ನಾನಿಷ್ಟು ಈಗಲೂ ಖುಶಿಯಾಗಿರಲು.
ನೀನೇ ಕಾರಣ ನನ್ನ ನಲ್ಲೇ,
ನೀನೇ ಕಾರಣ ನನ್ನ ನಲ್ಲೇ,
ನೀನು ಲತೆಯಂತೆ ಈಗ ಬಳುಕದಿದ್ದರೇನು?
ನೀನೇ ಎಂದೆಂದಿಗೂ ನನ್ನ ತರುಲತೆಯೇ
ನೀನೇ ಎಂದೆಂದಿಗೂ ನನ್ನ ತರುಲತೆಯೇ
ಕೆನ್ನೆ ಸುಕ್ಕಾಗಿದೆಯೆಂದು ಚಿಂತಿಸದಿರು,
ನಿನ್ನ ತುಂಬುಗೆನ್ನೆಯ ಹಿಂಡಿ ಕೆಂಪಾಗಿಸಿದ
ನೆನಪು ನನ್ನಲ್ಲಿಂದೂ ಹಚ್ಚ ಹಸಿರಾಗಿದೆ
ನಿನ್ನ ತುಂಬುಗೆನ್ನೆಯ ಹಿಂಡಿ ಕೆಂಪಾಗಿಸಿದ
ನೆನಪು ನನ್ನಲ್ಲಿಂದೂ ಹಚ್ಚ ಹಸಿರಾಗಿದೆ
ಈಗ ಸಿಡಿ ಸಿಡಿಯುವ ನಿನ್ನ ಮುಖ
ಅಂದು ನಗುವಿನ ಬುಗ್ಗೆಯಾಗಿದ್ದನ್ನು
ನಾನೆಂದೂ ಮರೆಯಾರೆನಲ್ಲಾ.....
ಅಂದು ನಗುವಿನ ಬುಗ್ಗೆಯಾಗಿದ್ದನ್ನು
ನಾನೆಂದೂ ಮರೆಯಾರೆನಲ್ಲಾ.....
ನಲ್ಲೇ, ನಿನ್ನ ಮುತ್ತಿನ ದಂತಗಳೀಗ ಮರೆಯಾದರೂ,
ನಿನ್ನ ಬೊಚ್ಚು ಬಾಯಿಯ ನಗೂವೂ
ನನಗಷ್ಟೇ ಮೆಚ್ಚುಗೆ ನೀನದನ್ನು ನಂಬು
ಆದರೆ, ನೀನು ನಗು ನಗುತ್ತಿರ ಬೇಕು ಅಷ್ಟೇ
ನಿನ್ನ ಬೊಚ್ಚು ಬಾಯಿಯ ನಗೂವೂ
ನನಗಷ್ಟೇ ಮೆಚ್ಚುಗೆ ನೀನದನ್ನು ನಂಬು
ಆದರೆ, ನೀನು ನಗು ನಗುತ್ತಿರ ಬೇಕು ಅಷ್ಟೇ
ನಿನ್ನ ಕೂದಲುಗಳು ಹಣ್ಣಾದರೂ,
ನಿನ್ನ ಮನ ಹಣ್ಣಾಗಿಲ್ಲ, ಹಸಿರಾಗೇ ಇದೆ
ನಿನ್ನ ಮನ ಹಣ್ಣಾಗಿಲ್ಲ, ಹಸಿರಾಗೇ ಇದೆ
ನಾವು ನಡೆವ ಮುಂದೆ ಕೈ ಕೈ ಹಿಡಿದು,
ನಂಬು, ಇನ್ನು ಮುಂದೂ ಇದೆ ಸುಖದ ಬಾಳು,
ನಂಬು ಇನ್ನು ಮುಂದೂ ಇದೆ ಸುಖದ ಬಾಳು..
ನಂಬು, ಇನ್ನು ಮುಂದೂ ಇದೆ ಸುಖದ ಬಾಳು,
ನಂಬು ಇನ್ನು ಮುಂದೂ ಇದೆ ಸುಖದ ಬಾಳು..
No comments:
Post a Comment