Sunday, 5 October 2014

ಗುರಿ.
ಹರದಾರಿ ಹರದಾರಿ
ಮುಂದೆ ಹೋದರೂ
ಸಿಗಲೊಲ್ಲದು ಸರಿದಾರಿ,
ತಿರುಗಿಸಲು ಜಾಗವಿಲ್ಲ,
ರಿವರ್ಸ್ ಗೇರ್ ಬೀಳ್ತಾ ಇಲ್ಲ.
ಸಾಗಲೇ ಬೇಕು ಮುಂದೆ
ದಾರಿ ಸರಿ ಇರಲಿ ಇಲ್ಲದಿರಲಿ,
ಮುಂದೆಲ್ಲಾದರೂ ಸಿಗಬಹುದು
ಪಾರಾಗಲು ಕವಲು ದಾರಿ.
"ನುಗ್ಗಿ ನಡೆ ನುಗ್ಗಿ ನಡೆ ಮುಂದೆ"
ಕೇಳಲಷ್ಟೆ ಎಷ್ಟು ಚೆಂದ,
ಬೇಕಾದ ಬಲವಿಲ್ಲವಿನ್ನು,
ಹಿಂದೆ ಬಂದ ದಾರಿ ಅಣಕಿಸುತ್ತಿದೆ
ಇನ್ನೆಷ್ಟು ಮುಂದೆ ನೀ ಹೋಗಬೇಕೆಂದು,
ಆದರೂ ಬಿಡಲಾರೆ ಛಲ,
ಕೂಡಿಸುವೆನು ಬಲ
ಸಿಗಲೇ ಬೇಕು ದಾರಿ,
ಮುಟ್ಟಲೇ ಬೇಕು ಗುರಿ
"ನುಗ್ಗಿ ನಡೆ, ನುಗ್ಗಿ ನಡೆ ಮುಂದೆ".
(ನನ್ನದಲ್ಲದ ಒಂದು ಸಾಲು ಬರೆದ ಮಹಾಕವಿಗಳ ಕ್ಷಮೆ ಬೇಡಿ)

02.10.2014

No comments:

Post a Comment