Sunday, 28 September 2014

ಬಲಿದಾನ - ಇತ್ತೀಚೆಗೆ ಇಲ್ಲಿ ನಡೆದ ನಿಜ ಘಟನೆ.

ಒಂದು ಬಡ ಕುಟುಂಬ. ತವರುಮನೆ ಗಂಡನ ಮನೆ (ಒಂದೆರಡು ರೂಮಿನ ಚಿಕ್ಕ ಮನೆಗಳು)ಅಕ್ಕ ಪಕ್ಕದಲ್ಲಿ.
ಅವಳಿಗೆ ಮೂರು ಚಿಕ್ಕ ಮಕ್ಕಳು. ಆ ಮನೆ ಈ ಮನೆ ಕೂಡಿಯೇ ಇರುತಿದ್ದವು.
ಒಂದು ತಡ ಸಂಜೆ ಅವಳು ತಾಯಿಯ ಮನೆಯಲ್ಲಿದ್ದಳು.. ಅವಳ ಮೂರು ಮಕ್ಕಳೂ
ಅಲ್ಲ್ಲೆ ಆಡುತಿದ್ದರು.
ಆಗ current ಹೋಯಿತು. ತಾಯಿ ಅಡಿಗೆ ಮನೆಗೆ ಹೋಗಿ ಮೊಂಬತ್ತಿ ಹಚ್ಚಿದಳು.
ಆದರೆ, ಅಡಿಗೆ ಮನೆಯಲ್ಲಿ ಆಗಾಗಲೇ ಲೀಕ್ ಆಗುತಿದ್ದ ಗ್ಯಾಸ್ ಹರಡಿ ಕೊಂಡಿತ್ತು.
ಕಡ್ಡಿ ಕೀರಿದ ಕೂಡಲೇ ಎಲ್ಲ ಕಡೆ ಬೆಂಕಿ ಹತ್ತಿ ಕೊಂಡಿತು. ಹೊರಗಿನ ರೂಮಿನಲ್ಲಿದ್ದ ಅವಳು,
ಅವಳ ತಮ್ಮ (16 - 17 ವರ್ಷದ ಹುಡುಗ) ಒಳ್ಗೆ ಓಡಿದರು. ಸಿಲಿಂಡೆರ್ ಸ್ಟೋವ್ ಹೊತ್ತಿ
ಉರಿಯುತಿದ್ದವು. ಅವಳ ತಮ್ಮ, ತನ್ನ ಜೀವ ಲೆಕ್ಕಿಸಿದೆ, ಉರಿ ಹತ್ತಿದ ಸಿಲಿಂಡೆರ್ ಮತ್ತು ಸ್ಟೋವ್
ಎತ್ತಿ ತಂದು ರಸ್ತೆಗೆ ಒಗೆದುರುಳಿಸಿ, ಸಿಲಿಂಡೆರ್ ಮನೆಯೊಳಗೆ ಸ್ಪೋಟವಾಗುವುದನ್ನು ತಪ್ಪಿಸಿದ.
ಆದರೆ ಅಷ್ಟರಲ್ಲಿ, ತಾನು ತಕ್ಕಷ್ಟು ಸುಟ್ಟುಕೊಂಡಿದ್ದ. ತಾಯಿಗೂ ಬಹಳ ಸುಟ್ಟ ಗಾಯಗಳಾಗಿದ್ದವು.
ಮಗಳು ಮುಖ ಹುಬ್ಬು ಕೂದಲು ಸುಟ್ಟುಕೊಂಡಿದ್ದಳು. ಮಕ್ಕಳು ಏನೂ ಅಪಾಯವಿಲ್ಲದೆ
ಪಾರಾಗಿದ್ದವು.
ಬಹಳ ಜಾಸ್ತಿ ಸುಟ್ಟುಕೊಂಡಿದ್ದ ಅವಳ ತಮ್ಮ ಈಗ ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದ.
ಅಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಗಳು ಗುಣ ಮುಖಳಾಗುತಿದ್ದಾಳೇ.
ಸಮಯ ಪ್ರಜ್ಞೆಯಿಂದ ತನ್ನ ಪ್ರಾಣದ ಪರಿವೆಯಿಲ್ಲದೆ ಸಿಲಿಂಡರ್ ಹೊರಗೆಸೆದು, ಅದು ಮನೆಯಲ್ಲಿ
ಸ್ಪೋಟ ಗೊಳ್ಳುವುದನ್ನು ತಪ್ಪಿಸಿ ಕುಟುಂಬದ ಎಲ್ಲರ ಪ್ರಾಣ ಕಾಪಾಡಿದ ಹುಡುಗ ಪಾಪ ಆಸು ನೀಗಿ
ಹುತಾತ್ಮನಾದ.
****************
28.09.2014

No comments:

Post a Comment