Sunday, 12 March 2017

ಸರಿಯಾದ ಮಾರ್ಗದರ್ಶನವಿಲ್ಲದೆ ಅತಿಯಾದ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವ ವಯಸ್ಕ ಮಿತ್ರರೇ,
ಈ ಪೋಸ್ಟನ್ನು ತಪ್ಪದೆ ಗಮನಿಸಿ, ಮತ್ತು ನಿಮ್ಮ ವಯಸ್ಕ ಮಿತ್ರರ ಗಮನಕ್ಕೂ ತನ್ನಿ.
-------------------------------------
ಇಲ್ಲಿಯೇ ಹುಬ್ಬಳ್ಳಿಯಲ್ಲಿ ನನ್ನ ಮಿತ್ರರೊಬ್ಬರ ಚಿಕ್ಕಪ್ಪ
ಒಬ್ಬರಿದ್ದರು. ವಯಸ್ಸು 65 ವರ್ಷ. BP ಪೇಷಂಟ್. ಸರಿಯಾದ ಚಿಕೆತ್ಸೇನೂ ತಗೆದು ಕೊಳ್ಳುತ್ತಿರಲಿಲ್ಲ. Uneducated ಏನೂ ಅಲ್ಲ ಮತ್ತೆ. Engineer ಆಗಿ government service ನಲ್ಲಿ ಇದ್ದು ರೆಟೈರ್ ಆದವರು. ಸ್ಲಲ್ಪ ಹಠಮಾರಿ.
ಅವರಿಗೆ ಯೋಗಾಭ್ಯಾಸದ ಹವ್ಯಾಸವೋ,ಹುಚ್ಚೋ, ಬಹಳ. ಇತರ ವ್ಯಾಯಾಮಗಳ ಜತೆಗೆ ದಿನಕ್ಕೆ ಒಂದು ಗಂಟೆ ಯೋಗಾಸನಗಳನ್ನು ಹಾಕುತ್ತಿದ್ದರು. ಸಾಕಷ್ಟು ಪ್ರಾಣಾಯಾಮ ಸಹ ಮಾಡುತ್ತಿದ್ದರು ಅದರಲ್ಲಿ ಅರ್ಧ ಗಂಟೆ ಶಿರ್ಷಾಸನ ಬೇರೆ. "ನಿಮಗೆ ವಯಸ್ಸಾಯಿತು. BP ಬೇರೆ ಇದೆ, ಶಿರ್ಷಾಸನ ಎಲ್ಲ ಮಾಡಬೇಡಿ, ಬೇಕಾದರೆ ಸರಳವಾದ ವ್ಯಾಯಾಮಗಳನ್ನು ಮಾಡಿ" ಎಂದು ಯಾರು ಹೇಳಿದರೂ ಕೇಳುತ್ತಿರಲಿಲ್ಲ. ಯೋಗದಿಂದ ಎಲ್ಲಾ ವ್ಯಾಧಿಗಳು ನಿವಾರಣೆಯಾಗುತ್ತದೆ, ಯಾವ ವ್ಯಾಧಿಯೂ ಬರುವುದಿಲ್ಲ ಎಂಬುದು ಅವರ ಅಚಲವಾದ ನಂಬಿಕೆ.
ಈಗ ನಾಲ್ಕು ದಿನಗಳ ಹಿಂದೆ ಬೆಳಿಗ್ಗೆ ಎಂದಿನಂತೆ ಶೀರ್ಷಾಸನ ಹಾಕಿದರು. ಐದು ನಿಮಿಷಗಳಲ್ಲಿ ಎಚ್ಚರ ತಪ್ಪಿ ಕೆಳಗೆ ಉರುಳಿದರು. ಕೂಡಲೇ ಆಸ್ಪತ್ರೆಗೆ ಸೇರಿಸಿದಾಗ ಗೊತ್ತಾಯಿತು, ಶೀರ್ಷಾಸನ ಹಾಕಿದಾಗ ರಕ್ತ ಅತಿ ವೇಗವಾಗಿ ಮಿದುಳಿಗೆ ನುಗ್ಗಿ ರಕ್ತ ನಾಳಗಳು ಒಡೆದು, immediate brain dead ಆಗಿದ್ದರು. ಏನು ಮಾಡಿದರೂ brain revive ಆಗಲಿಲ್ಲ. ಕೊಂಚವಿದ್ದ ಉಸಿರಾಟವನ್ನು, ventilator ಹಚ್ಚಿ, ಮಗ ಲಂಡನ್ ನಿಂದ ಬರುವವರೆಗೆ ಚಾಲೂ ಇಡಿಸಿ,
ನಿನ್ನೆ ಬೆಳಿಗ್ಗೆ ಮರಣವನ್ನು ಘೋಷಿಸಲಾಯಿತು. ಹೀಗೆ, ಇನ್ನೂ ಹತ್ತು ವರ್ಷ ಬದುಕ ಬಹುದಾಗಿದ್ದ ಜೀವದ ಅಕಾಲಿಕ ಹಾಗೂ ಅಸ್ವಾಭಾವಿಕ ಅಂತ್ಯ ಸ್ವಂತ ನಿರ್ಲಕ್ಷ್ಯದಿಂದ ಆಯಿತು. ಅವರ ಒಬ್ಬನೇ ಮಗ ಲಂಡನ್ ನಲ್ಲಿ settle ಆಗಿದ್ದಾನೆ. ಇಲ್ಲಿರುವುದು ಹೆಂಡತಿ ಮತ್ತು ಮಂದ ಬುದ್ಧಿಯ ಒಬ್ಬಳು ಮಗಳು ಮಾತ್ರ. ಸಾವು ಯಾರನ್ನೂ ಬಿಟ್ಟದ್ದಲ್ಲ ಸರಿ. ಆದರೆ ಇಂಥ ಸಾವು ಸ್ವಯಂಕೃತಾಪರಾಧ ಅನ್ನಿಸುತ್ತದೆಯಲ್ಲವೇ?
ಯೋಗ, ಪ್ರಾಣಾಯಾಮ, ವ್ಯಾಯಾಮ, even walking ಸಹ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಇವನ್ನೆಲ್ಲ, ಯಾರು, ಎಷ್ಟು, ಹೇಗೆ, ಮಾಡಬೇಕು ಎಂಬುದನ್ನು ಪರಿಣಿತರಿಂದ ತಿಳಿದು ಕೊಂಡು ಮಾಡಬೇಕು. ಆಗಷ್ಟೇ, ಅವುಗಳ ಸದುಪಯೋಗಗಳನ್ನು ಪಡೆದು ಕೊಳ್ಳ ಬಹುದು ಮತ್ತು ಇಂಥಾ ದುಷ್ಪರಿಣಾಮಗಳಿಂದ ತಪ್ಪಿಸಿ ಕೊಳ್ಳ ಬಹುದು.
ನನ್ನ ಮನಸ್ಸು ಬಹಳ ಘಾಸಿಗೊಂಡದ್ದರಿಂದ ಈ ವಿಷಯ ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು. ಎಲ್ಲ ವಯಸ್ಸಿನವರಿಗೂ ಇದು ಅನ್ವೈಸುತ್ತದೆಯಾದರೂ, 50 ವರ್ಷ ದಾಟಿದವರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು.
ಈ ಪೋಸ್ಟಿನ ವಿಷಯವನ್ನು ದಯವಿಟ್ಟು ನಿಮ್ಮ ಮಿತ್ರರಲ್ಲಿಯೂ ಹಂಚಿಕೊಳ್ಳಿ.
Like
Comment

No comments:

Post a Comment