Tuesday, 14 October 2014

ನನ್ನ ಮಗು.

ಓ......ನನ್ನ
ಮಗುವೇ,
ಓ ನನ್ನ ಕಂದ
ನಿನ್ನಂದವ
ಎನಿತು ಬಣ್ಣಿಸಲಿ,
ಮಗುವೇ, ನಿನ್ನ
ನಸು ನಗುವ
ಅರೆ ಬಿರಿದ
ತುಟಿಗಳು,
ನಡುವೆ ಇಣುಕುವ
ಮೋಡಿ ಮುತ್ತುಗಳು,
ಜಗದೆಡೆಗೆ
ಕುತೂಹಲದ ನೋಟ
ಬೀರುತಿಹ
ಆ ದುಂಬಿ ಕಂಗಳು,
ನಡುವೆ ನೀಳ
ಸಂಪಿಗೆ ನಾಸಿಕ,
ತಿಲಕವಿಟ್ಟ ಹಣೆಗೆ
ಮುದ್ದಿಸುತಿಹ
ಮುಂಗುರುಳು,
ಮುತ್ತ ಕೊಡೇ ಬಾ
ಎಂದು ಕರೆವ
ತುಂಬು ಗಲ್ಲಗಳು,
ನಾನಿಟ್ಟ ದೃಷ್ಟಿ ಚಿಕ್ಕಿ
ಹೊತ್ತು, ಹಿಡಿ ಬಾ
ಎಂದು ಉಲಿಯುವ
ಮುದ್ದಾದ ಗದ್ದ.
ಮಗುವೇ, ಈ ನಿನ್ನಂದ
ನನ್ನ ಕಣ್ತುಂಬಿದೆ,
ನನ್ನೆದೆಯಲಿ
ನಿನ್ನ ಪುಟ್ಟ ಮೃದು
ಪಾದಗಳು ನಲಿದಿವೆ.
ಧನ್ಯಳಾದೆ ನಾ
ನಿನ್ನ ಈ ಜಗಕೆ ತಂದು,
ಆ ದೇವ ಕರುಣಿಸಲಿ
ನಿನಗೆಲ್ಲ ಸುಖವನು
ಮುಂದೆ ಎಂದೆಂದೂ.
********
೧೩.೧೦.೨೦೧೪.

No comments:

Post a Comment