Tuesday, 14 October 2014

ಕವಿತೆ - ಕವನ - ಕವಿ
ಕವಿತೆಗಳೇನು ಕವಿಗಳಿಗೆ,
ತಲೆಯಲ್ಲಿ ಹರಿದಾಡುವ
ಭಾವ ಭಾವನೆಗಳ ಸಾಲೇ,
ಕನಸಿನ ಲೋಕದಲ್ಲಿ ಮೂಡಿ
ಮರೆಯಾಗುವ ಹೊಂಗನಸೇ,
ಬಿಳಿ ಹಾಳೆಗಳ ಮೇಲೆ
ಹಾಡು ಹಾಡುತ್ತ ಸಾಗುವ
ಕೋಗಿಲೆಗಳ ಸಾಲು ಸಾಲೇ,
ಇಲ್ಲಾ, ಅಂತರಂಗದಲ್ಲಿ ತುಂಬಿ
ಉಕ್ಕಿ ಹರಿಯುವ ಕೆಂಪು ನೀರೇ,
ಅಥವಾ, ಪ್ರೇಮಿಗಳ ಮಿಲನ
ವಿರಹಗಳ ಸಿಹಿ ಕಹಿ ವರ್ಣನೆಯೇ,
ಎಂದೂ ಕವಿಯ ಅಂತರಂಗದ
ಬಹಿರಂಗವೇ ಕವಿತೆ, ಒದುಗನ
ಹೃದಯದ ಕದ ತಟ್ಟಿದರೆ
ಅದೇ ಗುಣು ಗುಣಿಸುವ ಕವನ.
*********

No comments:

Post a Comment