Friday, 12 September 2014

ಇವತ್ತಿನ ನುಡಿಮುತ್ತು (?) - ಒಂದು ಸಂದೇಹ.

"ಮನುಷ್ಯನಿಗೆ ಬಡತನ
ಒಂದು ವರದಾನವಿದ್ದಂತೆ,
ಅದು ಜೀವನದ ಎಲ್ಲ ಪಾಠಗಳನ್ನು
ಕಲಿಸಿ, ವ್ಯಕ್ತಿಯಲ್ಲಿ ನೈತಿಕ ಸ್ಥೈರ್ಯ
ತುಂಬುತ್ತದೆ"

--ಈ ಮಾತನ್ನು ಹೇಳಿದವರು, ಪ್ರೊ.ಎಚ್.ಬಿ.ವಾಲಿಕಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ.

ಸಂದರ್ಭ :- ವಿದ್ಯಾರ್ಥಿ ಕಲ್ಯಾಣ ವಿಭಾಗದಿಂದ ಆಯೋಜಿಸಿದ್ದ 2014-15ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಷಣ ಮಾಡುವಾಗ.

ಉಳಿದೆಲ್ಲ ಮಾತುಗಳು ವಿದ್ಯಾರ್ಥಿಗಳು ಮತ್ತು ವಿದ್ಯಾಭ್ಯಾಸದ ಬಗ್ಗೆ ಸಂದರ್ಭೋಚಿತವಾಗಿದ್ದವು. ಆದರೆ ಮೇಲೆ ಕಾಣಿಸಿದ ಬಡತನದ ಬಗೆಗಿನ ವ್ಯಾಖ್ಯಾನದ ಸಾಂದರ್ಭಿಕತೆ ಮತ್ತು ಅರ್ಥ ನನಗಾಗಲಿಲ್ಲ.

ಅಂದರೆ ಬಡತನವೇ ಎಲ್ಲ ಔನ್ನತ್ಯ ಹಾಗೂ ಸಾಧನೆಗೆ ಮೂಲವೇ? ಬಡತನ ಒಂದು ವರದಾನ ಅಂದರೆ ಏನು?
ಬಡತನದಿಂದಲೇ ಅವರಂದ ಸಿದ್ದಿ ಸಿಗುವುದಾದರೆ ಎಲ್ಲರೂ
ಒಮ್ಮೆ ಬಡವರಾಗಿರಬೇಕೇ? "ಬಡತನ ಒಂದು ಶಾಪ" ಎನ್ನುವುದು ಮಾಮೂಲಿ ಮಾತು, ಆದರೆ ಅದನ್ನು ವರದಾನ ಎನ್ನುವುದು, ಏನೋಪ್ಪಾ, ಗೊತ್ತಾಗ್ತಾ ಇಲ್ಲ.

ಆದರೆ ಈ ಮಾತು ಹೇಳಿದವರು ಮಹಾ ವಿದ್ವಾಂಸರಾಗಿರುವುದರಿಂದ, ತಿಳಿದವರು ಈ ಮಾತನ್ನು ಅರ್ಥೈಸಿ ಹೇಳ್ತೀರಾ?

(ಇದು ಇಂದಿನ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ಆವೃತ್ತಿಯ ಎರಡನೇ ಪುಟದಲ್ಲಿರುವ "ಬಡತನ ಮನುಷ್ಯನಿಗೆ ದೊರೆತ ವರದಾನ" ಎಂಬ ತಲೆ ಬರಹದಲ್ಲಿ ಪ್ರಕಟವಾದ ವರದಿ ಆಧಾರಿತ)


12.09.2014

No comments:

Post a Comment