Friday, 15 April 2016

ಪ್ರೀತಿಯ ಪಿಸು ಮಾತುಗಳು.... smile emoticon (Whispers of Love)
======================
ಅದೆಂಥ ಪ್ರೇಮ ಸುಗಂಧ
ಸೂಸಿ, ಬೀಸಿ ತರುತ್ತಿದೆ
ಈ ಕಂಪಿನ ತಂಗಾಳಿ...
ಸಂಪಿಗೆ ಮೊಗ್ಗಿನ ಮೂಗಿನಲಿ
ಅರೆ ಬಿರಿದ ಕಂಗಳಲಿ ಏನದು,
ಪ್ರೇಮದ ತಾದಾತ್ಮ್ಯ ಭಾವವೇ?
ಹೊಂಬಣ್ಣದ ಹೇ ಸುಂದರಿ
ನಿನ್ನ ಚದುರಿದ ಕೇಶರಾಶಿಯ
ಜತನದಿ ಹಿಡಿದುಕೋ....
ಜೋಪಾನ, ದುಂಬಿಗಳು
ಕದ್ದೊಯ್ದಾವು ಈ ಕೇಶವ
ತಮ್ಮರಮನೆಯ ಶೃಂಗರಿಸಲು,
ಮಂದ ಮಾರುತವೇನು
ಉಸಿರಿತು ನಿನ್ನ ಕಾಣದ
ಕರ್ಣಗಳಲಿ, ಇನಿಯನ ಒಸಗೆಯೇ?
ಬರುವನಂತೇನು ಇನಿಯ?
ಅದಕ್ಕೇನೇ ಈ ಪರಿ
ಖುಶಿಯ ಹರ್ಷೋಲ್ಲಾಸವೇ?
ಚಿಂತಿಸದಿರು ಅಲ್ಲಿರುವನವ
ಚಿಗುರು ಫಲಗಳ ಮರೆಯಲ್ಲಿ,
ಬಂದೀವ ಸವಿ ಮುತ್ತುಗಳ
ಬಿಸಿಯಪ್ಪುಗೆಯ ಬಂಧನದಲ್ಲಿ.
+++++++++++++++++++++

No comments:

Post a Comment