Tuesday, 26 April 2016
ಇದು ಸುಮಾರು ಮುವತ್ತು ವರ್ಷಗಳ ಹಿಂದಿನ ಫೋಟೋ. ಇವತ್ತು ಮನೆ ಕ್ಲೀನ್ ಮಾಡುವಾಗ ಅಕಸ್ಮಾತ್ ಸಿಕ್ಕಿತು. ನಾನು ರಾಣೆಬೆನ್ನೂರ್ ತಾಲೂಕಿನ ಒಂದು ಹಳ್ಳಿ, "ತುಮ್ಮಿನಕಟ್ಟಿ"ಯಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ರೈತರಿಗೆ ಟ್ರ್ಯಾಕ್ಟರ್ ತೆಗೆದು ಕೊಳ್ಳಲು ಬ್ಯಾಂಕಿನಿಂದ ಸಾಲ ಸಹಾಯ ಮಾಡಿ, ಆ ಟ್ರ್ಯಾಕ್ಟರ್ ಕೀ ಯನ್ನು ರೈತ ಬಂಧುವಿಗೆ ಹ್ಯಾಂಡ್ ಓವರ್ ಮಾಡುತ್ತಿರುವಾಗ ತೆಗೆದ ಫೋಟೋ........ಬೆಲ್ ಬಾಟಮ್ ಪ್ಯಾಂಟುಗಳ ಕಾಲ....smile emoticon ಇದರಲ್ಲಿ, ರೈತನಿಗೆ ಕೀ ನೀಡುತ್ತಿದ್ದವನೇ ನಾನು...... smile emoticon ಹಳೇ ನೆನಪಿನ ಕುರುಹುಗಳು ಸಿಕ್ಕಿದಾಗ, ಖುಶಿಯಾಗುತ್ತದೆ..... smile emoticon
Friday, 15 April 2016
ಪ್ರೀತಿಯ ಪಿಸು ಮಾತುಗಳು.... smile emoticon (Whispers of Love)
======================
======================
ಅದೆಂಥ ಪ್ರೇಮ ಸುಗಂಧ
ಸೂಸಿ, ಬೀಸಿ ತರುತ್ತಿದೆ
ಈ ಕಂಪಿನ ತಂಗಾಳಿ...
ಸೂಸಿ, ಬೀಸಿ ತರುತ್ತಿದೆ
ಈ ಕಂಪಿನ ತಂಗಾಳಿ...
ಸಂಪಿಗೆ ಮೊಗ್ಗಿನ ಮೂಗಿನಲಿ
ಅರೆ ಬಿರಿದ ಕಂಗಳಲಿ ಏನದು,
ಪ್ರೇಮದ ತಾದಾತ್ಮ್ಯ ಭಾವವೇ?
ಅರೆ ಬಿರಿದ ಕಂಗಳಲಿ ಏನದು,
ಪ್ರೇಮದ ತಾದಾತ್ಮ್ಯ ಭಾವವೇ?
ಹೊಂಬಣ್ಣದ ಹೇ ಸುಂದರಿ
ನಿನ್ನ ಚದುರಿದ ಕೇಶರಾಶಿಯ
ಜತನದಿ ಹಿಡಿದುಕೋ....
ನಿನ್ನ ಚದುರಿದ ಕೇಶರಾಶಿಯ
ಜತನದಿ ಹಿಡಿದುಕೋ....
ಜೋಪಾನ, ದುಂಬಿಗಳು
ಕದ್ದೊಯ್ದಾವು ಈ ಕೇಶವ
ತಮ್ಮರಮನೆಯ ಶೃಂಗರಿಸಲು,
ಕದ್ದೊಯ್ದಾವು ಈ ಕೇಶವ
ತಮ್ಮರಮನೆಯ ಶೃಂಗರಿಸಲು,
ಮಂದ ಮಾರುತವೇನು
ಉಸಿರಿತು ನಿನ್ನ ಕಾಣದ
ಕರ್ಣಗಳಲಿ, ಇನಿಯನ ಒಸಗೆಯೇ?
ಉಸಿರಿತು ನಿನ್ನ ಕಾಣದ
ಕರ್ಣಗಳಲಿ, ಇನಿಯನ ಒಸಗೆಯೇ?
ಬರುವನಂತೇನು ಇನಿಯ?
ಅದಕ್ಕೇನೇ ಈ ಪರಿ
ಖುಶಿಯ ಹರ್ಷೋಲ್ಲಾಸವೇ?
ಅದಕ್ಕೇನೇ ಈ ಪರಿ
ಖುಶಿಯ ಹರ್ಷೋಲ್ಲಾಸವೇ?
ಚಿಂತಿಸದಿರು ಅಲ್ಲಿರುವನವ
ಚಿಗುರು ಫಲಗಳ ಮರೆಯಲ್ಲಿ,
ಬಂದೀವ ಸವಿ ಮುತ್ತುಗಳ
ಬಿಸಿಯಪ್ಪುಗೆಯ ಬಂಧನದಲ್ಲಿ.
+++++++++++++++++++++
ಚಿಗುರು ಫಲಗಳ ಮರೆಯಲ್ಲಿ,
ಬಂದೀವ ಸವಿ ಮುತ್ತುಗಳ
ಬಿಸಿಯಪ್ಪುಗೆಯ ಬಂಧನದಲ್ಲಿ.
+++++++++++++++++++++
Sunday, 10 April 2016
ತಮ್ಮ ಬಾಲ್ಯದಲ್ಲಿ ನಡೆದ
ಘಟನೆಗಳನ್ನು ತಾವು
ದೊಡ್ಡವರಾದ ಮೇಲೆ
ನೆನಪಿಟ್ಟು ಕೊಳ್ಳುವ
ವಯಸ್ಸಿಗೆ ಮಕ್ಕಳು
ಬೆಳೆದ ನಂತರ, ಅವರನ್ನು
ಒಳ್ಳೆಯದರಲ್ಲಿ ತಿದ್ದಿ
ಬುದ್ಧಿ ಹೇಳದೆ,
ಶಿಸ್ತಿನ ಪಾಠದ ಹೆಸರಿನಲ್ಲಿ
ಅಮಾನವೀಯವಾಗಿ
ಜರಿದು ದಂಡಿಸುವ
ತಂದೆ ತಾಯಂದಿರು,
ವೃದ್ಧಾಶ್ರಮದಲ್ಲಿ ತಮಗೋಸ್ಕರ
ಮೊದಲೇ ಸೀಟುಗಳನ್ನು
ರಿಸರ್ವ್ ಮಾಡಿಸಿಟ್ಟು
ಕೊಳ್ಳುವುದು ಒಳ್ಳೆಯದು... frown emoticon
ಘಟನೆಗಳನ್ನು ತಾವು
ದೊಡ್ಡವರಾದ ಮೇಲೆ
ನೆನಪಿಟ್ಟು ಕೊಳ್ಳುವ
ವಯಸ್ಸಿಗೆ ಮಕ್ಕಳು
ಬೆಳೆದ ನಂತರ, ಅವರನ್ನು
ಒಳ್ಳೆಯದರಲ್ಲಿ ತಿದ್ದಿ
ಬುದ್ಧಿ ಹೇಳದೆ,
ಶಿಸ್ತಿನ ಪಾಠದ ಹೆಸರಿನಲ್ಲಿ
ಅಮಾನವೀಯವಾಗಿ
ಜರಿದು ದಂಡಿಸುವ
ತಂದೆ ತಾಯಂದಿರು,
ವೃದ್ಧಾಶ್ರಮದಲ್ಲಿ ತಮಗೋಸ್ಕರ
ಮೊದಲೇ ಸೀಟುಗಳನ್ನು
ರಿಸರ್ವ್ ಮಾಡಿಸಿಟ್ಟು
ಕೊಳ್ಳುವುದು ಒಳ್ಳೆಯದು... frown emoticon
*****ದಾರ್ಶನಿಕ
ಒಂದು ವರ್ಷದ ಹಿಂದೆ ಬರೆದ (ಕವಿತೆ ಎನ್ನ ಬಹುದಾದರೆ) ಒಂದು ಕವಿತೆಯ
ಸಾಲುಗಳು.......ಈಗಲೂ ಕೋಗಿಲೆ ಹಾಗೇನೇ ಕೂಗುತ್ತಿದೆ.....
ಅನಂತದಿಂದ ನಿರಂತರ ಬರುವ, ಕೆಲವೊಮ್ಮೆ ಏಕತಾನದ, ಕೆಲವೊಮ್ಮೆ
ಏರಿಳಿತದ, ಕೆಲವೊಮ್ಮೆ ಮಧುರವೆನಿಸುವ, ಮತ್ತೊಮ್ಮೆ ವಿರಹದ ದುಃಖವೆನಿಸುವ, ಮಗುದೊಮ್ಮೆ ಸಂತೋಷದ ಕೇಕೆ ಎನಿಸುವ ದನಿ smile emoticon...................ಮತ್ತೊಮ್ಮೆ
ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು.....smile emoticon ಅದಕ್ಕೇ ಈ copy & paste.
==============================================
ಸಾಲುಗಳು.......ಈಗಲೂ ಕೋಗಿಲೆ ಹಾಗೇನೇ ಕೂಗುತ್ತಿದೆ.....
ಅನಂತದಿಂದ ನಿರಂತರ ಬರುವ, ಕೆಲವೊಮ್ಮೆ ಏಕತಾನದ, ಕೆಲವೊಮ್ಮೆ
ಏರಿಳಿತದ, ಕೆಲವೊಮ್ಮೆ ಮಧುರವೆನಿಸುವ, ಮತ್ತೊಮ್ಮೆ ವಿರಹದ ದುಃಖವೆನಿಸುವ, ಮಗುದೊಮ್ಮೆ ಸಂತೋಷದ ಕೇಕೆ ಎನಿಸುವ ದನಿ smile emoticon...................ಮತ್ತೊಮ್ಮೆ
ನಿಮ್ಮಲ್ಲಿ ಹಂಚಿಕೊಳ್ಳುವ ಅನಿಸಿತು.....smile emoticon ಅದಕ್ಕೇ ಈ copy & paste.
==============================================
ಎಲ್ಲಿರುವೇ...ನೀ ಕೋಗಿಲೆ
**********************
**********************
ಎಲ್ಲಿಂದಲೋ
ಮಾಮರದೆಡೆಯಿಂದ
ಕಾಣದ ಕೋಗಿಲೆಯ
ಇಂಚರ ಕೇಳಿಸುತ್ತಿದೆ
ಮಾಮರದೆಡೆಯಿಂದ
ಕಾಣದ ಕೋಗಿಲೆಯ
ಇಂಚರ ಕೇಳಿಸುತ್ತಿದೆ
ಅದೇನು ಹಾಡೋ
ವಿರಹದ ಕರೆಯೋ
ತಿಳಿಯದು.
ನನಗಂತೂ ಆ
ದನಿ ವಿರಹದ
ವೇದನೆಯ ನೋವಿನ
ಕರೆಯಂತೆ ಕೇಳುತ್ತಿದೆ.
ವಿರಹದ ಕರೆಯೋ
ತಿಳಿಯದು.
ನನಗಂತೂ ಆ
ದನಿ ವಿರಹದ
ವೇದನೆಯ ನೋವಿನ
ಕರೆಯಂತೆ ಕೇಳುತ್ತಿದೆ.
ಆದರೆ ಕವಿಗಳು
ಕೋಗಿಲೆ ಹಾಡುತ್ತದೆ
ಎಂದು ಬರೆಯುತ್ತಾರೆ,
ಗಾಯಕರು "ಕೋಗಿಲೆ
ಹಾಡುತಿದೆ" ಎಂದು
ತಾವೇ ಹಾಡುತ್ತಾರೆ....
ಕೋಗಿಲೆ ಹಾಡುತ್ತದೆ
ಎಂದು ಬರೆಯುತ್ತಾರೆ,
ಗಾಯಕರು "ಕೋಗಿಲೆ
ಹಾಡುತಿದೆ" ಎಂದು
ತಾವೇ ಹಾಡುತ್ತಾರೆ....
ಏನು ನಿನ್ನ ಸಮಸ್ಯೆ
ಎಂದು ಕೇಳೋಣವೆಂದರೆ,
ಅದು ಕಣ್ಣಿಗೇ ಕಾಣುತ್ತಿಲ್ಲವೇ,
ತನ್ನ ಕುರೂಪ ಮುಚ್ಚಿಡಲೋ ಏನೋ
ಅದೆಲ್ಲೋ ಅಡಗಿ ಕುಳಿತಿದೆ
ಎಂದು ಕೇಳೋಣವೆಂದರೆ,
ಅದು ಕಣ್ಣಿಗೇ ಕಾಣುತ್ತಿಲ್ಲವೇ,
ತನ್ನ ಕುರೂಪ ಮುಚ್ಚಿಡಲೋ ಏನೋ
ಅದೆಲ್ಲೋ ಅಡಗಿ ಕುಳಿತಿದೆ
ಬರೇ ದನಿ ಕೇಳಿಸುತ್ತಿದೆ
ಶೂನ್ಯವೆನಿಸುವ
ಕಾಣದ ಅನಂತದಿಂದ.....
ಕಾಣದ ಅನಂತದಿಂದ.....
ಶೂನ್ಯವೆನಿಸುವ
ಕಾಣದ ಅನಂತದಿಂದ.....
ಕಾಣದ ಅನಂತದಿಂದ.....
08.04.2015
ಜಗಳದ ಪರಾಕಾಷ್ಟೆ.
=============
=============
ದಿನಾ ಗಂಡ ಹೆಂಡಿರ ಜಗಳ,
ಕೂತರೆ ಜಗಳ, ನಿಂತರೆ ಜಗಳ.
ಕೂತರೆ ಜಗಳ, ನಿಂತರೆ ಜಗಳ.
ಮನೆಯ ಒಳಗೂ ಜಗಳ
ಮನೆಯ ಹೊರೆಗೂ ಜಗಳ
ಮನೆಯ ಹೊರೆಗೂ ಜಗಳ
ಹೋದಲ್ಲಿಯೂ ಜಗಳ
ಬಂದಲ್ಲಿಯೂ ಜಗಳ
ಬಂದಲ್ಲಿಯೂ ಜಗಳ
ಒಂದು ದಿನ ಕಾರಿನಲ್ಲಿ ಪ್ರಯಾಣ
ಬದಿಯಲ್ಲಿ ಕುಳಿತ ಹೆಂಡತಿ
ಜಗಳ ಶುರು ಹಚ್ಚಿ ಕೊಂಡೇ ಇದ್ದಳು
ಬದಿಯಲ್ಲಿ ಕುಳಿತ ಹೆಂಡತಿ
ಜಗಳ ಶುರು ಹಚ್ಚಿ ಕೊಂಡೇ ಇದ್ದಳು
ಹಿಂದರೆಡು ಮಕ್ಕಳು ತಲೆ ಮೇಲೆ
ಕೈ ಹೊತ್ತು ಕುಳಿತಿದ್ದವು
ಕೈ ಹೊತ್ತು ಕುಳಿತಿದ್ದವು
ಗಂಡ ಗೋಗರೆದ, ಡ್ರೈವಿಂಗ್
ಮಾಡುವಾಗಲಾದರು ಸುಮ್ಮನಿರು ಕಣೆ
ಲಕ್ಷ್ಯ ತಪ್ಪಿದರೆ ಆಕ್ಸಿಡೆಂಟ್ ಆಗುತ್ತೇ....
ಮಾಡುವಾಗಲಾದರು ಸುಮ್ಮನಿರು ಕಣೆ
ಲಕ್ಷ್ಯ ತಪ್ಪಿದರೆ ಆಕ್ಸಿಡೆಂಟ್ ಆಗುತ್ತೇ....
ನೀವೇನು ಬಾಯಲ್ಲಿ ಡ್ರೈವ್ ಮಾಡ್ತೀರಾ
ಕೈಯಲ್ಲಿ ಡ್ರೈವ್ ಮಾಡ್ತಿದ್ದೀರಾ.....ಮತ್ತದೇ ಜಗಳ
ಕೈಯಲ್ಲಿ ಡ್ರೈವ್ ಮಾಡ್ತಿದ್ದೀರಾ.....ಮತ್ತದೇ ಜಗಳ
ಗಂಡನ ಏಕಾಗ್ರತೆ ತಪ್ಪಿತು,
ಎದುರಿನಿಂದ ಬಂದ ಲಾರಿಯೊಂದು
ಬಲ ಬದಿಗೆ ಗುದ್ದಿತು......
ಎದುರಿನಿಂದ ಬಂದ ಲಾರಿಯೊಂದು
ಬಲ ಬದಿಗೆ ಗುದ್ದಿತು......
ಡ್ರೈವ್ ಮಾಡುತ್ತಿದ್ದ ಗಂಡ
ಗಂಡನ ಹಿಂದೆ ಕುಳಿತಿದ್ದ ಎರಡು
ಪುಟ್ಟ ಮಕ್ಕಳು ಸೀದಾ ಶಿವನ ಪಾದಕ್ಕೆ..
ಗಂಡನ ಹಿಂದೆ ಕುಳಿತಿದ್ದ ಎರಡು
ಪುಟ್ಟ ಮಕ್ಕಳು ಸೀದಾ ಶಿವನ ಪಾದಕ್ಕೆ..
ಇವಳು ಸಾಯಲಿಲ್ಲ, ಆದರೆ ಬಲಗೈ
ತುಂಡಾಯ್ತು........ಈಗ ಜಗಳವಾಡಲು
ಗಂಡನಿಲ್ಲವಲ್ಲ ಎಂದು ಕೊರಗ್ತಾ ಇದ್ದಾಳೆ.... frown emoticon
ತುಂಡಾಯ್ತು........ಈಗ ಜಗಳವಾಡಲು
ಗಂಡನಿಲ್ಲವಲ್ಲ ಎಂದು ಕೊರಗ್ತಾ ಇದ್ದಾಳೆ.... frown emoticon
ನನ್ನಮ್ಮ......
============
============
ಅಮ್ಮ ನಿನ್ನ
ನಳಿಲ್ದೋಳುಗಳ
ಉಯ್ಯಾಲೆ ಇನ್ನೂ ನೆನಪಿದೆ.
ನಳಿಲ್ದೋಳುಗಳ
ಉಯ್ಯಾಲೆ ಇನ್ನೂ ನೆನಪಿದೆ.
ನೀನು ಲೊಚಗುಟ್ಟಿ
ಕೊಡುತ್ತಿದ್ದ ಮುತ್ತುಗಳ
ಸವಿ ಇನ್ನೂ ಸಿಹಿಯಾಗಿದೆ.
ಕೊಡುತ್ತಿದ್ದ ಮುತ್ತುಗಳ
ಸವಿ ಇನ್ನೂ ಸಿಹಿಯಾಗಿದೆ.
ನೀನಿಡುತ್ತಿದ್ದ ಕಚಗಳಿ
ನನ್ನಲ್ಲಿ ಮೂಡಿಸುತ್ತಿದ್ದ
ಕಿಲ ಕಿಲ ನಗು ಇನ್ನೂ ಹಸಿರಾಗಿದೆ
ನನ್ನಲ್ಲಿ ಮೂಡಿಸುತ್ತಿದ್ದ
ಕಿಲ ಕಿಲ ನಗು ಇನ್ನೂ ಹಸಿರಾಗಿದೆ
ನಿನ್ನಮೃತವ ಕಣ್ಣರೆ ಮುಚ್ಚಿ
ಹೀರಿ ಸವಿದ ಆನಂದ
ಇನ್ನೂ ನಾ ಮರೆಯಲಾರೆ
ಹೀರಿ ಸವಿದ ಆನಂದ
ಇನ್ನೂ ನಾ ಮರೆಯಲಾರೆ
ನಿನ್ನ ಕೈತುತ್ತಿನ ಸವಿ ರುಚಿಯ
ನನ್ನೀ ನಾಲಗೆ
ಇನ್ನೂ ಮೆಲುಕಾಡುತ್ತಿದೆ
ನನ್ನೀ ನಾಲಗೆ
ಇನ್ನೂ ಮೆಲುಕಾಡುತ್ತಿದೆ
ನಿನ್ನ ತೋಳ ತಲೆದಿಂಬು,
ನನ್ನ ಬಳಸಿ ತಡವಿ ಬರಿಸಿದ
ನಿದ್ರೆಯಲ್ಲಿ ಅದೆಷ್ಟು ಸುಖವಿತ್ತು.
ನನ್ನ ಬಳಸಿ ತಡವಿ ಬರಿಸಿದ
ನಿದ್ರೆಯಲ್ಲಿ ಅದೆಷ್ಟು ಸುಖವಿತ್ತು.
ನಿನ್ನ ಇನಿದನಿಯ ಜೋಗುಳ
ಆಡಿ, ಆಡಿ ದಣಿದ ನನಗೆ
ಸುಖದ ಸಂಜೀವಿನಿಯಾಗಿತ್ತು
ಆಡಿ, ಆಡಿ ದಣಿದ ನನಗೆ
ಸುಖದ ಸಂಜೀವಿನಿಯಾಗಿತ್ತು
ಅಮ್ಮಾ ನೀ ಬಾಳು ನೂರ್ಕಾಲ,
ನಿನ್ನ ಹರಕೆ ಸ್ಥಿರವಾಗಿರಲಿ
ಎಂದೆಂದಿಗೂ ನನ್ನ ಮೇಲೆ
ಎಂದೆಂದಿಗೂ ನನ್ನ ಮೇಲೆ..... smile emoticon
ನಿನ್ನ ಹರಕೆ ಸ್ಥಿರವಾಗಿರಲಿ
ಎಂದೆಂದಿಗೂ ನನ್ನ ಮೇಲೆ
ಎಂದೆಂದಿಗೂ ನನ್ನ ಮೇಲೆ..... smile emoticon
************************************
(87 ರ ಹರೆಯದ, ಇನ್ನೂ ನಮ್ಮೆಲ್ಲರ
ಸ್ಪೂರ್ತಿಯ ಚಿಲುಮೆ ಯಾಗಿರುವ ನಮ್ಮಮ್ಮ.... smile emoticon )
(87 ರ ಹರೆಯದ, ಇನ್ನೂ ನಮ್ಮೆಲ್ಲರ
ಸ್ಪೂರ್ತಿಯ ಚಿಲುಮೆ ಯಾಗಿರುವ ನಮ್ಮಮ್ಮ.... smile emoticon )
ಒಮ್ಮೊಮ್ಮೆ ಹಾಗೇ ಸುಮ್ಮನೇ ಕುಳಿತಾಗ, ನನ್ನ ಪ್ರಿಯ ಮಿತ್ರ K. ಮಹಾಬಲೇಶ್ವರ ಭಟ್ ಅವರ ಈ ಚುಟುಕು ಬರಹವನ್ನು ನೆನಸಿಕೊಂಡು ಮನಸ್ಸಿನಲ್ಲೇ ಮುಗುಳು ನಗು
ಬರುತ್ತಿರುತ್ತದೆ...... smile emoticon
*****************************************
ಬರುತ್ತಿರುತ್ತದೆ...... smile emoticon
*****************************************
"ಮನೆಯಲ್ಲಿ ಪೂಜಾಕಾರ್ಯಕ್ರಮ ನಡೀತಾ ಇರೋವಾಗ ಹೆಂಗಸರು sleeveless blouse,ಬೆನ್ನು ತೋರಿಸೋ ರವಿಕೆ,ಇತ್ಯಾದಿ ಹಾಕ್ಕೊಂಡು ಓಡಾಡ್ತಾ ಇದ್ರೆ ಸುತ್ತಮುತ್ತಲಿನವರಿಗೆ ಭಕ್ತಿಭಾವವೇ ರಸಿಕಭಾವವಾಗಿ ವಿಜೃಂಭಿಸುವ ಸಾಧ್ಯತೆ ಹೆಚ್ಚು.(ಅರ್ಚಕರಿಗೆ ಮಂತ್ರ ತಪ್ಪೋ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗದು)"
ಆದರೆ, ಪೂಜೆ ನಡೆಯುವಲ್ಲಿ ಹೆಂಗಳೆಯರು ಹೀಗಿದ್ದರೆ ಭಾವ ಬದಲಾಗದು..... smile emoticon
ಚೆಂದದ ಬೆನ್ನು ಹತ್ತಿ ಹೋದೆ
ಬೆಚ್ಚಿ ಬಿದ್ದೆ ಹಿಂದೆ ಪರ್ಸನಾಲಟಿ
ಮುಂದೆ ಮುನಿಸಿಪಾಲಿಟಿ ನೋಡಿ,
ಬೆಚ್ಚಿ ಬಿದ್ದೆ ಹಿಂದೆ ಪರ್ಸನಾಲಟಿ
ಮುಂದೆ ಮುನಿಸಿಪಾಲಿಟಿ ನೋಡಿ,
ಬುದ್ಧಿಯ ಬೆನ್ನು ಹತ್ತಿ ಹೋದೆ
ತಾಳ ಮೇಳ ಹೊಂದದೆ
ಬುದ್ದಿ ಶೂನ್ಯನಾಗಿ ಸೋತೆ
ತಾಳ ಮೇಳ ಹೊಂದದೆ
ಬುದ್ದಿ ಶೂನ್ಯನಾಗಿ ಸೋತೆ
ಬೆಳಕೇ ನೀನೇ ದಾರಿ ದೀಪವೆಂದೆ
ದಾರಿಯೇ ಕಾಣದಷ್ಟು ಕತ್ತಲಲ್ಲಿ
ಕಣ್ಣು ಕಣ್ಣು ಪಿಳುಕಿಸಿದೆ
ದಾರಿಯೇ ಕಾಣದಷ್ಟು ಕತ್ತಲಲ್ಲಿ
ಕಣ್ಣು ಕಣ್ಣು ಪಿಳುಕಿಸಿದೆ
ಹೋಗಲಿ, ವಿದ್ಯೆ ಹಿಂದೆ ಹೋದೆ
ಆದರೆ ಕೊನೇ ಬೆಂಚಿನ
ಕಟ್ಟ ಕೊನೆಯವನಾದೆ
ಆದರೆ ಕೊನೇ ಬೆಂಚಿನ
ಕಟ್ಟ ಕೊನೆಯವನಾದೆ
ನಗುವು ನನಗೆ ಖುಶಿಯೆಂದು
ಬೆನ್ನು ಹತ್ತಿದರೆ
ಉರಿ ಮೋರೆಗಳೇ ಎದುರಾದವು
ಬೆನ್ನು ಹತ್ತಿದರೆ
ಉರಿ ಮೋರೆಗಳೇ ಎದುರಾದವು
ಕನಸುಗಳ ಬೆನ್ನಟ್ಟಿದೆ.
ಅಯ್ಯೋ ಬೆಪ್ಪೇ, ಇವು ಬರೆ ಕನಸುಗಳು
ಎಂದು ಅಣಕಿಸಿ ಮಾಯವಾದವು.
ಅಯ್ಯೋ ಬೆಪ್ಪೇ, ಇವು ಬರೆ ಕನಸುಗಳು
ಎಂದು ಅಣಕಿಸಿ ಮಾಯವಾದವು.
ಹೋಗಲಿ ನೋಡುವ ಎಂದು
ಮನಸುಗಳ ಹುಡುಕಿದೆ
ನನ್ನ ಮನಸೇ ನನ್ನಿಂದೆ ಮರೆಯಾಯ್ತು....
ಮನಸುಗಳ ಹುಡುಕಿದೆ
ನನ್ನ ಮನಸೇ ನನ್ನಿಂದೆ ಮರೆಯಾಯ್ತು....
ಕೊನೇಗೆ ಕಾಣಿಸಿತು ಶೂನ್ಯ
ಇದೇ ಸರಿ ಎಂದು, ಶೂನ್ಯದಲ್ಲಿ
ಶೂನ್ಯನಾಗಿ ಲೀನನಾದೆ.........frown emoticon
ಇದೇ ಸರಿ ಎಂದು, ಶೂನ್ಯದಲ್ಲಿ
ಶೂನ್ಯನಾಗಿ ಲೀನನಾದೆ.........frown emoticon
ಹೀಗೊಂದು ಹಳೇ ನೆನಪು......
******************************
******************************
ಬೆಳಿಗ್ಗೆ ಶೇವ್ ಮಾಡುವಾಗ
ಕನ್ನಡಿ ಬಿದ್ದು ಚೂರು ಚೂರಾಯ್ತು.
ಕನ್ನಡಿ ಬಿದ್ದು ಚೂರು ಚೂರಾಯ್ತು.
ನನ್ನದೇ ಮುಖದ ಹತ್ತಾರು
ತುಣುಕುಗಳು ನನ್ನನ್ನು ಅಣಕಿಸಿದವು
ತುಣುಕುಗಳು ನನ್ನನ್ನು ಅಣಕಿಸಿದವು
ಹೆಂಡತಿ ಉವಾಚ "ಅಪಶಕುನ,
ಬೆಳಿಗ್ಗೆ, ಬೆಳಿಗ್ಗೆ, ಯಾರ ಮುಖ ನೋಡಿದಿರಿ?"
ಬೆಳಿಗ್ಗೆ, ಬೆಳಿಗ್ಗೆ, ಯಾರ ಮುಖ ನೋಡಿದಿರಿ?"
ಉತ್ತರ ಕೊಡದೆ ಸುಮ್ಮನಿದ್ದು,
ಒಡೆದ ಕನ್ನಡಿ ಚೂರುಗಳನ್ನು
ಒಗೆಯಲು ಒಟ್ಟು ಮಾಡತೊಡಗಿದೆ.
ಒಡೆದ ಕನ್ನಡಿ ಚೂರುಗಳನ್ನು
ಒಗೆಯಲು ಒಟ್ಟು ಮಾಡತೊಡಗಿದೆ.
ನೋಡಿದ್ದು ಅವಳದ್ದೇ ಮುಖ ಎಂದು
ಅವಳಿಗೇ ಮರೆತಂತಿತ್ತು.
ನನಗೆ ಹೇಳುವ ಧೈರ್ಯವಾಗಲಿಲ್ಲ.
ಅವಳಿಗೇ ಮರೆತಂತಿತ್ತು.
ನನಗೆ ಹೇಳುವ ಧೈರ್ಯವಾಗಲಿಲ್ಲ.
ಹಸಿ ಮಾಂಸ.
=============
=============
ಹಸಿ ಮಾಂಸದ ಬಯಕೆಯಿಂದ
ಹಾರಾಡುತ್ತಿವೆ ರಣಹದ್ದುಗಳು
ಕೆಂಪು ದೀಪದ ಸುತ್ತ,
ಹಾರಾಡುತ್ತಿವೆ ರಣಹದ್ದುಗಳು
ಕೆಂಪು ದೀಪದ ಸುತ್ತ,
ಬಲಿಗಾಗಿ ಕಾದಿವೆ
ಅರಳದ ಪುಷ್ಪಗಳು
ಕೆಂಪು ಮಂದ ಬೆಳಕಿನಲಿ
ಕೃತಕ ವೈಯಾರ ತೋರುತ.
ಅರಳದ ಪುಷ್ಪಗಳು
ಕೆಂಪು ಮಂದ ಬೆಳಕಿನಲಿ
ಕೃತಕ ವೈಯಾರ ತೋರುತ.
ಅರಳುವ ಮೊದಲೇ
ಹೊಸಗಿ ಹೋದ ಮೊಗ್ಗುಗಳು,
ಕಾರಿರುಳಿನ ಬಲಿ ಪಶುಗಳು.
ಹೊಸಗಿ ಹೋದ ಮೊಗ್ಗುಗಳು,
ಕಾರಿರುಳಿನ ಬಲಿ ಪಶುಗಳು.
ಕಣ್ಣುಗಳ ಮೂಲೆಯಲೆಲ್ಲೋ ಇವೆ
ಎಂದೂ ನನಸಾಗದ ಕನಸುಗಳು,
ಹಗಲೂ ಒಂದೇ ಇರುಳೂ ಒಂದೇ
ಮೃಗಗಳ ತೃಷೆ ತೀರಿಸುವ ಯಂತ್ರಗಳು.
ಎಂದೂ ನನಸಾಗದ ಕನಸುಗಳು,
ಹಗಲೂ ಒಂದೇ ಇರುಳೂ ಒಂದೇ
ಮೃಗಗಳ ತೃಷೆ ತೀರಿಸುವ ಯಂತ್ರಗಳು.
ಹುಟ್ಟುವ ಮುನ್ನವೇ ನಶಿಸಿದ ಬಾಳು,
ಎಂದೂ ಹೊಸತು ಬಾರದ ಪಾಡು,
ಎಂದಿನದೋ ಕೊನೆ,
ಈಗಲೇ ಆಗಿದೆ ಎಲ್ಲೆಡೆ ಕೊನೆ.
ಎಂದೂ ಹೊಸತು ಬಾರದ ಪಾಡು,
ಎಂದಿನದೋ ಕೊನೆ,
ಈಗಲೇ ಆಗಿದೆ ಎಲ್ಲೆಡೆ ಕೊನೆ.
ಬಂಧುಗಳೂ ಇಲ್ಲ, ಬಳಗವೂ ಇಲ್ಲ,
ಉಗಿದುಗಿದು ಹಲ್ಲು ಗಿಂಜುವ
ಮಾಮಾಗಳದೇ ರಾಜ್ಯವಿಲ್ಲಿ,
ಎಂದೂ ಕೊನೆಯಿಲ್ಲ ಈ ಬವಣೆಗಿಲ್ಲಿ.
ಉಗಿದುಗಿದು ಹಲ್ಲು ಗಿಂಜುವ
ಮಾಮಾಗಳದೇ ರಾಜ್ಯವಿಲ್ಲಿ,
ಎಂದೂ ಕೊನೆಯಿಲ್ಲ ಈ ಬವಣೆಗಿಲ್ಲಿ.
++++++++++++++++++++++
ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ
ಅಂತ ಒಂದು ಗಾದೆ ಇದೆ.
ಯಾರದೋ ಮೇಲಿನ ಸಿಟ್ಟು, ಅಸಹನೆಯನ್ನು
ಮತ್ಯಾರದ್ದೋ ಮೇಲೆ ತೋರಿಸುವುದು
ಕೆಲವರ ಸ್ವಭಾವ.
ಅಂತ ಒಂದು ಗಾದೆ ಇದೆ.
ಯಾರದೋ ಮೇಲಿನ ಸಿಟ್ಟು, ಅಸಹನೆಯನ್ನು
ಮತ್ಯಾರದ್ದೋ ಮೇಲೆ ತೋರಿಸುವುದು
ಕೆಲವರ ಸ್ವಭಾವ.
ಇದಕ್ಕೆ ಕಾರಣ ಏನೆಂದರೆ
ಅವರಿಗೆ ನಿಜವಾಗಿ ಸಿಟ್ಟು ಬೇಸರ ಪಡಿಸಿದವರನ್ನು
ಎದುರಿಸುವ ಶಕ್ತಿ ಇರುವುದಿಲ್ಲ, ಅಥವಾ ಪರಿಸ್ಥಿತಿಯ
ಒತ್ತಡದಿಂದ ಹಾಗೆ ಮಾಡಲು ಆಗುವುದಿಲ್ಲ.
ಅದಕ್ಕೇ ಬೇರೆಯವರ ಮೇಲೆ, ಅದೂ ದುರ್ಬಲರು,
ಹೆಚ್ಚಾಗಿ ಚಿಕ್ಕ ಮಕ್ಕಳ ಮೇಲೆ ಹರಿ ಹಾಯುತ್ತಾರೆ.
ಅವರಿಗೆ ನಿಜವಾಗಿ ಸಿಟ್ಟು ಬೇಸರ ಪಡಿಸಿದವರನ್ನು
ಎದುರಿಸುವ ಶಕ್ತಿ ಇರುವುದಿಲ್ಲ, ಅಥವಾ ಪರಿಸ್ಥಿತಿಯ
ಒತ್ತಡದಿಂದ ಹಾಗೆ ಮಾಡಲು ಆಗುವುದಿಲ್ಲ.
ಅದಕ್ಕೇ ಬೇರೆಯವರ ಮೇಲೆ, ಅದೂ ದುರ್ಬಲರು,
ಹೆಚ್ಚಾಗಿ ಚಿಕ್ಕ ಮಕ್ಕಳ ಮೇಲೆ ಹರಿ ಹಾಯುತ್ತಾರೆ.
ಇದು ಒಳ್ಳೆಯ ನಡವಳಿಕೆ ಅಲ್ಲ. ನಾವು ನಮ್ಮ
ಸಮಸ್ಯೆಗಳನ್ನು ಅದಕ್ಕೆ ಸಂಬಂಧ ಪಟ್ಟವರೊಡನೆಯೇ
ಬಗೆ ಹರಿಸಿಕೊಳ್ಳಬೇಕು, ಅದು ಬಿಟ್ಟು ಬೇರೆಯವರ
ಮೇಲೆ ಆ ಸಿಟ್ಟು, ಆಸಮಾಧಾನ ತೋರಿಸ ಬಾರದು.
ಹಾಗೆ ಮಾಡುವುದರಿಂದ ನಮ್ಮ ಮನಸ್ಸು ಸಹ ಒತ್ತಡಕ್ಕೆ ಒಳಗಾಗುತ್ತದೆ.
ಸಮಸ್ಯೆಗಳನ್ನು ಅದಕ್ಕೆ ಸಂಬಂಧ ಪಟ್ಟವರೊಡನೆಯೇ
ಬಗೆ ಹರಿಸಿಕೊಳ್ಳಬೇಕು, ಅದು ಬಿಟ್ಟು ಬೇರೆಯವರ
ಮೇಲೆ ಆ ಸಿಟ್ಟು, ಆಸಮಾಧಾನ ತೋರಿಸ ಬಾರದು.
ಹಾಗೆ ಮಾಡುವುದರಿಂದ ನಮ್ಮ ಮನಸ್ಸು ಸಹ ಒತ್ತಡಕ್ಕೆ ಒಳಗಾಗುತ್ತದೆ.
*****ದಾರ್ಶನಿಕ
ಪ್ರೇಮಿಗಳ ದಿನಾಚರಣೆ
++++++++++++++
ಅಲ್ಲಾ, ಎಲ್ಲಾ ದಿನಾಚರಣೆಗಳನ್ನು
ಮಾಡಿದ ಹಾಗೆ, ಪ್ರೇಮಿಗಳ
ದಿನಾಚರಣೆಯನ್ನೂ ಮಾಡಿದರೆ
ತಪ್ಪೇನು? ಬೇಕಾದರೆ, ಅದನ್ನು
ಪ್ರೇಮ, ಪ್ರೀತಿಯ ದಿನಾಚರಣೆ
ಎನ್ನೋಣವೇ?
++++++++++++++
ಅಲ್ಲಾ, ಎಲ್ಲಾ ದಿನಾಚರಣೆಗಳನ್ನು
ಮಾಡಿದ ಹಾಗೆ, ಪ್ರೇಮಿಗಳ
ದಿನಾಚರಣೆಯನ್ನೂ ಮಾಡಿದರೆ
ತಪ್ಪೇನು? ಬೇಕಾದರೆ, ಅದನ್ನು
ಪ್ರೇಮ, ಪ್ರೀತಿಯ ದಿನಾಚರಣೆ
ಎನ್ನೋಣವೇ?
ಎಲ್ಲಾ ಕಥ, ಕಾವ್ಯ,
ಕವನ, ಸಿನೆಮಾಗಳೆಲ್ಲ ಪ್ರೀತಿ,
ಪ್ರೇಮದ ಸುತ್ತಲೇ ಸುತ್ತುತ್ತಿರುವಾಗ
ಒಂದು ದಿನ ಇದನ್ನು ಸಭ್ಯತೆಯ
ಎಲ್ಲೆ ಮೀರದಂತೆ celebrate
ಮಾಡಿದರೆ ತಪ್ಪೇನು?
ಕವನ, ಸಿನೆಮಾಗಳೆಲ್ಲ ಪ್ರೀತಿ,
ಪ್ರೇಮದ ಸುತ್ತಲೇ ಸುತ್ತುತ್ತಿರುವಾಗ
ಒಂದು ದಿನ ಇದನ್ನು ಸಭ್ಯತೆಯ
ಎಲ್ಲೆ ಮೀರದಂತೆ celebrate
ಮಾಡಿದರೆ ತಪ್ಪೇನು?
ಪ್ರೀತಿ, ಪ್ರೇಮಗಳ ದಿನಾಚರಣೆ ಅಂದ
ಕೂಡಲೇ ಅದನ್ನು ಅಶ್ಲೀಲ
ಅನ್ನುವುದಾದರೆ, ತೆರೆಮರೆಯಲ್ಲಿ
ನಡೆಯುವ ಅಸಭ್ಯತೆ, ಅಶ್ಲೀಲತೆಗೆ
ಯಾರು ಕಡಿವಾಣ ಹಾಕುತ್ತಾರೆ?
ಕೂಡಲೇ ಅದನ್ನು ಅಶ್ಲೀಲ
ಅನ್ನುವುದಾದರೆ, ತೆರೆಮರೆಯಲ್ಲಿ
ನಡೆಯುವ ಅಸಭ್ಯತೆ, ಅಶ್ಲೀಲತೆಗೆ
ಯಾರು ಕಡಿವಾಣ ಹಾಕುತ್ತಾರೆ?
ಹಿತ ಮಿತವಾಗಿರಲಿ ಎನ್ನುವುದು
ಅಪೇಕ್ಷಣೀಯ, ಆದರೆ ಪೂರ್ತಿ
ನಿಷೇಧ ಸರಿಯಲ್ಲ ಎಂದು ನನ್ನ
ಅನಿಸಿಕೆ. ಸರಿಯೋ ತಪ್ಫೋ
ನೀವೇ ಹೇಳಬೇಕು......
ಅಪೇಕ್ಷಣೀಯ, ಆದರೆ ಪೂರ್ತಿ
ನಿಷೇಧ ಸರಿಯಲ್ಲ ಎಂದು ನನ್ನ
ಅನಿಸಿಕೆ. ಸರಿಯೋ ತಪ್ಫೋ
ನೀವೇ ಹೇಳಬೇಕು......
.*********
12.02.15
12.02.15
(ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯ ವಿಷಯದಲ್ಲಿ ನನ್ನದೊಂದು ಪೋಷ್ಟ್)
Tuesday, 29 March 2016
Sunday, 7 February 2016
ಚೆಂದಾ....ಚೆಂದ...smile emoticon
++++++++++++
++++++++++++
ಮುತ್ತುಗಳನ್ನು ಪೋಣಿಸಿ
ಮಾಲೆಯಾಗಿ ಧರಿಸಿದರೆ ಚೆಂದ,
ಮಾಲೆಯಾಗಿ ಧರಿಸಿದರೆ ಚೆಂದ,
ಸವಿಗನಸುಗಳನ್ನು ಎಚ್ಚರದಲಿ
ಮೆಲುಕಿ ಮುಗುಳ್ನಕ್ಕರೆ ಚೆಂದ,
ಮೆಲುಕಿ ಮುಗುಳ್ನಕ್ಕರೆ ಚೆಂದ,
ಕಹಿ ಸ್ವಪ್ನಗಳನು ಮರೆತು
ಮರೆಗುಳಿಯಾದರೇನೇ ಚೆಂದ,
ಮರೆಗುಳಿಯಾದರೇನೇ ಚೆಂದ,
ನಗುವಿರುವ ನಿಮ್ಮದೇ ಮುಖ
ನಿಮಗೇ ಒಂದು ಚೆಂದ,
ನಿಮಗೇ ಒಂದು ಚೆಂದ,
ಹಸು ಮಗುವಿನ ಗಲ್ಲ ಸವರಿದಾಗ
ಆ ಬೊಚ್ಚು ಬಾಯ ನಗುವಿನ್ನೂ ಚೆಂದ,
ಆ ಬೊಚ್ಚು ಬಾಯ ನಗುವಿನ್ನೂ ಚೆಂದ,
ನಲ್ಲೆ ನಗುತ್ತ ಊಟ ಬಡಿಸಿದರೆ
ಆ ಸವಿಯದಿನ್ನೊಂದು ಚೆಂದ,
ಆ ಸವಿಯದಿನ್ನೊಂದು ಚೆಂದ,
ದುಃಖಿಯ ಮಖದಲ್ಲಿ
ನಗು ತರಿಸಿ, ಅದಿನ್ನೂ ಚೆಂದ,
ನಗು ತರಿಸಿ, ಅದಿನ್ನೂ ಚೆಂದ,
ಬಳುಕು ಸಾಗುವ ನೀರೆಗೊಂದು
ಮೆಚ್ಚುಗೆಯ ಕಳ್ಳ ನೋಟವೂ ಚೆಂದ
ಮೆಚ್ಚುಗೆಯ ಕಳ್ಳ ನೋಟವೂ ಚೆಂದ
ತಾಯಿಯ ಹಿಂದೆ ಬಾಲ ನಿಮಿರಿಸಿ
ಕುಣಿವ ಹಸುಕರುವಿನ ಕುಣಿತ ಚೆಂದ
ಕುಣಿವ ಹಸುಕರುವಿನ ಕುಣಿತ ಚೆಂದ
ಹೀಗಿದ್ದರೆ ನಮ್ಮ ಕಣ್ಣುಗಳೇ ಚೆಂದ
ಈ ನಮ್ಮ ನಶ್ವರ ಜೀವನ ಬಲು ಚೆಂದ.
ಈ ನಮ್ಮ ನಶ್ವರ ಜೀವನ ಬಲು ಚೆಂದ.
******************
ಸುಖದ ಚಿಂತೆ
==========
ದೃಷ್ಟಿ ಮಂಜಾದಾಗ
ಕೈ ಹಿಡಿದು
ಮುನ್ನಡೆಸಿದ ಮಗ,
==========
ದೃಷ್ಟಿ ಮಂಜಾದಾಗ
ಕೈ ಹಿಡಿದು
ಮುನ್ನಡೆಸಿದ ಮಗ,
ಬೆನ್ನು ತಟ್ಟಿ
ತಲೆ ನೇವರಿಸಿ
ಶಸ್ತ್ರ ಚಿಕಿತ್ಸೆಯಲ್ಲೂ
ಸಹಕರಿಸಿ
ಧೈರ್ಯ ತುಂಬಿದ
ನನ್ನ ಪ್ರಿಯ ಬಹು,
ತಲೆ ನೇವರಿಸಿ
ಶಸ್ತ್ರ ಚಿಕಿತ್ಸೆಯಲ್ಲೂ
ಸಹಕರಿಸಿ
ಧೈರ್ಯ ತುಂಬಿದ
ನನ್ನ ಪ್ರಿಯ ಬಹು,
ಬೆಳಗ್ಗೆ ಶಾಲೆಗೆ
ಓಡುವ ಅವಸರದಲ್ಲೂ,
ಓಡಿಬಂದು
ಕುತ್ತಿಗೆ ಬಳಸಿ
ಗಲ್ಲಕ್ಕೆ ಮುತ್ತಿಟ್ಟು
Best of luck, ಅಜ್ಜಾ,
ಎಂದುಸಿರಿದ ಮೊಮ್ಮಕ್ಕಳು,
ಓಡುವ ಅವಸರದಲ್ಲೂ,
ಓಡಿಬಂದು
ಕುತ್ತಿಗೆ ಬಳಸಿ
ಗಲ್ಲಕ್ಕೆ ಮುತ್ತಿಟ್ಟು
Best of luck, ಅಜ್ಜಾ,
ಎಂದುಸಿರಿದ ಮೊಮ್ಮಕ್ಕಳು,
ಮುಂದೆಲ್ಲಾದರು
ನಾನು ಅಂಧನಾದರೂ
ನನಗೆ ನೋಡಲು
ಹಲವು ಜೋಡಿ
ಪ್ರೀತಿಯ ಕಂಗಳಿವೆ,
ನಾನು ಅಂಧನಾದರೂ
ನನಗೆ ನೋಡಲು
ಹಲವು ಜೋಡಿ
ಪ್ರೀತಿಯ ಕಂಗಳಿವೆ,
ಹಿಡಿದು ನಡೆಸಲು
ಹಲವು ಜೋಡಿ
ಕೈಗಳವೆ, ಎಂಬ
ಸುಖದ ಚಿಂತೆ
ನನ್ನ ಮೈಮರೆಸಿ
ಸಂತೈಸಿ ಓಲೈಸಿತು.
ಹಲವು ಜೋಡಿ
ಕೈಗಳವೆ, ಎಂಬ
ಸುಖದ ಚಿಂತೆ
ನನ್ನ ಮೈಮರೆಸಿ
ಸಂತೈಸಿ ಓಲೈಸಿತು.
29.01.2015
ಪ್ರಾರ್ಥನೆ.
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
"ದೇವರೇ, ಕೊನೇ ತನಕ ಕಣ್ಣು ಕೈ ಕಾಲುಗಳ
ಸುಖ ಕೊಟ್ಟು ಕಾಪಾಡಪ್ಪಾ"
ಸುಖ ಕೊಟ್ಟು ಕಾಪಾಡಪ್ಪಾ"
ಗಮನಿಸಿ, ಈ ಸರಳ ಪ್ರಾರ್ಥನೆಯಲ್ಲಿ "ಕಿವಿ"
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣದಾದರೆ, ಕೈ ಕಾಲುಗಳು
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಆದರೆ, ಕಿವಿ ಕೇಳಿಸದಿದ್ದರೆ ಅಂತಹ ತೊಂದರೆಯೇನೂ
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... smile emoticon
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... smile emoticon
ಹೀಗೆ, ಹಿರಿಯರು ಮಾಡುತ್ತಿದ್ದ ಈ ಸರಳವಾದ
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
Subscribe to:
Posts (Atom)