Sunday, 27 December 2015

ಧ್ಯಾನಕ್ಕೆ
ಈ ದಂಡನೆ
ಬೇಕೇ.?
ಹಿಮದಿಂದ
ತನು ತಂಪಾದೀತು,
ಮನ ತಂಪಾದೇತೇ?
ಇರುವಲ್ಲಿ ಇಹದ ಧ್ಯಾನ
ಮಾಡದೆ,ಬಾರದಲ್ಲಿ ಪರದ
ಧ್ಯಾನದಿಂದೇನು ಫಲ,
ಬಿಸಿಲಿಗೆ ಹಿಮ ಕರಗಿದರೆ
ಕೂತ ಜಾಗವೇ
ಅಗದೇ ಅಲ್ಲೋಲ ಕಲ್ಲೋಲ?
ಒಂದಿಲ್ಲೊಮ್ಮೆ ಮರಳಿ
ಮಣ್ಣಿಗೆ ಸೇರುವ ಈ ಶರೀರಕ್ಕೆ
ಈಗಲೇ ಈ ದಂಡನೆಯೇಕೆ?
ಭಗವಂತ ಕೊಟ್ಟ ಈ ಬಾಳು
ಬಾಳಲು ಅಂಜಿ
ಈ ಪಲಾಯನವೇಕೇ?
ಕೊಡವಿ ಝಾಡಿಸಿ
ಎದ್ದೇಳು ಮೈ ಕೊಡವಿ,
ಎದುರಿಗಿದೆ ಬಾಳೂ... ಎದುರಿಸು.

No comments:

Post a Comment