ಎಂದೆಂದೂ ಬಾಡದಿರಲಿ
ಈ ಮುದ್ದು ಹೂ ನಗು,
ಪ್ರೀತಿಯ ದೋಣಿಯಲಿ
ನಲಿ ನಲಿದು ಸಾಗಲಿ
ಈ ಸುಖದ ಪಯಣ,
ಪ್ರೀತಿಯೆಂಬುದು ಒಂದು
ದಿನವಲ್ಲ, ಅದು ನಿರಂತರ
ಸಂವಾದ, ಜೀವಿ ಜೀವಿಗಳ
ಮನಗಳ ಮಧುರ ಮಿಲನ.
ಪ್ರೀತಿಯ ಬಾಳು ಹಸನಾಗಲಿ,
ಸದಾ ಕಂಪಿನ ಹಸಿರಾಗಲಿ.
ಪ್ರೀತಿಯ ನವಿರು ಅಮರವಾಗಿರಲಿ.
ಹೃದಯ ಹೃದಯಗಳ ಬೆರಸಿ
ಪ್ರೇಮಿಸುವ ನಿಜ ಪ್ರೇಮಿಗಳಿಗೆ
ಸದಾ, ಸದಾ... ಶುಭವಾಗಲಿ.
No comments:
Post a Comment