FB Likes and Comments
ಇತ್ತೀಚೆಗೆ ನನ್ನ ಮಿತ್ರರೊಬ್ಬರು, "ಅವರ ಹಿರಿಯ ಮಿತ್ರರೊಬ್ಬರು ಇವರ ಪೋಸ್ಟುಗಳನ್ನು ಓದದೆ ಒಂದರ ಹಿಂದೊಂದು like ಗಳನ್ನು ಒತ್ತಿದ್ದಾರೆ, ಬಹುಶಃ ಅವರಿಗೆ ಅವರ ಪೊಸ್ಟುಗಳಿಗೆ ಇವರ like ಗಳ ಅಪೇಕ್ಷೆ ಇರಬೇಕು, ಅದಕ್ಕೇ ಹೀಗೆ ಮಾಡಿದ್ದಾರೆ" ಎಂದು ಒಂದು status ಹಾಕಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಈ ಕೆಳಗಿನಂತಿದ್ದು, ಅದನ್ನು ನಿಮ್ಮಲ್ಲಿ ಹಂಚಿ ಕೊಳ್ಳುತಿದ್ದೇನೆ.
"ಅವರು ಹಾಗೇನೇ ಮಾಡಿದ್ದಾರೆಂದು ನಿಮಗೇಕೆ ಅನ್ನಿಸಬೇಕು? ಅವರು ಓದಿಯೇ ಮಾಡಿರುವ ಸಾಧ್ಯತೆ ಯಾಕಿಲ್ಲ? ಯಾಕಂದರೆ, News Feed (home) ನಲ್ಲಿ ಎಲ್ಲರ ಪೋಸ್ಟ್ ಗಳನ್ನು ಒಮ್ಮೆಲೇ ನೋಡಲು ಆಗುವುದಿಲ್ಲ. ಅಷ್ಟು ವ್ಯವಧಾನವೂ ಕೆಲವೊಮ್ಮ ಎಲ್ಲರಿಗೂ ಇರುವುದಿಲ್ಲ.ಪೋಸ್ಟುಗಳು ಒಂದರ ಮೇಲೆ ಇನ್ನೊಂದು ಬರುತ್ತಾನೇ ಇರುತ್ತವೆ.
ಅದಕ್ಕೇ, ನಾನೂ ಸಹ ಕೆಲವೊಮ್ಮೆ, ಒಬ್ಬೊಬ್ಬರದೆ timeline open ಮಾಡಿ ಅವರ ಪೊಸ್ಟುಗಳನ್ನು ನೋಡಿ, ಇಷ್ಟ ಆದರೆ like ಒತ್ತುತ್ತೇನೆ, ಅಥವಾ ನನಗನಿಸಿದ ಕಾಮೆಂಟ್ ಮಾಡುತ್ತೇನೆ. ಅಂಥ ಸಂದರ್ಭದಲ್ಲಿ likes ಒಂದರ ಹಿಂದೆ ಒಂದು ಬರ ಬಹುದು. ಅಂದ ಮಾತ್ರಕ್ಕೆ ಅವರು ಪೋಸ್ಟುಗಳನ್ನು
ಓದದೆ ನಿಮ್ಮ ಲೈಕುಗಳ ಅಪೇಕ್ಷೆಯಿಂದ like ಗಳನ್ನು ಮಾಡಿದ್ದಾರೆ ಎಂದು ಕೊಳ್ಳುವುದು ಸರಿಯಲ್ಲ.
ಓದದೆ ನಿಮ್ಮ ಲೈಕುಗಳ ಅಪೇಕ್ಷೆಯಿಂದ like ಗಳನ್ನು ಮಾಡಿದ್ದಾರೆ ಎಂದು ಕೊಳ್ಳುವುದು ಸರಿಯಲ್ಲ.
ಇಷ್ಟಕ್ಕೂ likes ನಿಂದ ಸಿಗುವುದಾದರೂ ಏನು? ಆದ್ದರಿಂದ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನೀವು ನಿಮ್ಮ ಪೋಸ್ಟ್ like ಮಾಡಿದವರ ಪೊಸ್ಟಗಳನ್ನು like ಮಾಡಲೇ ಬೇಕೆಂದಿಲ್ಲ. ನಿಮಗೆ ಅನಿಸಿದರಷ್ಟೇ ಮಾಡಬೇಕು, ಯಾರದ್ದೂ ಮುಲಾಜಿಗಲ್ಲ.
ಮತ್ತೊಂದು ವಿಷಯ. ನನಗೆ ಅನ್ನಿಸುತ್ತೆ, fb ಭಾಷೆಯಲ್ಲಿ like ಅಂದರೆ "ನೋಡಿದ್ದೇನೆ" ಅಂತ ಅಷ್ಟೆ, like ನ ಶಬ್ದಾರ್ಥವಾದ "ಮೆಚ್ಚಿದ್ದೇನೆ" ಅಲ್ಲ. . ಒಬ್ಬ "ನನಗೆ ಇವತ್ತು ಬಹಳ ತಲೆ ನೋವು, ಏನಾದರೂ fast remedy suggest ಮಾಡಿ" ಎಂದು ಪೋಸ್ಟ್ ಹಾಕಿದ್ದ. ಅದಕ್ಕೆ ಅವನ ಸ್ನೇಹಿತರದ್ದು 10 ಕಾಮೆಂಟ್ಸ್ ಇದ್ದರೆ, ಬರೇ like ಗಳು 20 ರ ಮೇಲೆ ಇದ್ದವು .ಹೇಗಿದೆ?"
02.10.2014
No comments:
Post a Comment