ಗಾಯತ್ರೀ ಮಂತ್ರ
****************
****************
ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನ
ಿಂದ ಬರೆಯಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ. ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, "ಓಂ ಭೂರ್ಭುವಃ ಸ್ವಃ" ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.

ಮಂತ್ರ (ಪೀಠಿಕೆ)
(ಋಗ್ವೇದದದ ೩.೬೨.೧೦ ರಲ್ಲಿರುವ ಮೂಲ ಮಂತ್ರ)
ಓಂ ಭೂರ್ಭುವಃ ಸ್ವಃ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೊ ನಃ ಪ್ರಚೋದಯಾತ್
(ಋಗ್ವೇದದದ ೩.೬೨.೧೦ ರಲ್ಲಿರುವ ಮೂಲ ಮಂತ್ರ)
ಓಂ ಭೂರ್ಭುವಃ ಸ್ವಃ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೊ ನಃ ಪ್ರಚೋದಯಾತ್
ಕನ್ನಡ ಭಾಷಾಂತರ
ಹಲವಾರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ.
ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ
ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ
ಗಾಯತ್ರೀ ಮಂತ್ರ ಪದಗಳ ಆರ್ಥ:
ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ
ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ
ಗಾಯತ್ರೀ ಮಂತ್ರ ಪದಗಳ ಆರ್ಥ:
ಓಂ - ಓಂ
ಭೂಃ - ಭೂಮಿ
ಭುವಃ - ಆಕಾಶ
ಸ್ವಃ - ಅಂತರಿಕ್ಷ
ತತ್ - ಆ
ಸವಿತುಃ - ಸವಿತೃ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
ವರೇಣ್ಯಂ - ಪೂಜಿಪನಾದ
ಭರ್ಗೋ - ತೇಜೋಮಯನಾದ
ದೇವಸ್ಯ - ದೇವನನ್ನು
ಧೀಮಹಿ - ಕುರಿತು ಧ್ಯಾನಿಸುತ್ತೇವೆ
ಧಿಯೋ - ಬುದ್ಧಿ, ವಿವೇಕ
ಯೋ - ಅವನು
ನಃ - ನಮ್ಮೆಲ್ಲರನ್ನು
ಪ್ರಚೋದಯಾತ್ - ಪ್ರಚೋದಿಸಲಿ.

(Sreenath Rayasam ಅವರ ಭಾಷ್ಯ)
No comments:
Post a Comment