ಅಂದು ನಮ್ಮೂರ
ಅಂದವೇ ಅಂದ.
ಅಂದವೇ ಅಂದ.
ಮನೆಯಂಗಳದಿ ನಿಂತು
ಮೂಡಣ ದಿಟ್ಟಿಸಿದರೆ
ದಿಗಂತದಂಚಿನವರೆಗೆ
ಭತ್ತದ ಪೈರಿನ
ಹಸಿರು ಹಾಸು,
ಮೂಡಣ ದಿಟ್ಟಿಸಿದರೆ
ದಿಗಂತದಂಚಿನವರೆಗೆ
ಭತ್ತದ ಪೈರಿನ
ಹಸಿರು ಹಾಸು,
ಮಾಗಿದ ಮೇಲೆ
ಹೊಂಬಣ್ಣದ ಹೊದಿಕೆಯ
ಹೊಯ್ದಾಟದ ಮೆರುಗು.
ಹೊಂಬಣ್ಣದ ಹೊದಿಕೆಯ
ಹೊಯ್ದಾಟದ ಮೆರುಗು.
ಆದರಿಂದು ನೋಡಿದೆನಲ್ಲಿ
ಬಯಲೂ ಇಲ್ಲ.
ಭತ್ತದ ಪೈರೂ ಇಲ್ಲ.
ಬಯಲೂ ಇಲ್ಲ.
ಭತ್ತದ ಪೈರೂ ಇಲ್ಲ.
ಮಾನವನ ಅತಿಕ್ರಮಣ
ಮನೆ ಮಠಗಳ ನಿರ್ಮಾಣ
ಪ್ರಕ್ಟತಿ ಮೇಲೆ ಆಕ್ರಮಣ
ಯಾರೂ ತಡೆಯದ
ಈ ಪ್ರಕೃತಿ ಮರಣ.
ಮನೆ ಮಠಗಳ ನಿರ್ಮಾಣ
ಪ್ರಕ್ಟತಿ ಮೇಲೆ ಆಕ್ರಮಣ
ಯಾರೂ ತಡೆಯದ
ಈ ಪ್ರಕೃತಿ ಮರಣ.
No comments:
Post a Comment