Thursday, 13 August 2015

ನನ್ನ ಮೆಚ್ಚಿನ ಯವ ಕವಿ.... (ಬಾಲ ಕವಿ ಎನ್ನಲೇ.... smile emoticon, ) Vishwanath Gaonkar ಬರೆದ ಸುಂದರ ಕವನ. ತುಂಬ ಚೆಂದ ಅನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿದ್ದೇನೆ......
+++++++++++++++++++++++++++++++++++++++++++++++++++
ಆ ನೀಳ ಮುಂಗುರುಳು
ಗಾಳವನು ಹಾಕಿದೆ
ತಾಳ ತಪ್ಪಿದ ಮನವು
ಅದಕೆ ವಶವಾಗಿದೆ...
ಮುದ್ದಾದ ನುಣುಪಾದ
ಅವಳ ಮೂಗಿನಮೇಲೆ
ಜಾರುಬಂಡಿ ಆಡುತಿದೆ
ಹುಚ್ಚು ಕನಸು...
ಮೃದುವಾದ ಕಿವಿಯೆಂಬ
ಅಂದದಾ ಬಾವಿಯೊಳು
ಬೀಳಬೇಕೆನ್ನುತಿದೆ
ಎದೆಯ ಉಸಿರು ....
ಚಂದದಾ ಕೈ ನೆನೆದು
ಕೆನ್ನೆ ಕೆಂಪಾಗಿದೆ...
ಕೈತುತ್ತು ತಿನುವಾಸೆ
ಹಸಿವು ಹೆಚ್ಚಾಗಿದೆ...
'ಮುತ್ತಿನ' ಹಾರವನು
ತೊಡಿಸಲೇ ಕೊರಳಿಗೆ..
ಅಪ್ಪುಗೆಯ ಬಹುಮಾನ
ಕೊಡಲೇನು ಆ ಜಡೆಗೆ...
ಅ....
ಅಯ್ಯೋ !! ಸಾಕು ಸಾಕು...

No comments:

Post a Comment