Monday, 24 April 2017

ಮುದ್ದು ಪಾದಗಳು

ಈ ಹಸು ಕಂದನ
ಮುದ್ದು ಪಾದಗಳು,
ನಸುಗೆಂಪು ಬಣ್ಣದ
ನಳ ನಳಿಸುವ ಪುಷ್ಪಗಳು

ಬೆಳ್ಳಿ ಕಾಲ್ಗಡಗಗಳೆ
ಶೃಂಗಾರದೊಡವೆಗಳು,
ಇನ್ನೂ ಭೂಮಿಯನು ಸೋಕಿಲ್ಲ
ಸ್ವಲ್ಪವೂ ಮಲಿನವಾಗಿಲ್ಲ,

ಅಮ್ಮನಪ್ಪುಗೆಯಲ್ಲಿ,
ಬೆಚ್ಚಗಿವೆ ಇನ್ನೂ,
ಭೂದೇವಿ ಕಾಯುತಿಹಳು
ಎಂದು ಮುಡಿಯಲಿ
ಈ ಹೂಗಳನೆಂದು.

ಬಾಳು ಬೆಳಗಲಿ ನಿಂದು,
ನಾನು ಕಾಯಿತಿಹೆ
ತವಕದಲಿ ನಿಂದು,
ನಿನ್ನನೆಂದು ಕೈ ಹಿಡಿದು
ನಡೆಸಿ ಧನ್ಯನಾಗಲಿಯೆಂದು.

23.04.2015

(ಚಿತ್ರ ಕೃಪೆ :  A Facebook Friend)

(ಫೇಸ್ ಬುಕ್ ನೆನಪಿಸಿದ ಹಳೆಯ ಕೆಲವು ಸಾಲುಗಳು...... :-) ನನಗೇ ಚೆನ್ನಾಗಿ ಬರೆದಿದ್ದೇನೋ ಅನ್ನಿಸಿದ್ದರಿಂದ, ಇನ್ನೊಮ್ಮೆ ಪೋಷ್ಟ್ ಮಾಡೋಣ ಅಂತ ಮಾಡಿದೆ... :-)

No comments:

Post a Comment