Thursday, 13 August 2015

ವಿರಹಿಗೊಂದು ಕಿವಿಮಾತು.
**********************
ಮರೆತು ಬಿಡು ನಿನ್ನ ಮರೆತು
ತೊರೆದು ಹೋದವಳನ್ನು,
ನಿನ್ನ ಚಿತ್ರ ತನ್ನ ಹೃದಯದಲ್ಲಿ
ಬರೆದುಕೊಂಡವಳೊಬ್ಬಳು ಬರುವಳು,
ನಿನ್ನೆದೆಯಲ್ಲಿ ಇಡುವಳು ತನ್ನ
ಮೃದು ಹೆಜ್ಜೆ ಗಿಲಿಗಿಲಿಸುತಲಿ,
ನಿನ್ನ ಬರಡು ಹೃದಯ ಪ್ರೀತಿ ತುಂಬಿ
ಹಸಿರಾಗಿ ನಳನಳಿಸುವುದು.
ನಾವು ಪ್ರೀತಿಸುವವರಿಗಿಂತ
ನಮ್ಮನ್ನು ಪ್ರೀತಿಸುವವರನ್ನು
ಪ್ರೀತಿಸುವುದೇ ಪರಮ ಪ್ರೀತಿ,
ಅದೇ ಇಹದ ಪರಮ ಸುಖ,
ದೇವದಾಸನಾಗದೆ ತಿಳಿ ಈ ಸತ್ಯ,
ತಿಳಿದು ಸುಖವಾಗಿರು ನಿತ್ಯ.
೧೨.೦೭.೧೫

No comments:

Post a Comment