Sunday, 12 March 2017

ಓ ಚಲುವೆ,
ನಾನರಿಯೆ
ನೀನಾರೆಂದು,
ಆದರೆ ನಾ ಬಲ್ಲೆ
ಈ ನಿನ್ನ ಚೆಲುವು
ನಿನ್ನಿನಿಯನ
ನಿದ್ದೆಗೆಡಿಸಿದೆಯೆಂದು,
ಈ ಮೋಹಕ ರೂಪ,
ಹಾರಾಡುವ
ಮುಂಗುರುಳು
ಕರಿದುಂಬಿ ಕಂಗಳು,
ಮುದ್ದಿಡಬೇಕೆನಿಸುವ
ತುಂಬುಗೆಂಪು ಗಲ್ಲಗಳು,
ಹಿಡಿದಲುಗಾಡಿಸಲೆನಿಸುವ
ಮುದ್ದು ಮುದ್ದು ಗದ್ದ..
ನೀಳ ನಾಸಿಕದಡಿಗೆ
ಮುದ್ದು ಸುರಿಯುವ ನಗು,
ಮುತ್ತು ಪೋಣಿಸಿದಂಥ
ಈ ದಂತ ಪಂಕ್ತಿ,
ಈ ಚೆಂದ ಈ ಅಂದ
ಮತ್ತೇರಿಸದೇ ಬಿಟ್ಟೀತೇ
ನಿನ್ನಿನಿಯನಿಗೆ.... :-)
ನಿನ್ನಿನಿಯನಿಗೆ... :-)

No comments:

Post a Comment