Saturday, 27 September 2014

ವಾಸ್ತು ಶಾಸ್ತ್ರದ ನಂಬಿಕೆ/ಮೂಢ ನಂಬಿಕೆ.
ಇತ್ತೀಚೆಗೆ ವಾಸ್ತು ಶಾಸ್ತ್ರದ ಬಗ್ಗೆ ಜನರ ಆಕರ್ಷಣೆ ಜಾಸ್ತಿ ಆಗಿದೆ,
ಅಥವಾ ಜೋತಿಷಿಗಳು ಮತ್ತು ವಾಸ್ತು ಶಾಸ್ತ್ರಜ್ಜರು ಜನರಲ್ಲಿ ಈ
ಬಗ್ಗೆ ವಿಪರೀತವಾದ ನಂಬಿಕೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.
ಎಷ್ಟೋ ಹಿಂದೆ ಕಟ್ಟಿದ ಮನೆಗಳನ್ನು ಕಲವರು ಕೋಣೆಗಳನ್ನು ಜಾಗ ಬದಲಾವಣೆ ಮಾಡುವುದು, ಅಥವಾ ಸರಳ ವಾಸ್ತು ಪ್ರಕಾರ ಪಿರಮಿಡ್, ಕನ್ನಡಿ ಇತ್ಯಾದಿ ಕೂಡಿಸುವುದು ಮಾಡುತ್ತಾರೆ. ಇದೇನು ನಂಬಿಕೆಯೋ ಮೂಢ ನಂಬಿಕೆಯೋ
ಗೊತ್ತಾಗುವುದಿಲ್ಲ.
ಇಲ್ಲಿ ನಮ್ಮ ಮನೆ ಎದುರು ಒಂದು ಮನೆ. ರಿಟೈರ್ಡ್ SBI officer. 30 ವರ್ಷ ಹಿಂದಿನ ಮನೆ. ಇದ್ದಕ್ಕಿದ್ದ ಹಾಗೆ ವಾಸ್ತುವಿನ ಹುಚ್ಚು ಅವರಿಗೆ ಹಿಡಿಯಿತು. ಸರಳ ವಾಸ್ತುವಿನವರು ವ್ಯಾನಿನಲ್ಲಿ ಬಂದು ಏನೇನೋ ಹೇಳಿ ಹೋದರು. ಅದರಂತೆ ಏನೇನೋ ಬದಲಾವಣೆಗಳು ಆದವು. ಮೆಟ್ಡಲುಗಳು ಸ್ಥಾನ ಬದಲಾಯಿಸಿದವು. ಮನೆ ಒಳಗಡೆಯಲ್ಲಾ ಕನ್ನಡಿಗಳು, ಪಿರಮಿಡ್ಗಳು ಕೂತವು. ಕೋಣೆಗಳು ಸ್ಥಾನ ಪಲ್ಲಟವಾದವು.
ಇದೆಲ್ಲಾ ಹೋಗಲಿ ನಮಗೇನು ಅಂದರೆ, ನಮಗೂ irritation ಆಗುವಂಥ ಒಂದು ಕೆಲಸ ವಾಸ್ತುನವರ ಸಲಹೆಯಂತೆ ಮಾಡಿದ್ದಾನೆ. ಅವನ ಮನೆ ಬಾಗಿಲ ಮೇಲೆ ಒಂದು red light 24 ತಾಸು ಉರಿಯುವಂತೆ ಹಾಕಿಸಿದ್ದಾನೆ. ಅವನ ಜನ್ಮ ನಕ್ಷತ್ರ ಪ್ರಕಾರ ಅದು 24 ತಾಸು ಉರಿತಾನೇ ಇರಬೇಕಂತೆ. ಈಗ ನಮ್ಮ ಮನೆ ಕಿಡಕಿ ತೆಗೆದ ಕೂಡಲೇ ಆ ಕೆಂಪು ಲೈಟ್ ಹಗಲಿರುಳು ಕಣ್ಣಿಗೆ ಹೊಡೆಯುತ್ತಿರುತ್ತದೆ.
ನನಗೇನೋ ಬಹಳ ವಿಚಿತ್ರ ಅನ್ನಿಸುತ್ತದೆ. ನಾನು ನೋಡಿದ ಹಾಗೆ ಅಸ್ಪತ್ರೆಗಳ operation theatre ಹೊರಗೆ, ಒಳಗೆ operation ನಡೆಯುತ್ತಿರುವಾಗ, ಬಾಗಿಲ ಮೇಲೆ ಒಂದು ಕೆಂಪು ಲೈಟ್ ಉರಿಯುತ್ತಿರುತ್ತದೆ. Operation ಮುಗಿದ ಕೂಡಲೇ ಅದನ್ನು ಆರಿಸುತ್ತಾರೆ. ಬೇರೆಲ್ಲಿಯೂ ಈ ರೀತಿ 24 ಗಂಟೆ ಕೆಂಪು ಲೈಟ್ ಹಚ್ಚಿಡುವುದನ್ನು ನಾನಂತೂ ನೋಡಿಲ್ಲ..... !!!!!!!!!
ಈ ರೀತಿ ಮನೆಯ ಹೊರಗಡೆ ಕೆಂಪು ಲೈಟ್ ಹಾಕಿ ಎದುರಿನವರಿಗೆ irritate ಮಾಡುವ ಈ ತರಹದ ವಾಸ್ತು
ಸಹ ನಾನು ನೋಡುತ್ತರುವುದು ಇದೇ ಮೊದಲು.
ಜನ ಮರುಳೋ ಜಾತ್ರೆ ಮರುಳೋ ತಿಳಿಯದಾಗಿದೆ, ಈ ಮೂಢ ನಂಬಿಕೆಯ ಪರಮಾವಧಿಯನ್ನು ನೋಡಿ. ಏನಾದರೂ ಮೈಕ್ ಸೆಟ್ ಹಾಕಿ ಕೂಗಿಸಿದರೆ complaint ಮಾಡಬಹುದು, ಆದರೆ ಹೀಗೆ red light ಹಚ್ಚಿ irritate ಮಾಡಿದರೆ ಏನು ಮಾಡುವುದು? ಗೊತ್ತಗ್ತಾ ಇಲ್ಲ. ಲೈಟ್ ಅವನದ್ದು, ಕಣ್ಣು ಹಾಳು ನಮ್ಮದು. ಹೇಗಿದೆ ವಾಸ್ತು?
******--********-----********

No comments:

Post a Comment