Sunday, 5 October 2014


ಮಹಾತ್ಮಾ ಗಾಂಧೀಜಿಯವರ ಒಂದು ಅಪರೂಪದ ಫೋಟೋ 

ಅಪರೂಪದ ಫೋಟೋ. 1927 ರ ಫೆಬ್ರುವರೀ 27 ರಂದು ಮಹಾತ್ಮ ಗಾಂಧೀಜಿ ಕೋಮು ಗಲಭೆಗೆ ಈಡಾಗಿದ್ದ ಗುಲ್ಬರ್ಗಕ್ಕೆ ಶಾಂತಿ ಮಂತ್ರ ವಾಚನ ಸಲುವಾಗಿ ಬಂದಿದ್ದರು. ಅಲ್ಲಿ ಬಾಲ್ ಘಾಟ್ ಎಂಬ ಬಂಗಲೆಯಲ್ಲಿ ಒಂದು ದಿನ ತಂಗಿದ್ದರು. ಅಲ್ಲಿಂದ ದೇವಸ್ಥಾನ, ದರ್ಗಾ ಮಸೀದಿಗಳಿಗೆ ಅವರು ಕಾರಿನಲ್ಲಿ ಹೊರಟಿರುವಾಗ ತೆಗೆದ ಫೋಟೋ ಇದು. (ಇಂದಿನ ವಿಜಯ ಕರ್ನಾಟಕ....) 03.10.2014
Like೦03.102014೩೦೩. ೦. ೪. ೦೨೦೧೪
ಸ್ವಚ್ಛ ಭಾರತ - ಒಂದು ಅನಿಸಿಕೆ 

ಈ ಶುಚಿತ್ವವನ್ನು ಪ್ರತಿಯೊಬ್ಬ ಮನುಷ್ಯನೂ ಸ್ವತಹ ಮಾಡಿಕೊಳ್ಳಬೇಕು.
ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳುವುದರ ಜತೆಗೆ
ನಾವಿರುವ ಪರಿಸರವನ್ನು ಸಹ ಸ್ವಚ್ಚವಾಗಿರಿಸಿಕೊಳ್ಳುವುದೂ ಅತೀ ಅಗತ್ಯ.
ಅದಕ್ಕೇನೇ, ಈ ಸ್ವಚ್ಛ ಭಾರತ ಆಂದೋಲನದ ಶುರು. ಇದು ಬರೆ ಒಂದು ದಿನದ
ಆಂದೋಲನವಾಗದೆ, ಜನ ಜಾಗೃತಿಯಾಗ ಬೇಕು. ಇದ್ದ ಕಸವನ್ನು ತೆಗೆದು ಸ್ವಚ್ಛ ಮಾಡುವುದಷ್ಟೇ ಮುಖ್ಯವಲ್ಲ. ಕಸವನ್ನು ಎಲ್ಲಿ ಹಾಕಬೇಕೋ ಅಲ್ಲೇ ಹಾಕುವ ಪ್ರಜ್ಞೆಯನ್ನು ಜನರಲ್ಲಿ ಹುಟ್ಟಿಸುವುದು ಬಹಳ ಮುಖ್ಯ. ಯಾವುದೇ ಸಿಟಿಯಲ್ಲಿ, ಅಕಸ್ಮಾತ್ ಧಾರಾಕಾರವಾಗಿ ಮಳೆ ಸುರಿದಾಗ, ಚರಂಡಿಯಲ್ಲಿ ಹರಿಯ ಬೇಕಾದ ನೀರು, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಹರಿದು ಮನೆಗಳಿಗೆ ನುಗ್ಗಿ ಅವಾಂತರವಾಗುತ್ತದೆ.
ಜನರು ಇಂತಹ ಸಂಧರ್ಭದಲ್ಲಿ ಬೈಯ್ಯುವುದು. ಸರಕಾರವನ್ನು ಮತ್ತು ಸ್ಥಳೀಯ ಆಡಳಿತವನ್ನು. ಆದರೆ, ಇದಕ್ಕೆ ಜನರೇ ಕಾರಣ. ಎಲ್ಲ ಕಸವನ್ನು ಚರಂಡಿಯಲ್ಲಿ ಹಾಕಿ, ಚರಂಡಿಗಳನ್ನು ಬ್ಲಾಕ್ ಮಾಡಿ ಬಿಟ್ಟಿರುತ್ತಾರೆ. ಇದೊಂದು ಉದಾಹರಣೆ ಅಷ್ಟೇ. ಎಷ್ಟೋ ಮಂದಿ ನೀರು ಹೋಗುವ ದಾರಿಗೆ
ಅಡ್ಡವಾಗಿ ಮನೆ, ಕಾಂಪೌಂಡ್ ಸಹ ಕಟ್ಟಿ ಕೊಳ್ಳುತ್ತಾರೆ.. ನಿಜವಾಗಿ, ಈ ವಿಷಯದಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವ ಅಭಿಯಾನ ನಡೆಯ ಬೇಕು. ಸ್ಥಳೀಯ ಆಡಳಿತ ತ್ಯಾಜ್ಯ ವಿಲೇವಾರಿ
ಸರಿಯಾಗಿ ನಡೆಯುವಂತೆ ongoing basis ನಲ್ಲಿ ಕ್ರಮ ತೆಗೆದು ಕೊಳ್ಳಬೇಕು.
ಗುರಿ.
ಹರದಾರಿ ಹರದಾರಿ
ಮುಂದೆ ಹೋದರೂ
ಸಿಗಲೊಲ್ಲದು ಸರಿದಾರಿ,
ತಿರುಗಿಸಲು ಜಾಗವಿಲ್ಲ,
ರಿವರ್ಸ್ ಗೇರ್ ಬೀಳ್ತಾ ಇಲ್ಲ.
ಸಾಗಲೇ ಬೇಕು ಮುಂದೆ
ದಾರಿ ಸರಿ ಇರಲಿ ಇಲ್ಲದಿರಲಿ,
ಮುಂದೆಲ್ಲಾದರೂ ಸಿಗಬಹುದು
ಪಾರಾಗಲು ಕವಲು ದಾರಿ.
"ನುಗ್ಗಿ ನಡೆ ನುಗ್ಗಿ ನಡೆ ಮುಂದೆ"
ಕೇಳಲಷ್ಟೆ ಎಷ್ಟು ಚೆಂದ,
ಬೇಕಾದ ಬಲವಿಲ್ಲವಿನ್ನು,
ಹಿಂದೆ ಬಂದ ದಾರಿ ಅಣಕಿಸುತ್ತಿದೆ
ಇನ್ನೆಷ್ಟು ಮುಂದೆ ನೀ ಹೋಗಬೇಕೆಂದು,
ಆದರೂ ಬಿಡಲಾರೆ ಛಲ,
ಕೂಡಿಸುವೆನು ಬಲ
ಸಿಗಲೇ ಬೇಕು ದಾರಿ,
ಮುಟ್ಟಲೇ ಬೇಕು ಗುರಿ
"ನುಗ್ಗಿ ನಡೆ, ನುಗ್ಗಿ ನಡೆ ಮುಂದೆ".
(ನನ್ನದಲ್ಲದ ಒಂದು ಸಾಲು ಬರೆದ ಮಹಾಕವಿಗಳ ಕ್ಷಮೆ ಬೇಡಿ)

02.10.2014

FB Likes and Comments

ಇತ್ತೀಚೆಗೆ ನನ್ನ ಮಿತ್ರರೊಬ್ಬರು, "ಅವರ ಹಿರಿಯ ಮಿತ್ರರೊಬ್ಬರು ಇವರ ಪೋಸ್ಟುಗಳನ್ನು ಓದದೆ ಒಂದರ ಹಿಂದೊಂದು like ಗಳನ್ನು ಒತ್ತಿದ್ದಾರೆ, ಬಹುಶಃ ಅವರಿಗೆ ಅವರ ಪೊಸ್ಟುಗಳಿಗೆ ಇವರ like ಗಳ ಅಪೇಕ್ಷೆ ಇರಬೇಕು, ಅದಕ್ಕೇ ಹೀಗೆ ಮಾಡಿದ್ದಾರೆ" ಎಂದು ಒಂದು status ಹಾಕಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಈ ಕೆಳಗಿನಂತಿದ್ದು, ಅದನ್ನು ನಿಮ್ಮಲ್ಲಿ ಹಂಚಿ ಕೊಳ್ಳುತಿದ್ದೇನೆ.
"ಅವರು ಹಾಗೇನೇ ಮಾಡಿದ್ದಾರೆಂದು ನಿಮಗೇಕೆ ಅನ್ನಿಸಬೇಕು? ಅವರು ಓದಿಯೇ ಮಾಡಿರುವ ಸಾಧ್ಯತೆ ಯಾಕಿಲ್ಲ? ಯಾಕಂದರೆ, News Feed (home) ನಲ್ಲಿ ಎಲ್ಲರ ಪೋಸ್ಟ್ ಗಳನ್ನು ಒಮ್ಮೆಲೇ ನೋಡಲು ಆಗುವುದಿಲ್ಲ. ಅಷ್ಟು ವ್ಯವಧಾನವೂ ಕೆಲವೊಮ್ಮ ಎಲ್ಲರಿಗೂ ಇರುವುದಿಲ್ಲ.ಪೋಸ್ಟುಗಳು ಒಂದರ ಮೇಲೆ ಇನ್ನೊಂದು ಬರುತ್ತಾನೇ ಇರುತ್ತವೆ.
ಅದಕ್ಕೇ, ನಾನೂ ಸಹ ಕೆಲವೊಮ್ಮೆ, ಒಬ್ಬೊಬ್ಬರದೆ timeline open ಮಾಡಿ ಅವರ ಪೊಸ್ಟುಗಳನ್ನು ನೋಡಿ, ಇಷ್ಟ ಆದರೆ like ಒತ್ತುತ್ತೇನೆ, ಅಥವಾ ನನಗನಿಸಿದ ಕಾಮೆಂಟ್ ಮಾಡುತ್ತೇನೆ. ಅಂಥ ಸಂದರ್ಭದಲ್ಲಿ likes ಒಂದರ ಹಿಂದೆ ಒಂದು ಬರ ಬಹುದು. ಅಂದ ಮಾತ್ರಕ್ಕೆ ಅವರು ಪೋಸ್ಟುಗಳನ್ನು
ಓದದೆ ನಿಮ್ಮ ಲೈಕುಗಳ ಅಪೇಕ್ಷೆಯಿಂದ like ಗಳನ್ನು ಮಾಡಿದ್ದಾರೆ ಎಂದು ಕೊಳ್ಳುವುದು ಸರಿಯಲ್ಲ.
ಇಷ್ಟಕ್ಕೂ likes ನಿಂದ ಸಿಗುವುದಾದರೂ ಏನು? ಆದ್ದರಿಂದ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನೀವು ನಿಮ್ಮ ಪೋಸ್ಟ್ like ಮಾಡಿದವರ ಪೊಸ್ಟಗಳನ್ನು like ಮಾಡಲೇ ಬೇಕೆಂದಿಲ್ಲ. ನಿಮಗೆ ಅನಿಸಿದರಷ್ಟೇ ಮಾಡಬೇಕು, ಯಾರದ್ದೂ ಮುಲಾಜಿಗಲ್ಲ.
ಮತ್ತೊಂದು ವಿಷಯ. ನನಗೆ ಅನ್ನಿಸುತ್ತೆ, fb ಭಾಷೆಯಲ್ಲಿ like ಅಂದರೆ "ನೋಡಿದ್ದೇನೆ" ಅಂತ ಅಷ್ಟೆ, like ನ ಶಬ್ದಾರ್ಥವಾದ "ಮೆಚ್ಚಿದ್ದೇನೆ" ಅಲ್ಲ.  . ಒಬ್ಬ "ನನಗೆ ಇವತ್ತು ಬಹಳ ತಲೆ ನೋವು, ಏನಾದರೂ fast remedy suggest ಮಾಡಿ" ಎಂದು ಪೋಸ್ಟ್ ಹಾಕಿದ್ದ. ಅದಕ್ಕೆ ಅವನ ಸ್ನೇಹಿತರದ್ದು 10 ಕಾಮೆಂಟ್ಸ್ ಇದ್ದರೆ, ಬರೇ like ಗಳು 20 ರ ಮೇಲೆ ಇದ್ದವು  .ಹೇಗಿದೆ?"

02.10.2014
LikeLike ·  · 

FB friends - a Suggestion.

ಸ್ನೇಹಿತರೊಬ್ಬರು ಹೀಗೆ ಒಂದು status ಹಾಕಿದ್ದರು. - "Fb ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಇರುವವರನ್ನು unfriend ಮಾಡುವುದೇ ಒಳ್ಳೆಯದು. ಬದುಕಿದ್ದು ಸತ್ತ ಜೀವಂತ ಶವದಂತೆ ಕೆಲವರು"
ಇದರಿಂದ ಮನಸ್ಸಿಗೆ ಬೇಸರವಾಗಿ ಕೆಳಗೆ ಕಾಣಿಸಿದಂತೆ ಕಾಮೆಂಟ್ ಹಾಕಿದ್ದೆ. ಅದನ್ನು ಎಲ್ಲರೊಡನೆ ಹಂಚಿ ಕೊಳ್ಳುವ ಅನಿಸಿತು. ಅದಕ್ಕೆ ಸ್ಟೇಟಸ್ ರೂಪದಲ್ಲಿ ಹಾಕಿದ್ದೇನೆ. ಈ ಕಾಮೆಂಟ್ ನಲ್ಲಿ ಒಂದು ವಿಷಯ ಬಿಟ್ಟು ಹೋಗಿತ್ತು. ಅದೇನಂದರೆ, "fb ಸ್ನೇಹ ವಲ್ಲದೆ, ಬೇರೆ ವೈಯುಕ್ತಿಕ ಪರಿಚಯ ಅಥವಾ ಸಂಬಂಧ ಇಲ್ಲದಿದ್ದರೆ, ನಮ್ಮ fb ಸ್ನೇಹಿತರಲ್ಲಿ ಯಾರಾದರೂ ನಿಜವಾಗಿ ಸತ್ತು ಹೋದರೆ, ಉಳಿದ ಸ್ನೇಹಿತರಿಗೆ ಗೊತ್ತಾಗುವ ಸಾಧ್ಯತೆಯೂ ಇಲ್ಲ, ಅಲ್ಲವೇ"
"ನಿಮಗೆ ಬೇಡದವರನ್ನು ಸುಮ್ಮನೆ ತೆಗೆದು ಹಾಕಿ. ಎಲ್ಲರೂ fb ನಲ್ಲಿ ನಿಮ್ಮ ಹಾಗೆ active ಇರಬೇಕೆಂದೇನೂ ನಿಯಮವಿಲ್ಲವಲ್ಲ. ಆದರೆ ನೀವು ಬಳಸಿದ ಭಾಷ ಸರಿಯಲ್ಲ. "ಬದುಕಿದ್ದು ಸತ್ತ ಜೀವಂತ ಶವದಂತೆ ಕೆಲವರು" ...ಇಂತಹ ಮಾತುಗಳು ನಮ್ಮದೇ ವ್ಯಕ್ತಿತ್ವದಲ್ಲಿಯೇ ಇರುವ ಸಣ್ಣತನವನ್ನು ತೋರಿಸುತ್ತದೆ. ಹೀಗೆ ಮಾಡಿದರೆ ಸಕಲ ತೀರ್ಥಯಾತ್ರೆಗಳ ಪುಣ್ಯ ಒಂದೇ ಮಾತಿಗೆ ಹೊಳಯಲ್ಲಿ ತೊಳದು ಹೊದಂತಾಗುತ್ತದೆ. ಇಒ ವಿಷಯದಲ್ಲಿ ನನ್ನದು ಇನ್ನೂ ಒಂದು ಸಲಹೆ. ಎಲ್ಲ friend request ಗಳನ್ನು accept ಮಾಡಬೇಡಿ. ಅವರ profile/timeline study ಮಾಡಿ. Inactive ಆಗಿರುವವರು, ಅಥವಾ ಬರೇ cover photo/profile photo ಅಷ್ಟೇ change ಮಾಡ್ತಾ ಇರೋರನ್ನು friend ಮಾಡಿಕೊಳ್ಲಲೇ ಬೇಡಿ. ಇನ್ನು, ಆಗಾಗ time ಸಿಕ್ಕಾಗ, ನಿಮಗೆ ಈಗಿರುವ ಸ್ನೇಹಿತರ timeline review ಮಾಡಿ, ಮೇಲೆ ಹೇಳಿದ ರೀತಿಯಲ್ಲಿರುವವರನ್ನು ತೆಗೆದು ಹಾಕಿ. ಅದು ಬಿಟ್ಟು, ಇಂಥ unparliamentary ಶಬ್ದಗಳನ್ನು ಉಪಯೋಗಿಸಿ ಸ್ಟೇಟಸ್ ಹಾಕಿ, ನಿಮ್ಮನ್ನು ಸಜ್ಜನರು ಎಂದುಕೊಂಡಿರುವವರ ಮನ ಬದಲಾಗುವಂತೆ ಮಾಡಬೇಡಿ. ನನ್ನ ಈ ನೇರನುಡಿಯಿಂದ ಬೇಸರವಾಗಿದ್ದರೆ ಕ್ಷಮಿಸಿ, ಬೇಕಾದರೆ unfriend ಸಹ ಮಾಡಿ....."
Mother and Child


In all species, right from elephant to human,cuddling and fondling each other by mother and child are the real feel of love & affection.

Wednesday, 1 October 2014

ಮದುವೆಯ ವಾರ್ಷಿಕೋತ್ಸವವೋ, ಅಥವಾ ಜಗಳದ ವರ್ಷಾಚರಣೆಯೋ......... 


ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ವೃದ್ಧ ದಂಪತಿಗಳಿದ್ದಾರೆ. ಗಂಡನಿಗೆ 70 ವರ್ಷ, ಹೆಂಡತಿಗೆ 65 ವರ್ಷವಿರಬಹುದು. ಅವರ ಗಂಡು ಮಕ್ಲಳಿಬ್ಬರು ಬೇರಾವುದೋ ಊರಿನಲ್ಲಿ ಕೆಲಸದಲ್ಲಿದ್ದರು.
ಮತ್ತೊಬ್ಬಳು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ತಾವು ಮಾತ್ರ ಯಾವಾಗ ನೋಡಿದರೂ ಏರಿದ ದನಿಗಳಲ್ಲಿ ಜಗಳ ಆಡುತ್ತಲೇ ಇರುತ್ತಿದ್ದರು.
ಒಂದು ದಿನ ನಮ್ಮನ್ನು ಮಧ್ಯಾಹ್ನ ಊಟಕ್ಕೆ ಕರೆದರು. ಯಾಕೆಂದದ್ದಕ್ಕೆ, ಇವತ್ತು ನಮ್ಮ marriage anniversary ಅದಕ್ಕೇ ಬನ್ನಿ ಅಂದರು. ಅವರ ಜಗಳ ಕೇಳಿ ಕೇಳಿ ಬೇಸತ್ತಿದ್ದ ನಾವು, ಹೋಗುವುದೋ ಬೇಡವೋ ಎಂದು ಯೋಚಿಸಿ ಯೋಚಿಸಿ, ಕೊನೆಗೆ, ನೆರೆಹೊರೆಯಲ್ಲ ಅಂದು ಕೊಂಡು ಹೋದೆವು.
ನಾವು ಹೋದಾಗ ಸಹ ಯಾವುದಕ್ಕೋ ಜೋರಾಗಿ ಜಗಳ ನಡೆಯುತಿತ್ತು. ನಾವು ಹೋದ ಕೂಡಲೆ ಸ್ವಲ್ಪ ಶಾಂತವಾಯಿತು. ಅವರ ಮದುವೆಯ 40ನೇ ವಾರ್ಷಿಕೋತ್ಸವಕ್ಕೆ Best wishes ಹೇಳಿದೆವು. ಅಂತೂ ಇಂತೂ ಊಟನೂ ಮುಗಿಯಿತು.
ಆಗ ನಾನು ಆ ಅಜ್ಜನನ್ನು ಕೇಳಿದೆ, "ಅಲ್ಲಾ, ಮದುವೆಯಾಗಿ 40 ವರ್ಷ ಆಯಿತು ಅಂತೀರಾ, ಇನ್ನೂ ಯಾಕೆ ಹೀಗೆ ಜಗಳ ಆಡ್ತೀರಾ? ರಾಮ ಕೃಷ್ಣ ಅಂದುಕೊಂಡು ಹಾಯಾಗಿರ ಬಾರದೇ?"
ಆಗ ಅವರು ಜೋರಾಗಿ ನಕ್ಕು, "ರಾಯರೇ, ಇವತ್ತು ಬರೇ ನಮ್ಮ ಮದುವೆಯ 40 ನೇ ವಾರ್ಷಿಕೋತ್ಸವ ಅಲ್ಲ, ನಮ್ಮ ಜಗಳದ್ದೂ ಕೂಡ 40ನೇ ವಾರ್ಷಿಕೋತ್ಸವ' ಎಂದರು. ಕುತೂಹಲದಿಂದ "ಅದು ಹೇಗ, ರಾಯರೇ?" ಎಂದೆ.
"ನೋಡಿ, ನಮ್ಮ ಮದುವೆ ಆದದ್ದು ನಮ್ಮೂರಿಗೆ 25 kms ದೂರದ ಒಂದು ದೇವಸ್ಥಾನದಲ್ಲಿ. ಗೋಧೂಳಿ ಲಗ್ನ. ಊಟವೆಲ್ಲ ಮುಗಿಯುವಾಗ ರಾತ್ರಿ 9.30 ಗಂಟೆಯಾಯಿತು. ಮದುಮಗಳನ್ನು ಕೈ ಎತ್ತಿ ಕೊಡುವ ಶಾಸ್ತ್ರವೂ ಮುಗಿದು, ಎಲ್ಲರೂ ನಮ್ಮ ಮನೆ ಮುಟ್ಟುವಾಗ ರಾತ್ರಿ 10.30 ಗಂಟೆ. ಬಂದು ನೋಡಿದರೆ, ಮದುಮಗಳ ಬಟ್ಟೆಬರೆ ಇತ್ಯಾದಿಗಳಿದ್ದ ಪೆಟ್ಟಿಗೆ ಇಲ್ಲ. !!!!
ಈಕೆ ಕೂಡಲೇ ಹಿಂದೆ ಮುಂದೆ ನೋಡದೆ ಜಗಳವೇ ಶುರು ಮಾಡಿದಳು. "ಈಗಲೇ ನನ್ನ ಬಗ್ಗೆ ಇಷ್ಟು ನಿಷ್ಕಾಳಜಿ ಮಾಡುವ ನೀವು ಮತ್ತು ನಿಮ್ಮ ಮನೆಯವರು, ಮುಂದೆ ನನ್ನನ್ನು ಏನು ಮಾಡೀರೀ, ಹಾಗೆ ಹೀಗೆ ....." ಅಂತ.
ನಾವು ಈಗಲೇ ಹೋಗಿ ಪೆಟ್ಟಿಗೆ ತರುತ್ತೇವೆಂದು ಹೊರಟರೂ ಈಕೆ ಎಲ್ಲರ ಮೇಲೆ ಒದರಾಡುವುದನ್ನು ನಿಲ್ಲಿಸಲಿಲ್ಲ. ಆ ರಾತ್ರಿಗೆ ಒಂದು taxi ಮಾಡಿಕೊಂಡು ಹೋಗಿ ಅರ್ಚಕರು ಎತ್ತಿಟ್ಟಿದ್ದ ಪೆಟ್ಟಿಗೆ ತಂದದ್ದಾಯಿತು. ಈಕೆ ಈ ತರ ಜಗಳಗಂಟಿ ಎಂದು ಆವತ್ತೇ ಗೊತ್ತಾಗಿ ಹೋಯಿತು. ಆದರೇನು ಮಾಡುವುದು, ಮದುವೆ ಆಗಿ ಹೋಗಿತ್ತು... !! ಅಂದು ಶರುವಾದ ಜಗಳ ಇನ್ನೂ ನಡೆದೇ ಇದೆ. ಅದು ಹೇಗೋ ಈ ಜಗಳದಲ್ಲೇ ಮೂರು ಮಕ್ಕಳೂ ಆದವು...." ಎಂದು ಮುಸಿ ಮುಸಿ ನಕ್ಕರು.
ಅಷ್ಟೊತ್ತಿಗೆ, ಅದುವರೆಗೆ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದ ಅಜ್ಜಿ ಸೊಂಟಕ್ಕೆ ಸೆರಗು ಸಿಕ್ಕಸಿಕೊಂಡು ಬಂದೇ ಬಿಟ್ಟರು. "ಏನು, ಹಳೇ ಪುರಾಣ ಎಲ್ಲ ಹೇಳಿ, ಬಂದವರ ಎದುರಿಗೆ ನನ್ನನ್ನು ಜಗಳಗಂಟಿ ಎಂದು ಮರ್ಯಾದೆ ಕಳೀತೀರಾ, ಏನನ್ನ ಬೇಕು ನಿಮ್ಮ ಮುಖಕ್ಕೆ?" ಎಂದು ಏರಿದ ದನಿಯಲ್ಲಿ ಜಗಳ ಶುರು ಮಾಡಿಯೇ ಬಿಟ್ಟರು. "ನೀನು ಜಗಳಗಂಟಿ ಅಲ್ಲವೇನು ಮತ್ತೆ? ಇದ್ದುದನ್ನು ಇದ್ದ ಹಾಗೆ ಹೇಳಿದರೆ, ಏನು ಭಾಳಾ ಹಾರಾಡ್ತೀ" ಎಂದು ಮುದುಕ ಶುರು ಮಾಡಿದರು.
ನಾವು ದಂಗಾಗಿ, "ರಾಯರೇ, ನಾವಿನ್ನು ಬರುತ್ತೇವೆ, ಇನ್ನೊಮ್ಮೆ ನಿಮಗೆ ಮದುವೆಯ ದಿನದ ಶುಭಾಶಯಗಳು," ಎಂದು, ಮನಸ್ಸಿನಲ್ಲಿ "ಜಗಳದ ದಿನದ್ದೂ ಶುಭಾಶಯಗಳು(?)" ಎಂದುಕೊಂಡು ಎದ್ದು ಬಂದು ಬಿಟ್ಟೆವು.
***************

30.09.2014