ...
ಅ....
ಅಯ್ಯೋ !! ಸಾಕು ಸಾಕು...
ಪಾಪಿಗಳು ಯಾವತ್ತೂ
ಪ್ರವಚನ ಕೇಳಿ ಪುಣ್ಯಾತ್ಮರಾಗಿ
ಬದಲಾಗುವುದಿಲ್ಲ.

      ****ದಾರ್ಶನಿಕ
(ಗೆಳೆಯ Vishwanath Gaonkar ಅವರ ಇನ್ನೊಂದು ಪುಟ್ಟ ಸುಂದರ ಕವನ -
ನಮ್ಮ ಚೆಂದದ ಹುಡುಗಿಯನ್ನು ವರ್ಣಿಸುತ್ತಾ......... smile emoticon )
================================================
ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು
ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು
ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು
ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,,
ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ
ನಾನೊಬ್ಬ ಅನುರಾಗಿ, ಈಗಾದೆ ಬೈರಾಗಿ
ತುಸುಸರಿಯಿತು ಸೆರಗು, ನಸುನಕ್ಕಳು ಆಕೆ..
ಮನೆಗೆ ಬರದವಳು, ಮನದಲ್ಲೇ ಉಳಿದಳು...
ಜಗದಗಲ ಮೆರೆವಂತ ಮುಖಕಮಲ ನಿನ್ನದು 
ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು
ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ
ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..



ಗಾಯತ್ರೀ ಮಂತ್ರ
****************
ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನ
ಿಂದ ಬರೆಯಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ. ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, "ಓಂ ಭೂರ್ಭುವಃ ಸ್ವಃ" ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.
ಮಂತ್ರ (ಪೀಠಿಕೆ)
(ಋಗ್ವೇದದದ ೩.೬೨.೧೦ ರಲ್ಲಿರುವ ಮೂಲ ಮಂತ್ರ)
ಓಂ ಭೂರ್ಭುವಃ ಸ್ವಃ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೊ ನಃ ಪ್ರಚೋದಯಾತ್
ಕನ್ನಡ ಭಾಷಾಂತರ
ಹಲವಾರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ.
ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ
ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ
ಗಾಯತ್ರೀ ಮಂತ್ರ ಪದಗಳ ಆರ್ಥ:
ಓಂ - ಓಂ
ಭೂಃ - ಭೂಮಿ
ಭುವಃ - ಆಕಾಶ
ಸ್ವಃ - ಅಂತರಿಕ್ಷ
ತತ್ - ಆ
ಸವಿತುಃ - ಸವಿತೃ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
ವರೇಣ್ಯಂ - ಪೂಜಿಪನಾದ
ಭರ್ಗೋ - ತೇಜೋಮಯನಾದ
ದೇವಸ್ಯ - ದೇವನನ್ನು
ಧೀಮಹಿ - ಕುರಿತು ಧ್ಯಾನಿಸುತ್ತೇವೆ
ಧಿಯೋ - ಬುದ್ಧಿ, ವಿವೇಕ
ಯೋ - ಅವನು
ನಃ - ನಮ್ಮೆಲ್ಲರನ್ನು
ಪ್ರಚೋದಯಾತ್ - ಪ್ರಚೋದಿಸಲಿ.
(Sreenath Rayasam ಅವರ ಭಾಷ್ಯ)
ವಿರಹಿಗೊಂದು ಕಿವಿಮಾತು.
**********************
ಮರೆತು ಬಿಡು ನಿನ್ನ ಮರೆತು
ತೊರೆದು ಹೋದವಳನ್ನು,
ನಿನ್ನ ಚಿತ್ರ ತನ್ನ ಹೃದಯದಲ್ಲಿ
ಬರೆದುಕೊಂಡವಳೊಬ್ಬಳು ಬರುವಳು,
ನಿನ್ನೆದೆಯಲ್ಲಿ ಇಡುವಳು ತನ್ನ
ಮೃದು ಹೆಜ್ಜೆ ಗಿಲಿಗಿಲಿಸುತಲಿ,
ನಿನ್ನ ಬರಡು ಹೃದಯ ಪ್ರೀತಿ ತುಂಬಿ
ಹಸಿರಾಗಿ ನಳನಳಿಸುವುದು.
ನಾವು ಪ್ರೀತಿಸುವವರಿಗಿಂತ
ನಮ್ಮನ್ನು ಪ್ರೀತಿಸುವವರನ್ನು
ಪ್ರೀತಿಸುವುದೇ ಪರಮ ಪ್ರೀತಿ,
ಅದೇ ಇಹದ ಪರಮ ಸುಖ,
ದೇವದಾಸನಾಗದೆ ತಿಳಿ ಈ ಸತ್ಯ,
ತಿಳಿದು ಸುಖವಾಗಿರು ನಿತ್ಯ.
೧೨.೦೭.೧೫
ಈ ಜಗತ್ತಿನಲ್ಲಿ ಅತ್ಯಂತ
ತೀವ್ರವಾದ ಹಿಂಸೆಯೆಂದರೆ,
ಅದು ಒಬ್ಬ ಮನುಷ್ಯ
ಇನ್ನೊಬ್ಬ ಮನುಷ್ಯನಿಗೆ
ಕೊಡುವ ಮಾನಸಿಕ ಹಿಂಸೆ.
*******ದಾರ್ಶನಿಕ