Sunday, 27 December 2015

ಅತ್ತೆ ಮತ್ತು ಮಾವನಿಗೆ ರಾಹು ಕೇತುಗಳು ಅಂತಲೂ ಹೇಳ್ತಾರೆ...... smile emoticon ಹುಡುಗಿಗೆ ಮದುವೆ ಮಾಡುವಾಗ, ರಾಹು ಕೇತುಗಳು ಇದ್ದಾರಾ ಎಂದು ಮೊದಲು ವಿಚಾರಿಸುತ್ತಾರಂತೆ. ಅವೆರಡು ಇಲ್ಲದಿದ್ದರೆ ಅದು ಉತ್ತಮ ಸಂಬಂಧ..... smile emoticon

ಹೀಗೊಂದು Joy ride......... smile emoticon
ಗೆಳೆಯ, Gurubasav Sindoor, ಅವರು ವರ್ಷದ ಹಿಂದೆ ಪೋಷ್ಟ್ ಮಾಡಿದ್ದ
ಒಂದು ಸರಳ ಸುಂದರವಾದ ಪ್ರೇಮ ಕವನ. ಯಾರು ಬೇಕಾದರೂ ಗುನುಗುನಿಸ
ಬಹುದಾದಂಥ, ಬಹುಶಃ ರಾಗ ಸಂಯೊಜನೆ ಮಾಡಿದರೆ ಚೆನ್ನಾಗಿ ಹಾಡಲೂ ಬರುವಂಥ, ಸುಂದರ ಶಬ್ದಾರ್ಥದ ಕವಿತೆ. ನೀವೂ ಓದಿ ಖುಶಿ ಪಡಿ ಎಂದು ಇಲ್ಲಿ copy/paste ಮಾಡಿದ್ದೇನೆ...... (ಅವರ ಅನುಮತಿ ಕೇಳಿಲ್ಲ..... smile emoticon )
ಭಾಷೆ
**************
ನಾನೊಲ್ಲೆ ನಾನೊಲ್ಲೆ
ಎನ್ನದಿರು ನಲ್ಲೆ
ನಿನ್ನ ಬೇಕು ಬೇಡಗಳ
ನಾನರಿಯ ಬಲ್ಲೆ
ಸುಳಿಯುತಿರೆ ಬಳಿ ಬಳಿಗೆ
ಮುತ್ತಿನ ಸರಹೊತ್ತು
ಕೆನ್ನೆ,ಕೆಂದುಟಿಗಳಿಗೆ
ಮುತ್ತು ನೀಡುವ ಹೊತ್ತು
ಮುಡಿದು ಬಂದರೆ ನೀನು
ಜಡೆ ತುಂಬ ಮಲ್ಲಿಗೆ
ಮಧುವ ಹೀರುವೆ ನಾನು
ಆಲಂಗಿಸಿ ಮೆಲ್ಲಗೆ
ಹಾಲು ಬಟ್ಟಲು ತುಂಬಿ
ತಂದ ಪ್ರೀತಿಯ ಗಳಿಗೆ
ಸಮಪಾಲು ಸವಿಬಾಳು
ನನ್ನ ಪ್ರೀತಿಯ ಗಿಳಿಗೆ
ಮುದುಡಿ ಕುಳಿತರೆ ನಲ್ಲೆ
ಮುಖ ಕಮಲ ಬಾಡಿ
ರಮಿಸಿ ಉಣಿಸುವೆನಲ್ಲ
ಪ್ರೇಮ ಗೀತೆಯ ಹಾಡಿ
ಬೇಡವೆಂದರೆ ಬೇಕು
ನಿನ್ನ ಹೃದಯದ ಭಾಷೆ
ಬೇಡವೆಂದರೆ ಸಾಕು
ಈಡೇರಿಸುವೆ ನಿನ್ನ ಮನದಾಸೆ.
*************
ಒಂಟಿ.
*******
ಎಲ್ಲವೂ ಹೋಗಿ,
ಎಲ್ಲರೂ ಹೋಗಿ,
ನಾನೊಬ್ಬನೇ
ಈ ಬಯಲುಗಾಡಿನಲ್ಲಿ,
ಈ ಕಸದ ರಾಶಿಯಲ್ಲಿ,
ಒಂಟಿ ನಿಂತಿರುವೆ.
ನನ್ನನ್ನೂ ಎಂದು
ಯಾವಾಗ ಬೀಳಿಸುವರೋ,
ಅಥವಾ ನಾನೇ ಯಾವಾಗ
ಬೀಳುವೆನೋ ತಿಳಿಯೆ.
**********************


ನನ್ನ ಸ್ನೇಹಿತ Anand Honnaya ಪೋಷ್ಟ್ ಮಾಡಿದ ಒಂದು
ಅಪರೂಪದ ಚಿತ್ರ....... ಎಷ್ಟು ಕ್ಯೂಟ್ ಇದೆ ನೋಡಿ. Step by
step, ಲುಂಗಿ ಕಟ್ಟಿ ಕೊಳ್ಳುವ ಮಗು.....
ಧ್ಯಾನಕ್ಕೆ
ಈ ದಂಡನೆ
ಬೇಕೇ.?
ಹಿಮದಿಂದ
ತನು ತಂಪಾದೀತು,
ಮನ ತಂಪಾದೇತೇ?
ಇರುವಲ್ಲಿ ಇಹದ ಧ್ಯಾನ
ಮಾಡದೆ,ಬಾರದಲ್ಲಿ ಪರದ
ಧ್ಯಾನದಿಂದೇನು ಫಲ,
ಬಿಸಿಲಿಗೆ ಹಿಮ ಕರಗಿದರೆ
ಕೂತ ಜಾಗವೇ
ಅಗದೇ ಅಲ್ಲೋಲ ಕಲ್ಲೋಲ?
ಒಂದಿಲ್ಲೊಮ್ಮೆ ಮರಳಿ
ಮಣ್ಣಿಗೆ ಸೇರುವ ಈ ಶರೀರಕ್ಕೆ
ಈಗಲೇ ಈ ದಂಡನೆಯೇಕೆ?
ಭಗವಂತ ಕೊಟ್ಟ ಈ ಬಾಳು
ಬಾಳಲು ಅಂಜಿ
ಈ ಪಲಾಯನವೇಕೇ?
ಕೊಡವಿ ಝಾಡಿಸಿ
ಎದ್ದೇಳು ಮೈ ಕೊಡವಿ,
ಎದುರಿಗಿದೆ ಬಾಳೂ... ಎದುರಿಸು.
ಇಲ್ಲ್ಲೊಂದು ಜೋಕ್. ಇದು ಬರೇ ಜೋಕಲ್ಲ. ಚಿಕ್ಕ ಮಕ್ಕಳಿರುವ ತಂದೆ ತಾಯಿಯರಿಗೆ ಒಂದು ಮನೆ ಪಾಠ ಸಹ................. smile emoticon
******************
ಟೀಚರ್ :- ನೀನು ಯಾಕೆ ಇವತ್ತು ತಡವಾಗಿ ಬಂದೆ?
ಮಗು :- ಪಪ್ಪ ಮತ್ತು ಮಮ್ಮಿ ಜಗಳ ಆಡ್ತಾ ಇದ್ದರು.
ಟೀಚರ್:- ಇದೆಲ್ಲ ಸುಳ್ಳು ಕಾರಣ ಕೊಡ ಬೇಡ......
ಮಗು :- ಇಲ್ಲಾ ಟೀಚರ್, ಈ ಜಗಳದಲ್ಲಿ ನನ್ನ ಒಂದು ಬೂಟು
ಅಮ್ಮನ ಕೈಯಲ್ಲಿತ್ತು, ಇನ್ನೊಂದು ಪಪ್ಪನ ಕೈಯಲ್ಲಿತ್ತು.
*****************
ಚಿಕ್ಕ ಮಕ್ಕಳಿರುವ ತಂದೆ ತಾಯಂದಿರು ಹೀಗೆ ಮಾಡಬೇಡಿ. ನಿಮ್ಮ
ಜಗಳ, ಅಭಿಪ್ರಾಯ ಭೇದಗಳೇನೇ ಇದ್ದರೂ, ಅವನ್ನು ಮಕ್ಕಳು
ಎದುರಿಗೆ ಇಲ್ಲದಾಗ ಬಗೆ ಹರಿಸಿ ಕೊಳ್ಳಿ.
ಸ್ನೆಹಿತರೆಲ್ಲರಿಗೂ ಶುಭೋದಯ........ಈ ದಿನ ನಿಮಗೆಲ್ಲರಿಗೂ
ಶುಭವಾಗಿರಲಿ.........😊