Friday, 12 September 2014

ಕತ್ತಲು - ಬೆಳಕು

ಕತ್ತಲಾಯಿತೆಂದು
ಬೇಸರಿಸಿ ಕುಗ್ಗ ಬೇಡ,
ಬೆಳಕಾಯಿತೆಂದು
ಹಿರಿದು ಹಿಗ್ಗ ಬೇಡ
ಕತ್ತಲು ಬೆಳಕು
ಬೆಳಕು ಕತ್ತಲು
ಎರಡೂ ತಾತ್ಕಾಲಿಕ
ಆದರೆ ನಿಶ್ಚಿತ.

ಕತ್ತಲಲಿ ಕಾಯು
ಬೆಳಕಿಗಾಗಿ,
ಬೆಳಕಿನಲಿ ಅವಸರಿಸು
ಕತ್ತಲು ಮುಂದಿದೆಯೆಂದು,
ಹೊಂದಿಸು ಬದುಕನ್ನು
ಈ ನಶ್ವರ ಕತ್ತಲು
ಬೆಳಕಿನ ಆಟದಲ್ಲಿ,
ಇದು ಜೀವನದ ತಿರುಳು.
ಇಹದ ಬದುಕಿನ ಅರಿವು

ಆದರೆ ನೆನಪಿರಲಿ ಚಿರ ಸತ್ಯ,
ಹುಟ್ಟೇ ದೀರ್ಘ ಹಗಲು,
ಸಾವೇ ಈ ಹಗಲ ಕೊನೆ,
ಶಾಶ್ವತ ಕತ್ತಲು.

09.09.2014

No comments:

Post a Comment