Sunday, 27 December 2015

ಗೆಳೆಯ, Gurubasav Sindoor, ಅವರು ವರ್ಷದ ಹಿಂದೆ ಪೋಷ್ಟ್ ಮಾಡಿದ್ದ
ಒಂದು ಸರಳ ಸುಂದರವಾದ ಪ್ರೇಮ ಕವನ. ಯಾರು ಬೇಕಾದರೂ ಗುನುಗುನಿಸ
ಬಹುದಾದಂಥ, ಬಹುಶಃ ರಾಗ ಸಂಯೊಜನೆ ಮಾಡಿದರೆ ಚೆನ್ನಾಗಿ ಹಾಡಲೂ ಬರುವಂಥ, ಸುಂದರ ಶಬ್ದಾರ್ಥದ ಕವಿತೆ. ನೀವೂ ಓದಿ ಖುಶಿ ಪಡಿ ಎಂದು ಇಲ್ಲಿ copy/paste ಮಾಡಿದ್ದೇನೆ...... (ಅವರ ಅನುಮತಿ ಕೇಳಿಲ್ಲ..... smile emoticon )
ಭಾಷೆ
**************
ನಾನೊಲ್ಲೆ ನಾನೊಲ್ಲೆ
ಎನ್ನದಿರು ನಲ್ಲೆ
ನಿನ್ನ ಬೇಕು ಬೇಡಗಳ
ನಾನರಿಯ ಬಲ್ಲೆ
ಸುಳಿಯುತಿರೆ ಬಳಿ ಬಳಿಗೆ
ಮುತ್ತಿನ ಸರಹೊತ್ತು
ಕೆನ್ನೆ,ಕೆಂದುಟಿಗಳಿಗೆ
ಮುತ್ತು ನೀಡುವ ಹೊತ್ತು
ಮುಡಿದು ಬಂದರೆ ನೀನು
ಜಡೆ ತುಂಬ ಮಲ್ಲಿಗೆ
ಮಧುವ ಹೀರುವೆ ನಾನು
ಆಲಂಗಿಸಿ ಮೆಲ್ಲಗೆ
ಹಾಲು ಬಟ್ಟಲು ತುಂಬಿ
ತಂದ ಪ್ರೀತಿಯ ಗಳಿಗೆ
ಸಮಪಾಲು ಸವಿಬಾಳು
ನನ್ನ ಪ್ರೀತಿಯ ಗಿಳಿಗೆ
ಮುದುಡಿ ಕುಳಿತರೆ ನಲ್ಲೆ
ಮುಖ ಕಮಲ ಬಾಡಿ
ರಮಿಸಿ ಉಣಿಸುವೆನಲ್ಲ
ಪ್ರೇಮ ಗೀತೆಯ ಹಾಡಿ
ಬೇಡವೆಂದರೆ ಬೇಕು
ನಿನ್ನ ಹೃದಯದ ಭಾಷೆ
ಬೇಡವೆಂದರೆ ಸಾಕು
ಈಡೇರಿಸುವೆ ನಿನ್ನ ಮನದಾಸೆ.
*************

No comments:

Post a Comment