Saturday, 27 September 2014

ಸ್ತ್ರೀ ಇಂದ ಸ್ತ್ರೀ ಶೋಷಣೆಯ ಒಂದು ನೈಜ ಉದಾಹರಣೆ.
ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮ ಇರುವ ಒಂದು ಕುಟುಂಬ. ಅಣ್ಣ ಊರಲ್ಲಿ ಹೊಲ, ಬೇಸಾಯ ನೋಡಿಕೊಂಡಿರುವುದಲ್ಲದೆ ಒಂದು junior college ನಲ್ಲಿ lecturer ಸಹ ಆಗಿದ್ದು ತಕ್ಕ ಮಟ್ಟಿಗೆ ಸ್ಥಿತಿವಂತರೆ ಆಗಿದ್ದರು. ತಮ್ಮ ಪರ ಊರಿನಲ್ಲಿ ಏನೋ business ಮಾಡಿಕೊಂಡು ತುಂಬಾ ಹಣ, ಆಸ್ತಿ, ಬಂಗಾರ ಮಾಡಿಕೊಂಡಿದ್ದರು. ತಮ್ಮನಿಗೆ ಸಾಧಾರಣ 60 ವರ್ಷ ಹತ್ತಿರವಾಗುತಿದ್ದಾಗ, ಏನೋ ಗುಣವಾಗದ ಕಾಯಿಲೆ ಬಂದು ತೀರಿ ಹೋದನು. ಪಾಪ, ಅವರಿಗೆ ಮಕ್ಕಳೂ ಇರಲಿಲ್ಲ.
ಆಗ, ಅಣ್ಣ ಮತ್ತು ಅಣ್ಣನ ಹೆಂಡತಿ ಹೋಗಿ ತಮ್ಮನ ಹೆಂಡತಿಯನ್ನು ಅವರ ಸಕಲ ಸಂಪತ್ತಿನೊಂದಿಗೆ ತಮ್ಮ ಜೊತೆ ಇರಿ ಎಂದು ಕರೆದು ಕೊಂಡು ಬಂದರು. ಕೆಲವು ವರ್ಷಗಳು ಚೆನ್ನಾಗಿಯೇ ಉರುಳಿದವು. ಆಮೇಲೆ ಅಣ್ಣನ ಹೆಂಡತಿ ನಿಧಾನವಾಗಿ, ತಮ್ಮನ ಹೆಂಡತಿಯನ್ನು ಪುಸಲಾಯಿಸಿ, "ನಿಮಗೂ ವಯಸ್ಸಾಯಿತು, ನೀವು ನೂರ್ಕಾಲ ಬಾಳಿ, ಅದಕ್ಕಲ್ಲ. ಅಕಸ್ಮಾತ್ ನಿಮಗೇನಾದರೂ ಆದರೆ, ನಿಮ್ಮ ಆಸ್ತಿಗೆ ಹತ್ತು ಹಲವು ಹಕ್ಕುದಾರರು ಹುಟ್ಟಿ ಕೊಳ್ಳುತ್ತಾರೆ., ಆದ್ದರಿಂದ ನಿಮ್ಮ ಆಸ್ತಿಯನ್ನೆಲ್ಲ ನಮ್ಮ ಮಕ್ಕಳ ಹೆಸರಿಗೆ ಬರೆದು ಬಿಡಿ, ನಿಮ್ಮನ್ನು ಕೊನೆ ತನಕ ನಾವು ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ" ಅಂದಳು. ಮುದುಕಿ ಸತ್ಯ ನಂಬಿ ಹಾಗೇ ಮಾಡಿತು. ಬಂಗಾರವಂತೂ ಮನೆಯಲ್ಲೇ ಇತ್ತಲ್ಲ.
ಸ್ವಲ್ಪ ದಿನದ nantara ತಮ್ಮನ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಆಗಾಗ ಹಾಸಿಗೆ ಹಿಡಿಯುವುದು, ಏಳುವುದು ನಡೆಯ ತೊಡಗಿತು. ಅಣ್ಣನ ಹೆಂಡತಿ ಗಟ್ಟಿಯಾಗಿಯೇ ಇದ್ದಳು. ಅವಳಿಗೆ ಈ ತಂಗಿಯ ಸೇವೆ ಮಾಡುವುದು ಅಸಹನೀಯ ಮತ್ತು ಅಸಹ್ಯವೆನಿಸಿತು. ಅಣ್ಣನ ಹೆಂಡತಿ ಮತ್ತು ಅಣ್ಣ (ಅವನು henpecked ಇದ್ದ.) ಮಸಲತ್ತು ಮಾಡಿ, ಮುದುಕಿಯನ್ನು ನಿನ್ನನ್ನು ದೊಡ್ಡ ಆಸ್ಪತ್ರೆಗೆ ಸೇರಿಸಿ ಗುಣ ಮಾಡಿಸುತ್ತೇವೆ ಎಂದು ನಂಬಿಸಿದರು. ಪಕ್ಕದ ದೊಡ್ಡ ಊರಿನ ವೃದ್ಧಾಶ್ರಮಕ್ಕೆ ಕರೆದು ಕೊಂಡು ಹೋಗಿ ಸೇರಿಸಿ ಬಂದರು. ನಂತರ ಅಲ್ಲಿನ ನಿಯಮದ ಪ್ರಕಾರ ಸ್ವಲ್ಪ ಹಣ ಕಳಿಸುವುದನ್ನು ಬಿಟ್ಟರೆ, ಆ ಕಡೆ ತಿರುಗಿಯೂ ನೋಡಲಿಲ್ಲ.
ಆ ಮೇಲೆ ಒಂದು ದಿನ ಅವಳು ಸತ್ತ ಸುದ್ದಿ ಬಂದಾಗ, ಹೋಗಿ ಹೆಣ ತೆಗೆದು ಕೊಂಡು ಬಂದು, ಬೊಜ್ಜ ಮಾಡಿ ಒಂದಿಷ್ಟು ಜನರಿಗೆ ಊಟ ಹಾಕಿಸಿ ಕೈ ತೊಳೆದು ಕೊಂಡರು.
ಇದು ಒಂದು ನೈಜ ಶೋಷಣೆಯ ಕತೆ. ಆದರೆ ಸೂಚ್ಯವಾಗಿದೆ. ಸೂಚಕವಾಗಿಲ್ಲ.
****************

25.09.2014

No comments:

Post a Comment